ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಮೊಟ್ಟಮೊದಲ ಹಳ್ಳಿ – ಈಸೂರು

ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಮೊಟ್ಟಮೊದಲ ಹಳ್ಳಿ – ಈಸೂರು

0

ಭಾರತದ ಸ್ವಾತಂತ್ರ ದಂಗೆಯಲ್ಲಿ ಹಲವಾರು ವೀರ ನಾಯಕರು ತಮ್ಮ ರಕ್ತವನ್ನು ಅರ್ಪಿಸಿದ್ದಾರೆ, ಸ್ವಾತಂತ್ರ ದೊರಕಿದ ಹೋರಾಟವನ್ನು ವಿವರಿಸುತ್ತಾ ಹೋದರೆ ನಮ್ಮ ಬಳಿ ಇರುವ ಸಮಯ ಸಾಕಾಗುವುದಿಲ್ಲ,  ಯಾಕೆಂದರೆ ನಮಗೆ ಸ್ವಾತಂತ್ರ ದೊರಕಿರುವುದು ಒಬ್ಬರ ಪರಿಶ್ರಮದಿಂದ ಅಲ್ಲ ಬದಲಾಗಿ ಹಲವಾರು  ಹೆಮ್ಮೆಯ ಭಾರತ ಮಾತೆಯ ಮಕ್ಕಳ ರಕ್ತದಿಂದಾಗಿ.ಆ ಹೋರಾಟದ ಪುಟಗಳನ್ನು ತೆರೆಯುತ್ತಾ ಹೋದರೆ ನಮಗೆ ಕರ್ನಾಟಕದ ಶಿಕಾರಿಪುರ ತಾಲೂಕಿನ ಒಂದು ಸಣ್ಣ ಗ್ರಾಮವಾದ ಈಸೂರು ಜನರ ಹೋರಾಟ ಮುಂಚೂಣಿಯಲ್ಲಿ ಕಾಣುತ್ತದೆ.

ಬ್ರಿಟಿಷರ ದಬ್ಬಾಳಿಕೆ ನಮ್ಮ ಮೇಲೆ ನಡೆಯುತ್ತಿದ್ದ ವೇಳೆಯಲ್ಲಿ ಇಡಿ ಅಖಂಡ ಭಾರತದಲ್ಲಿ ಮೊಟ್ಟಮೊದಲಿಗೆ ಸ್ವಾತಂತ್ರ ಘೋಷಿಸಿಕೊಂಡ ಹಳ್ಳಿಯೇ ಈ ಈಸೂರು. ‘ಏಸೂರು ಕೊಟ್ಟರೂ ಈಸೂರು ಕೊಡೆವು’  ಎಂಬ ಸ್ಲೋಗನ್ ನಲ್ಲಿ ಆರಂಭಗೊಂಡ ಈ ಚಳುವಳಿ ಕೊನೆಗೆ ಸ್ವಾತಂತ್ರವನ್ನು ಘೋಷಿಸಿಕೊಂಡ ಮೊಟ್ಟಮೊದಲ ಹಳ್ಳಿಯಾಗಿ ಕೊನೆಗೊಂಡಿತ್ತು. ಆ ಚಳುವಳಿಯ ಬಗ್ಗೆ ಕೆಲವೇ ಕೆಲವು ಸಂಗತಿಗಳನ್ನು ತಿಳಿಯಲು ಕೆಳಗಡೆ  ಓದಿ.

1942 ರಲ್ಲಿ ಈಸೂರು ಗ್ರಾಮದ 200 ಜನರ ಗುಂಪು ಹಳ್ಳಿಯವ ಬೀದಿಬೀದಿಗಳಲ್ಲಿ ಚಳುವಳಿ ನಡೆಸಿ,  ಬ್ರಿಟಿಷರ ಕಚೇರಿಗಳಿಗೆ ಬೆಂಕಿ ಗಳನ್ನು ಇಟ್ಟು ಸರ್ಕಾರಿ ಲೆಕ್ಕ ಪತ್ರಗಳನ್ನು ಸುಟ್ಟು ಹಾಕಿ, ಇಡೀ ಗ್ರಾಮದಲ್ಲಿ ಯಾರೂ ಸಹ ಬ್ರಿಟಿಷ್ ಅಧಿಕಾರಿಗಳಿಗೆ ಗೌರವವನ್ನು ನೀಡಬಾರದು ಒಂದು ವೇಳೆ ಯಾರಾದರೂ ನೀಡಿದಲ್ಲಿ ಕೊಟ್ಟವರ ಮನೆಯನ್ನು ಸುಟ್ಟು ಹಾಕುತ್ತೇವೆ ಎಂದು ಎಚ್ಚರಿಸಿದ್ದರು. ಬ್ರಿಟಿಷ್ ಸರ್ಕಾರಕ್ಕೆ ಭೂಕಂದಾಯವನ್ನು ಕೊಡುವುದಿಲ್ಲ ಎಂದು ನೇರವಾಗಿ ಎಚ್ಚರಿಸಿದರು.

ಸರ್ಕಾರಿ ಪುಸ್ತಕಗಳನ್ನೆಲ್ಲಾ ಕಸಿದುಕೊಂಡು ಈಸೂರನ್ನು ಸ್ವತಂತ್ರ ಹಳ್ಳಿಯಾಗಿ ಘೋಷಿಸಿಕೊಂಡರು. ಊರಿನ ಬಾಗಿಲಿನಲ್ಲಿ ಬ್ರಿಟಿಷ ಅಧಿಕಾರಿಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡನ್ನು ಹಾಕಿ ತಮ್ಮದೇ ಆದ ಹೊಸ ಕಾನೂನು ರಚಿಸಿಕೊಂಡರು. ಆದರೆ ಕೆಲವೇ ಕೆಲವು ದಿನಗಳಲ್ಲಿ ಬ್ರಿಟಿಷರ ದೊಡ್ಡ ಮಿಲಿಟರಿ ಪಡೆಯೊಂದು  ಬಂದು ಇಡೀ ಗ್ರಾಮದ ಜನರನ್ನು ಕೊಂದು ಸೇಡು ತೀರಿಸಿಕೊಂಡಿತ್ತು. ಆದರೆ ಯಾರೊಬ್ಬರು ಬ್ರಿಟಿಷರಿಗೆ ಶರಣಾಗಲಿಲ್ಲ.

ಇಂತಹ ಕ್ರಾಂತಿಕಾರಿಗಳ ಹೋರಾಟದಿಂದಲೇ ನಾವು ಇಂದು ಸ್ವಾತಂತ್ರ ರಾಷ್ಟ್ರವಾಗಿ ದ್ದೇವೆ ಎಂಬುದರಲ್ಲಿ ಎರಡು ಮಾತಿಲ್ಲ. ನಿಮಗೂ ಹಾಗೆ ಅನಿಸಿದರೆ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

#Jai Hind