ಕಿರಿಕ್ ಬೆಡಗಿ ನಟನೆಗೆ ಭರ್ಜರಿ ರೆಸ್ಪಾನ್ಸ್ – ಹೊಸ ಚಿತ್ರ ಗಳಿಸಿದ ಕೋಟಿಗಳೇಷ್ಟು ಗೊತ್ತಾ?

ರಶ್ಮಿಕಾ ಮಂದಣ್ಣ ಎಂದು ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವ ಚಿತ್ರವೆಂದರೆ ಕಿರಿಕ್ ಪಾರ್ಟಿ. ನಟನೆ ಮಾಡಿದ ಮೊದಲ ಚಿತ್ರದಲ್ಲಿ ಬಾರಿ ಅಭಿಮಾನಿಗಳ  ಬಳಗವನ್ನು ಗಳಿಸಿದ ರಶ್ಮಿಕ ಮಂದಣ್ಣ ರವರು  ಆನಂತರ  ಹಿಂತಿರುಗಿ ನೋಡಲೇ ಇಲ್ಲ.

Rashmika-Mandanna

ಕಿರಿಕ್ ಪಾರ್ಟಿ ಸಕ್ಸಸ್ ಕಂಡ ತಕ್ಷಣವೇ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಆಫರ್ ಗಳ ಸುರಿಮಳೇ ಗಳಿಸಿದ  ರಶ್ಮಿಕಾ ಮಂದಣ್ಣ ರವರಿಗೆ ಭಾರತದ ಬಹುದೊಡ್ಡ ಸಿನಿಮಾ ಮಾರುಕಟ್ಟೆ ಎಂದೇ ಖ್ಯಾತಿ ಪಡೆದಿರುವ ಟಾಲಿವುಡ್ ನಲ್ಲಿ ಅವಕಾಶಗಳು ದೊರೆತಿದ್ದವು. ಮೊದಲ ಚಿತ್ರವಾದ ಚಲೋ  ಸಿನಿಮಾದಲ್ಲಿ ಭರ್ಜರಿ  ಆರಂಭ ಪಡೆದಿದ್ದ ರಶ್ಮಿಕಾ ಮಂದಣ್ಣ ರವರಿಗೆ ತಮ್ಮ ಎರಡನೇ ಚಿತ್ರದಲ್ಲಿ ಬಿಗ್ ಬ್ರೇಕ್ ಒಂದು ದೊರಕಿದೆ.

ಎಷ್ಟರಮಟ್ಟಿಗೆ ಎಂದರೆ ಟಾಲಿವುಡ್ ನ ಹಿರಿಯ ನಟರು ರಶ್ಮಿಕಾ ಮಂದಣ್ಣ ರವರ ನಟನೆಗೆ ಮನಸೋತಿದ್ದಾರೆ. ತಮ್ಮ ಎರಡನೇ ಚಿತ್ರವಾದ ಗೀತಗೋವಿಂದಂ ದಲ್ಲಿ ತೆಲುಗಿನ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ರವರ ಜೊತೆ ನಟಿಸಿರುವ ರಶ್ಮಿಕಾ ಮಂದಣ್ಣ ರವರು ತೆಲುಗಿನ ಖ್ಯಾತ ನಟರಾದ ಚಿರಂಜೀವಿ,  ಮಹೇಶ್ ಬಾಬು ಮತ್ತು ಇನ್ನೂ ಹಲವು ಹಿರಿಯ ಸಿನಿಮಾ ನಟರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇಷ್ಟೇ ಅಲ್ಲದೆ ಗೀತಗೋವಿಂದಂ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದ್ದು ತೆರೆ ಕಂಡ ಕೆಲವೇ ದಿನಗಳಲ್ಲಿ 75 ಕೋಟಿ ಹಣ ಗಳಿಸಿ  ದಾಖಲೆ ನಿರ್ಮಾಣ ಮಾಡುವಲ್ಲಿ ಹೊರಟಿದೆ. ಸಿನಿಪ್ರಿಯರಿಗೆ  ಹಬ್ಬದಂತೆ ಇರುವ ಈ ಚಿತ್ರವನ್ನು ಪ್ರತಿಯೊಬ್ಬರೂ ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

Post Author: Ravi Yadav