ಮೋದಿ ರವರನ್ನು ಹೀರೋ ಎಂದು ಬಣ್ಣಿಸಿದ ಹೈಕೋರ್ಟ್ ನ್ಯಾಯಮೂರ್ತಿ

ಮೋದಿ ರವರನ್ನು ಹೀರೋ ಎಂದು ಬಣ್ಣಿಸಿದ ಹೈಕೋರ್ಟ್ ನ್ಯಾಯಮೂರ್ತಿ

0

ನರೇಂದ್ರ ಮೋದಿ ರವರು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಭಾರತವು ಹಿಂದೆಂದೂ ಕಾಣದಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.  ಇದಕ್ಕೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾದರೂ, ನಿರ್ಧಾರಗಳನ್ನು  ಮೆಚ್ಚಿಕೊಂಡ ಜನತೆಯ ಸಂಖ್ಯೆ ಹೆಚ್ಚಿದೆ.

ಅದಲ್ಲದೆ ದಿನಗಳು ಕಳೆದಂತೆ ಮೋದಿ ರವರ ಜನಪ್ರಿಯತೆ ಹೆಚ್ಚಾಗುತ್ತದೆ  ಮತ್ತು ಮೋದಿ ರವರಿಗೆ ಪರೋಕ್ಷವಾಗಿ ಅಥವಾ ನೇರವಾಗಿ ಬೆಂಬಲ ಪೋಷಿಸುವವರ  ಸಂಖ್ಯೆ ಹೆಚ್ಚಾಗುತ್ತಲೇ ಬರುತ್ತಿದೆ. ಇದಕ್ಕೆಲ್ಲ ಕಾರಣ ಮೋದಿ ರವರ ದಿಟ್ಟ ನಿರ್ಧಾರಗಳು ಮತ್ತು ಅವರ ಪಾರದರ್ಶಕ ಆಡಳಿತ.  ಈಗ  ಸಮಾಜದಲ್ಲಿ ಒಂದು ಅತಿ ದೊಡ್ಡ ಹುದ್ದೆಯಲ್ಲಿರುವ ನ್ಯಾಯಮೂರ್ತಿಗಳು ಮೋದಿ ರವರ ಆಡಳಿತವನ್ನು ಮೆಚ್ಚಿಕೊಂಡು ಮೋದಿ ರವರನ್ನು ಹೀರೋ ಎಂದು ಹೊಗಳಿದ್ದಾರೆ.

ಪಾಟ್ನಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಮುಖೇಶ್ ರಸಿಕ್ ಶಾ ಅವರು ಪತ್ರಿಕಾಗೋಷ್ಠಿಯಲ್ಲಿ  ಪತ್ರಕರ್ತರು ಮೋದಿ ರವರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ವೇಳೆಯಲ್ಲಿ ಮೋದಿ ರವರ ಬಗ್ಗೆ ಆಡಿದ ಮಾತುಗಳು ಕೆಳಗಡೆ ಇವೆ ಒಮ್ಮೆ ಓದಿ.

ಪತ್ರಕರ್ತರ ಪ್ರಶ್ನೆ: ನಿಮ್ಮ ಮಾಡೆಲ್ ಮತ್ತು ಹೀರೋ ಯಾರು?

ನ್ಯಾಯಮೂರ್ತಿಗಳ ಉತ್ತರ: 

“ಕ್ಯೋಂಕಿ ನರೇಂದ್ರ ಮೋದಿ ಏಕ್ ಮಾಡೆಲ್ ಹೈ. ವಹ್ ಏಕ್ ಹೀರೊ ಹೆ. ಜಹಾ ತಕ್ ಮೋದಿ ಕಿ ಬಾತ್ ಹೈ ತೋ ಪಿಚಲೆ ಏಕ್ ಮಹಿನ್ ಸೆ ಯಹಿ ಚಲ್ ರಹಾ ಹೈ. ಸೋಶಿಯಲ್ ಮೀಡಿಯಾ ಪರ್ ಇಸೆ ಸೈಕ್ದೊ ಕ್ಲಿಪ್ಪಿಂಗ್ ಹೆ. ರೊಝ್ ಪೇಪರ್ ಮೆ ಬಿ ಯಹಿ ಚಲ್‍ ತಾ ಹೈ” (ಮೋದಿ ಮಾಡೆಲ್ ಆಗಿರುವುದರಿಂದ ಅವರು ಹೀರೊ. ಮೋದಿ ಬಗ್ಗೆ ಹೇಳಬೇಕೆಂದರೆ, ಕಳೆದ ಕೆಲ ತಿಂಗಳುಗಳಿಂದ ಇದು ಇದೆ. ಸಮಾಜ ಮಾಧ್ಯಮಗಳಲ್ಲಿ ಸಾವಿರಾರು ಕ್ಲಿಪ್ಪಿಂಗ್‍ಗಳಿವೆ. ಪತ್ರಿಕೆಗಳು ಕೂಡಾ ದಿನಾ ಇದನ್ನೇ ಪ್ರಕಟಿಸುತ್ತಿವೆ) ಎಂದು ಉತ್ತರಿಸಿದ್ದಾರೆ.

ದೇಶದಲ್ಲಿ ಒಂದು ಉನ್ನತ ಹುದ್ದೆಯಲ್ಲಿರುವ ನ್ಯಾಯಮೂರ್ತಿಗಳಾದ mr ಶಾ ರವರು ಹೇಳಿದ ಮಾತುಗಳು   ಒಮ್ಮೆ ಯೋಚಿಸಿ ನೋಡಿದರೆ ಸತ್ಯವೆನಿಸುತ್ತದೆ. ನಿಮ್ಮ ಹಾಗೇ ಅನಿಸಿದರೆ ಶೇರ್ ಮಾಡಿ.