ಈ ಬಾರಿಯೂ ಗಮನ ಸೆಳೆದ ಪ್ರಧಾನಿ ಮೋದಿ ಉಡುಗೆ

ಈ ಬಾರಿಯೂ ಗಮನ ಸೆಳೆದ ಪ್ರಧಾನಿ ಮೋದಿ ಉಡುಗೆ

0

ದೇಶವನ್ನು ಉದ್ದೇಶಿಸಿ ಪ್ರಧಾನ ಸೇವಕರಾದ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಾಡಿದ ಭಾಷಣದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮೋದಿ ರವರು ಮತ್ತೊಮ್ಮೆ ದೇಶದ ಗಮನವನ್ನು ಸೆಳೆದಿದ್ದಾರೆ. ತಲೆಗೆ ಕೇಸರಿ ಬಣ್ಣದ ಪೇಠವನ್ನು ಸುತ್ತಿಕೊಂಡಿದ್ದ ನರೇಂದ್ರ ಮೋದಿ ರವರು ಮತ್ತೊಮ್ಮೆ  ನೋಡುಗರ ಗಮನ ಸೆಳೆದರು.

ಮೊದಲಿನಿಂದಲೂ ಪ್ರತಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣಕ್ಕೆ ಸಾಂಪ್ರದಾಯಿಕ ಉಡುಗೆ ತೊಟ್ಟು ಭಾಷಣ ಮಾಡುವ ನರೇಂದ್ರ ಮೋದಿ ರವರ ಉಡುಗೆಗಳು ಭಾರಿ ಸದ್ದು ಮಾಡುತ್ತವೆ. ತಮ್ಮ ಮೊದಲ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಕೇಸರಿ ಮತ್ತು ಹಸಿರು ಬಣ್ಣದ ಉಡುಗೆಯಲ್ಲಿ ಮಿಂಚಿದ್ದ ಮೋದಿ ರವರು  ಉಳಿದ ವರ್ಷಗಳಲ್ಲಿಯೂ ಸಹ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಪ್ರತಿಬಾರಿಯೂ ದೇಶದ ಸಾಂಪ್ರದಾಯಿಕ ಉಡುಗೆಯನ್ನು ತೊಡುವ ನರೇಂದ್ರ ಮೋದಿ ರವರು ಯಾವುದೇ ಭದ್ರತೆ ಇಲ್ಲದೆ ನೇರವಾಗಿ ಜನರ ಮುಂದೆ ನಿಂತು ಭಾಷಣ ಮಾಡುವುದು ಗಮನಿಸಬೇಕಾದ ವಿಷಯ.