ಹ್ಯಾಟ್ಸ್ಆಫ್ ಮೋದಿಜಿ- ಇದಲ್ಲವೇ ಮಹಿಳಾ ಸಬಲೀಕರಣವೆಂದರೆ? ಭಾರತಕ್ಕೆ ಮತ್ತೊಂದು ಐತಿಹಾಸಿಕ ದಿನ

ಹ್ಯಾಟ್ಸ್ಆಫ್ ಮೋದಿಜಿ- ಇದಲ್ಲವೇ ಮಹಿಳಾ ಸಬಲೀಕರಣವೆಂದರೆ? ಭಾರತಕ್ಕೆ ಮತ್ತೊಂದು ಐತಿಹಾಸಿಕ ದಿನ

0

ನರೇಂದ್ರ ಮೋದಿ ರವರನ್ನು ವಿರೋಧ ಪಕ್ಷಗಳು ಮಹಿಳಾ ವಿರೋಧಿ ಪಕ್ಷ ಎಂದು ದೂರುತ್ತಾರೆ. ಆದರೆ ಪ್ರತಿ ಬಾರಿಯೂ ನರೇಂದ್ರ ಮೋದಿ ರವರು  ಯಾವುದೇ  ಟೀಕೆಗಳಿಗೆ ಮಾತಿನಲ್ಲಿ ಉತ್ತರಿಸದೆ ತಮ್ಮ ಕೆಲಸದ ಮೂಲಕವೇ ಉತ್ತರಿಸುತ್ತ ಬಂದಿದ್ದಾರೆ. ಈ ಬಾರಿಯೂ ಮಹಿಳಾ ಸಬಲೀಕರಣಕ್ಕೆ ನರೇಂದ್ರ ಮೋದಿ ರವರು ಒತ್ತು ನೀಡಿದಂತಹ ಕೆಲಸವೊಂದು ನಡೆದಿದೆ. ಈ ದಿನ ಭಾರತಕ್ಕೆ ಒಂದು ಐತಿಹಾಸಿಕ ದಿನವೆಂದರೆ ತಪ್ಪಾಗಲಾರದು. ಅಷ್ಟಕ್ಕೂ ಏನದು ವಿಷಯ ಎಂಬುದನ್ನು ತಿಳಿಯಲು ಕೆಳಗಡೆ ಓದಿ.

ಆ ವಿಷಯ ತಿಳಿಯಬೇಕೆಂದರೆ ಭಾರತದ ಹೆಮ್ಮೆಯ ಪುತ್ರಿ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಶಿರವರ ಬಗ್ಗೆ ತಿಳಿದುಕೊಳ್ಳಬೇಕು.

ಭಾರತದ ಆರ್ಮಿಯ ಮೇಜರ್ ತಾಜುದ್ದೀನ್ ಅವರ ಪುತ್ರಿಯಾದ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಕುರೇಶಿ ರವರು 2016ರಲ್ಲಿ ವಿಶ್ವದ ಅತ್ಯಂತ ದೊಡ್ಡ ವಿದೇಶೀ ಮಿಲಿಟರಿ ಕವಾಯತು `ಎಕ್ಸರ್ಸೈಸ್ ಫೋರ್ಸ್ 18’ನಲ್ಲಿ ಭಾಗವಹಿಸಿದ್ದ 18 ಸೇನಾ ತುಕಡಿಗಳ ಲ್ಲಿ ಏಕೈಕ ಮಹಿಳೆ ಎಂಬ ಖ್ಯಾತಿ ಗಳಿಸಿದ್ದರು.

ಅದೇ ವರ್ಷದಲ್ಲಿ ಭಾರತೀಯ ಸೇನೆಯ ತರಬೇತಿ ತುಕಡಿಯ ನೇತೃತ್ವ ವಹಿಸಿದ್ದ ಪ್ರಪ್ರಥಮ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಇವರು ಮತ್ತೊಮ್ಮೆ ಹೆಣ್ಣು ಮಕ್ಕಳಿಗೆ ಮಾದರಿಯಾಗುವಂತಹ ಹುದ್ದೆಗೆ ಆಯ್ಕೆ ಆಗಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಭಾರತದ ಇತಿಹಾಸದಲ್ಲಿ ಮಹಿಳೆಯೊಬ್ಬರಿಗೆ ಸೇನಾ ತುಕಡಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲು ಇಂದು ಮೋದಿ  ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿಯೇ ಸೋಫಿಯಾ ಕುರೇಶಿ ರವರನ್ನು ಆಯ್ಕೆ ಮಾಡಿರುವ ಭಾರತೀಯ ಸೇನೆಯ  ನಿರ್ಧಾರಕ್ಕೆ ಮೋದಿ ಸರ್ಕಾರ ಅಸ್ತು ಎಂದಿದ್ದು   ಮಹಿಳೆಯರು ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬ ಮಾತನ್ನು ಮೋದಿ ಸರ್ಕಾರ ದಿಟ್ಟವಾಗಿ ನಂಬಿರುವುದು ಸತ್ಯ ಎಂದೆನಿಸುತ್ತಿದೆ.

ಭಾರತೀಯ ಸೇನೆಯಲ್ಲಿ ಮಹಿಳೆಯರು ಇತ್ತೀಚೆಗಷ್ಟೇ ಯುದ್ಧವಿಮಾನವನ್ನು ನಡೆಸಿ ಭೇಷ್ ಎನಿಸಿಕೊಂಡಿದ್ದರು, ಹಲವಾರು ದೊಡ್ಡ ಹುದ್ದೆಗಳಲ್ಲಿ  ಮಹಿಳೆಯರು ಇಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟಕ್ಕೂ ಭಾರತೀಯ ರಕ್ಷಣಾ ಸಚಿವರೇ ಒಬ್ಬರು ಮಹಿಳೆ. ಇದಲ್ಲವೇ ಮಹಿಳಾ ಸಬಲೀಕರಣ?