ಮುಜುಗರಕ್ಕೀಡಾದ ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ

ಭಾರತದಲ್ಲಿ ಕೆಲವರಂತೂ ಏನು ಮಾಡಿದರೂ ಸುದ್ದಿಯಲ್ಲಿರುತ್ತಾರೆ, ಇದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಹೊರತಲ್ಲ. ಅದರಲ್ಲಿಯೂ ಬಾಲಿವುಡ್ ಸೆಲೆಬ್ರಿಟಿಗಳ ಡ್ರೆಸ್ ಗಳು ಭಾರಿ ಸದ್ದು ಮಾಡುತ್ತವೆ. ಜನತೆಗೆ ಇಷ್ಟವಾದರೂ ಅಥವಾ ಇಷ್ಟವಾಗದೇ ಇದ್ದರು ಸೆಲೆಬ್ರಿಟಿಗಳನ್ನು ಟ್ರೊಲ್ಲ್ ಮಾಡುವುದು ಸರ್ವೇ ಸಾಮಾನ್ಯ.

ಪರಿಸ್ಥಿತಿ ಹೀಗಿರುವಾಗ ಡ್ರೆಸ್ ವಿಚಾರದಲ್ಲಿ ಅನೇಕ ಬಾಲಿವುಡ್ ನಟಿಮಣಿಯರು ಮುಜುಗರಕ್ಕೀಡಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಾರೆ.  ಈಗ ಪರಿಣೀತಿ ಚೋಪ್ರಾ ರವರ ಸರದಿ ಬಂದಿದೆ.ಈ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದೆ.

ಪರಿಣಿತಿ ಚೋಪ್ರಾ ರವರ ಹೊಸ ಚಿತ್ರವಾದ ನಮಸ್ತೆ ಇಂಗ್ಲೆಂಡ್ ಮೊದಲೇ ಭಾರಿ ಸದ್ದು ಮಾಡುತ್ತಿದೆ, ಹೀಗಿರುವಾಗ ಆ ಚಿತ್ರದ ಪ್ರಚಾರಕ್ಕೆಂದು ತೆರಳಿದ ಸಂದರ್ಭದಲ್ಲಿ ಪರಿಣಿತಿ ಚೋಪ್ರಾ ರವರ ಉಡುಗೆ ಭಾರಿ ಸದ್ದು ಮಾಡಿದೆ. ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಪರಿಣಿತಿ ಚೋಪ್ರಾ ರವರ ಡ್ರೆಸ್ ಬಾರಿ ಮುಜುಗರವನ್ನು ಉಂಟು ಮಾಡಿದೆ.

ಇಂತಹ ಬಟ್ಟೆತೊಟ್ಟು ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಅವರು ಆಗಾಗ ತಾವು ಧರಿಸಿದ ಬಟ್ಟೆಯನ್ನು ಸರಿಮಾಡಿಕೊಳ್ಳುತ್ತಾ ಮುಜುಗರಕ್ಕೆ ಈಡಾಗಿದ್ದಾರೆ.ಪರಿಣಿತಿ ಚೋಪ್ರಾ ರವರ ನಮಸ್ತೆ ಇಂಗ್ಲೆಂಡ್ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ, ಅವರಿಗೆ ಶುಭವಾಗಲಿ ಎಂದು ಹಾರೈಸುತ್ತಿದ್ದೇವೆ.

Post Author: Ravi Yadav