ಜಾರಕಿಹೊಳಿ ಬ್ರದರ್ಸ್ ಗೆ ಬಹಿರಂಗ ಖಡಕ್ ಎಚ್ಚರಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣವನ್ನು ಸೃಷ್ಟಿಸುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಬ್ರದರ್ಸ್ ನಡುವಿನ  ಹೋರಾಟ  ಈಗ ಬಹಿರಂಗ ಯುದ್ಧ ವಾಗಿ ಮಾರ್ಪಟ್ಟಿದೆ.

ಕಾಂಗ್ರೆಸ್ ನಾಯಕರಿಂದ ಸಂಧಾನ ನಡೆಸಿದ ನಂತರ ಅವಿರೋಧವಾಗಿ ಬ್ಯಾಂಕಿನ ಅಧಿಕಾರ ಪಡೆದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಂಬಲಿಗರು  ಸಾಮಾನ್ಯದಂತೆ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಇತ್ತ ಜಾರಕಿಹೊಳಿ ಬ್ರದರ್ಸ್ ರವರು ಮಾತ್ರ ಸಂದಾಯ ದಿಂದಲೂ ಸಹ ತೃಪ್ತಿ ಗೊಂಡಂತೆ ಕಾಣುತ್ತಿಲ್ಲ.

ಒಂದು ಕಡೆ ಜಾರಕಿಹೊಳಿ ಬ್ರದರ್ಸ್ ಅವರು ಸರ್ಕಾರ ಬೀಳಿಸುವ ಯೋಜನೆಯಲ್ಲಿ ತೊಡಗಿದ್ದರೆ, ಲಕ್ಷ್ಮಿ ಹೆಬ್ಬಾಳ್ಕರ್ ರವರು ಬಹಿರಂಗವಾಗಿ ಜಾರಕಿಹೊಳಿ  ಬ್ರದರ್ಸ್ ಗೆ ಎಚ್ಚರಿಕೆ ನೀಡಿದ್ದು ಜಾರಕಿಹೊಳಿ ಬ್ರದರ್ಸ್ ರವರಿಗೆ ಮತ್ತಷ್ಟು ಕೋಪ ಬಂದಿದೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ರವರು  ಇಂದಿನ ಚುನಾವಣೆಗಳೇ ಯುದ್ಧವಾಗಿ ಮಾರ್ಪಟ್ಟಿವೆ, ನನ್ನ ಕ್ಷೇತ್ರದ ವಿಚಾರಕ್ಕೆ ಯಾರೇ ಬಂದರೂ ನಾನು ಸುಮ್ಮನೆ ಕೂರುವುದಿಲ್ಲ   ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು ಜಾರಕಿಹೊಳಿ ಬ್ರದರ್ಸ್ಗೆ ರಾಜ್ಯರಾಜಕಾರಣದಲ್ಲಿ ಮತ್ತಷ್ಟು ಇರಿಸುಮುರಿಸು ಉಂಟಾಗಿದೆ.

Post Author: Ravi Yadav