ಮೊಗಲರ ದೌಲತ್ತು ತೋರಿಸುತ್ತಿರುವರೇ ಜಮೀರ್? ಎಲ್ಲಿದ್ದಾರೆ ಬುದ್ಧಿಜೀವಿಗಳು ಮತ್ತು ಮಾಧ್ಯಮಗಳು

ಮೊಗಲರ ದೌಲತ್ತು ತೋರಿಸುತ್ತಿರುವರೇ ಜಮೀರ್? ಎಲ್ಲಿದ್ದಾರೆ ಬುದ್ಧಿಜೀವಿಗಳು ಮತ್ತು ಮಾಧ್ಯಮಗಳು

0

ಭಾರತದಲ್ಲಿ ಬುದ್ಧಿಜೀವಿಗಳಿಗೆ ಎಲ್ಲಿಲ್ಲದ ಸ್ಥಾನವನ್ನು ನೀಡಲಾಗಿದೆ, ಕೆಲವರಂತೂ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಿದ್ದರೂ  ಸುಮ್ಮನೆ  ಬಂದು  ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟಿವಿಗಳಲ್ಲಿ ನಾವು ಜನಪರ ಚಿಂತಕರು ಎಂದು ಕಥೆಗಳು ಹೇಳುತ್ತಿರುತ್ತಾರೆ.

ಇದೇ ತರದ ಮಾತುಗಳನ್ನು ಬೇರೆ ಯಾರಾದರೂ ಮಾತನಾಡಿದ್ದರೆ ಬುದ್ಧಿಜೀವಿಗಳು ಮಾಧ್ಯಮಗಳು ಎಲ್ಲರೂ ಸೇರಿ ಅದನ್ನು ದೊಡ್ಡ ವಿಷಯವನ್ನಾಗಿ ಮಾಡಿ ಗಂಟೆಗಟ್ಟಲೆ ಮುಂದೆ ಕೂತು ಚರ್ಚಿಸಿ ವಿವಾದಾತ್ಮಕ ಹೇಳಿಕೆ ಎಂದು ಬಿಂಬಿಸಿ ಕೆಲವು ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಕೇಸುಗಳನ್ನು ಸಹ ದಾಖಲು ಮಾಡಿದ್ದಾರೆ.

ಅದಕ್ಕೆ ಉತ್ತಮ ಉದಾಹರಣೆ ಎಂದರೆ ಬಿಜೆಪಿ ಸಂಸದರಾದ ಅನಂತ್ ಕುಮಾರ್ ಹೆಗಡೆ ರವರು, ಹೆಗಡೆ ಅವರಿಗೆ ಬಹಳ ತಿಳಿದಿರುವ ವಿಷಯಗಳು ಇವೆ, ಅವುಗಳನ್ನು ಅವರು ಯಾರಿಗೂ ಹೆದರದೆ ಇರುವ ಸತ್ಯವನ್ನು ಇರುವ ಹಾಗೆ ಜನರ ಮುಂದಿಡುತ್ತಾರೆ. ಅದನ್ನೇ ಈ ಮಾಧ್ಯಮಗಳು ವಿವಾದಾತ್ಮಕ ಹೇಳಿಕೆ ಎಂದು ಬಿಂಬಿಸಿ ರುತ್ತಾರೆ ಆದರೆ ಈಗ ಮಾಧ್ಯಮಗಳು ಎಲ್ಲಿದ್ದಾರೆ ಎಂಬುದು ನಮ್ಮ ಪ್ರಶ್ನೆ.

ಅಷ್ಟಕ್ಕೂ ನಡೆದಿರುವುದೇನು ಎಂಬುದನ್ನು ತಿಳಿಯಲು ಕೆಳಗಡೆ ಓದಿ.

ರಾಜ್ಯದಲ್ಲಿ ಒಂದು ಉನ್ನತ ಹುದ್ದೆಯಲ್ಲಿರುವ ಜಮೀರ್ ಅವರು ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ  ಇಂದು ಧರ್ಮವನ್ನು ಆಧರಿಸಿ ರಾಜಕಾರಣ ಮಾಡಿದ್ದಾರೆ. ಅವರ ಮಾತುಗಳನ್ನು ನೀವೇ ಕೇಳಿ

ಬಿಜೆಪಿಗೆ ಮತ ನೀಡುವವರು ಮುಸ್ಲಿಮರಲ್ಲ, ಮುಸ್ಲಿಮರು ಬಿಜೆಪಿಗೆ ಮತ ಹಾಕುವುದು ಅಲ್ಲ ಅದರ ಬಗ್ಗೆ ಆಲೋಚನೆ ಸಹ ಮಾಡಬಾರದು. ಬಿಜೆಪಿ ಪಕ್ಷವು ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತದೆ. ಒಂದು ವೇಳೆ ಬಿಜೆಪಿ ಪಕ್ಷದಿಂದ ಯಾವುದಾದರೂ ಮುಸ್ಲಿಂ ಸ್ಪರ್ಧೆಯು ಸ್ಪರ್ಧಿಸಿದಲ್ಲಿ ನಾನು ಅವರನ್ನು ಮುಸ್ಲಿಂ ಎಂದು ಒಪ್ಪಿಕೊಳ್ಳುವುದಿಲ್ಲ ಆತನನ್ನು ನಾನು ನಂಬುವುದು ಇಲ್ಲ, ಆತನನ್ನು ಅಲ್ಲಾ ಸಹ ನೋಡುತ್ತಿರುತ್ತಾನೆ, ಆತ ನಿಜವಾದ ಮುಸ್ಲಿಮ್ ಆಗಿದ್ದರೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಳ್ಳುತ್ತಾನೆ ಎಂದು ಮನ ಬಂದಂತೆ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ್ದಾರೆ.

ಇವರ ಈ ಮಾತುಗಳು ಯಾವ ಮಾಧ್ಯಮಗಳ ಕಣ್ಣಿಗೂ ಕಾಣಿಸುವುದಿಲ್ಲವೇ? ಅಥವಾ ಯಾವುದೇ ಬುದ್ಧಿಜೀವಿಗಳು ಟಿವಿ ನೋಡುವುದನ್ನು ಬಿಟ್ಟಿದ್ದಾರೆಯೇ?  ಎಲ್ಲಿ ಹೋಗಿದ್ದೀರಿ ಈಗ ಮಾಡಿ ಗಂಟೆಗಟ್ಟಲೆ ಚರ್ಚೆ.ಇದು ಭವ್ಯ ಭಾರತ ಇದೇ ಮಾತನ್ನು ಹಿಂದುಗಳ ಪರವಾಗಿ ಅನಂತ್ ಕುಮಾರ್ ಹೆಗಡೆ ಅವರು ಹೇಳಿದ್ದರೆ ನಿಮ್ಮ ಚಾನಲ್ ಗಳಲ್ಲಿ ಅದನ್ನು ತೋರಿಸುತ್ತಿರಲಿಲ್ಲವೇ?

ನಿಮ್ಮ ಪ್ರಕಾರ ಅಧಿಕಾರದಲ್ಲಿ ಇರುವ ಪಕ್ಷದ ಸಂಸದರು ಮಾತನಾಡಿದರೆ ಮಾತ್ರ ವಿವಾದಾತ್ಮಕ ಹೇಳಿಕೆ ಯಾಗುತ್ತದೆಯೇ?  ಉತ್ತರಿಸಿ