ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಸಜ್ಜಾಗುತ್ತಿದೆ ಮೋದಿ ಸರ್ಕಾರ

ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಸಜ್ಜಾಗುತ್ತಿದೆ ಮೋದಿ ಸರ್ಕಾರ

0

ಜಿ ಎಸ್ ಟಿ ತೆರಿಗೆ ಪದ್ದತಿ ಜಾರಿಗೆ ಬಂದಾಗಿನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹಂತಹಂತವಾಗಿ ಹೆಚ್ಚಾಗುತ್ತಿದೆ.  ಇದನ್ನು ಅರಿತ ಕೇಂದ್ರ ಸರಕಾರವು ಕಳೆದ ಕೆಲವು ದಿನಗಳ ಹಿಂದಷ್ಟೇ 384 ಸರಕುಗಳು, 68 ಸೇವೆಗಳು, 186 ಸರಕುಗಳ ಮೇಲಿನ ತೆರಿಗೆ ದರವನ್ನು ಕಡಿಮೆ ಮಾಡಿತ್ತು.

ಇಂದು ಅದೇ ವಿಷಯವಾಗಿ ಮಾತನಾಡಿದ ಗೋಯಲ್, ಸರ್ಕಾರದ ವರಮಾನ ಇತರ ಮೂಲಗಳಿಂದ ಹೆಚ್ಚಾಗುವ ಸಂಭವವಿದ್ದು, ಹಾಗಾದರೆ ಮತ್ತಷ್ಟು ಸರಕುಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಲಾಗುವುದು ಎಂದು ತಿಳಿಸಿದರು.

ದೇಶದ ಆರ್ಥಿಕ ಕೊರತೆಯ ಆಧಾರದ ಮೇಲೆ ಜಿ ಎಸ್ ಟಿ ತೆರಿಗೆ ಯನ್ನು ಸಂಗ್ರಹಿಸಲಾಗುವುದು, ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ತೆರಿಗೆ ಬಂದರೆ ಖಂಡಿತ ಖಂಡಿತ ನಾವು ತೆರಿಗೆ ಹಣವನ್ನು ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕೆಲವು ದಿನಗಳ ಹಿಂದಷ್ಟೇ ಐಎಂಎಫ್ ಬಿಡುಗಡೆ ಮಾಡಿರುವ ವರದಿಯ ಬಗ್ಗೆ ಮಾತನಾಡಿದ ಗೋಯಲ್ ರವರು 2019-20ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಪ್ರಮಾಣ ಶೇ.7.5ರಷ್ಟು ಇರಲಿದೆ ಎಂದರು.