ರಾಜಕೀಯ ನಿವೃತ್ತಿ ಮತ್ತು ರಾಜೀನಾಮೆಗೆ ಸಿದ್ಧ – ಸಿಎಂ ಅವರಿಗೆ ಬಹಿರಂಗ ಸವಾಲು ಎಸೆದ ರಾಮುಲು

0

ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದಾಗಿನಿಂದಲೂ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಸಾಲ ಮನ್ನಾ ಮಾಡುವಂತೆ ಪ್ರತಿಪಕ್ಷಗಳು  ಒತ್ತಾಯಿಸುತ್ತಿವೆ.  ಆದರೆ ಅದ್ಯಾಕೋ ಕುಮಾರಸ್ವಾಮಿ ಅವರು ಅದಕ್ಕೆ ಮನಸ್ಸು ಮಾಡಿದಂತೆ ಕಾಣುತ್ತಿಲ್ಲ.

ಆರ್ ಬಿ ಐ ಬ್ಯಾಂಕ್ ನ ಒಪ್ಪಿಗೆ ಪಡೆಯದೆ ಸಾಲ ಮನ್ನಾ ಮಾಡಿದ್ದೇವೆ ಎಂದು ಬಜೆಟ್ ನಲ್ಲಿ ಘೋಷಿಸಿ ಸಾಲ ಮನ್ನಾ ಮಾಡಿದ್ದೇವೆ ಎಂದು  ಹೇಳಿಕೊಳ್ಳುತ್ತಿದ್ದಾರೆ. ಜೆಡಿಎಸ್ ಪಕ್ಷದ ಬೆಂಬಲಿಗರು ಯಾವುದೇ ದಾಖಲೆಗಳಿಲ್ಲದೆ ಸರ್ಕಾರ ಸಾಲ ಮನ್ನಾ ಮಾಡಿದೆ ಎಂದು ಬೀಗುತ್ತಿದ್ದಾರೆ . ಆದರೆ ಇದುವರೆಗೂ ಯಾವೊಬ್ಬ ರೈತನ ಸಾಲವು ಮನ್ನವಾಗಿಲ್ಲ.

ಇದನ್ನು ತೀವ್ರವಾಗಿ ಖಂಡಿಸುತ್ತಿರುವ ವಿರೋಧ ಪಕ್ಷಗಳು ಸಾಲ ಮನ್ನಾ ಮಾಡುವಂತೆ ಕುಮಾರಸ್ವಾಮಿರವರ ಹೆಗಲೇರಿ ಕುಳಿತಿವೆ. ಆದರೆ ವಾಸ್ತವ್ಯ ಗಮನಿಸಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಮೊದಲೇ ಹದಗೆಟ್ಟಿದೆ ಇನ್ನು ಸಾಲ ಮನ್ನಾ  ಮಾಡಿದರೆ ರಾಜ್ಯವು ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತದೆ. ಆದರೆ ಇದ್ಯಾವುದನ್ನು ಯೋಚನೆ ಮಾಡದ ಕುಮಾರಸ್ವಾಮಿ ರವರು ಸಾಲ ಮನ್ನಾ ಮಾಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡಿದ್ದಲ್ಲದೆ ಆರ್ ಬಿ ಐ ಬ್ಯಾಂಕಿನ ಸಮ್ಮತಿ ಇಲ್ಲದೆ ಸಾಲ ಮನ್ನಾ ಮಾಡಿದ್ದೇವೆ ಎಂದು ಘೋಷಿಸಿದ್ದಾರೆ.

ಇದನ್ನು ತೀವ್ರವಾಗಿ ಖಂಡಿಸುತ್ತಿರುವ ಶ್ರೀರಾಮುಲು ರವರು ಒಂದು ವೇಳೆ ರಾಜ್ಯದ ಯಾವ ಒಬ್ಬ ರೈತನ ಸಾಲವು ಇದುವರೆಗೂ ಮನ್ನಾ ಹಾಗಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧ, ಯಾವುದೇ ಬ್ಯಾಂಕಿನ ಅಧಿಕಾರಿಗಳ ಜೊತೆ ಚರ್ಚಿಸದೆ ಕುಮಾರಸ್ವಾಮಿ ರವರು ಸಾಲ ಮನ್ನಾ ಘೋಷಣೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ದಯವಿಟ್ಟು ಕುಮಾರಸ್ವಾಮಿ ರವರು ಸಾಲ ಹೇಗೆ ಮನ್ನವಾಗುತ್ತದೆ ಮತ್ತು ಯಾವ ರೀತಿ ಬ್ಯಾಂಕುಗಳಿಗೆ ಹಣ ಪಾವತಿ ಸರ್ಕಾರ ಮಾಡುತ್ತಿದೆ ಎಂಬುದನ್ನು ತಿಳಿಸಿ ಮಾತನಾಡಿದರೆ ಒಳಿತು ಎಂದು ಸಿಎಂ ರವರ ವಿರುದ್ಧ ಕಿಡಿಕಾರಿದ್ದಾರೆ.