ಮತ್ತೊಂದು ಮಹತ್ವದ ಗುರಿಯನ್ನು ಅವಧಿಗೂ ಮುನ್ನ ತಲುಪಿದ ಮೋದಿ ಸರ್ಕಾರ

ಮತ್ತೊಂದು ಮಹತ್ವದ ಗುರಿಯನ್ನು ಅವಧಿಗೂ ಮುನ್ನ ತಲುಪಿದ ಮೋದಿ ಸರ್ಕಾರ

0

ನರೇಂದ್ರ ಮೋದಿ ರವರ ಅಧಿಕಾರದ ಗದ್ದುಗೆ ಏರಿದ ಮೇಲೆ ಭಾರತದಲ್ಲಿ ಸರ್ಕಾರಿ ಯೋಜನೆಗಳು ಸಮಯಕ್ಕೆ ಜನರಿಗೆ ಲಭ್ಯವಾಗುತ್ತಿವೆ. ಪ್ರತಿಯೊಂದು ಯೋಜನೆಯಲ್ಲಿಯೂ ಮೋದಿ ಸರ್ಕಾರ ಮಹತ್ತರ ಸಾಧನೆಗಳನ್ನು ಮಾಡುತ್ತಾ ಬಂದಿದೆ. ಇಡೀ ಭಾರತದ ಇತಿಹಾಸದಲ್ಲಿ ಸಮಯಕ್ಕೆ ಸರಿಯಾಗಿ ಪೂರ್ಣಗೊಂಡ ಯೋಜನೆಗಳು   ಕೇವಲ ಬೆರಳೆಣಿಕೆಯಷ್ಟು ಇರಬಹುದು ಆದರೆ ಮೋದಿ ಸರ್ಕಾರ ಬಂದ ಮೇಲೆ ಸಮಯಕ್ಕೆ ಮುಂಚೆಯೇ  ಹಲವು ಯೋಜನೆಗಳು ಪೂರ್ಣಗೊಂಡಿವೆ.

ಕೆಲವೇ ಕೆಲವು ದಿನಗಳ ಹಿಂದೆ ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ತಲುಪಿಸಿ ನಿಗದಿತ ಸಮಯಕ್ಕಿಂತ ಮೊದಲು  ಪ್ರತಿ ಮನೆಯಲ್ಲೂ ದೀಪಬೆಳಗಿಸಿ ಭಾರತದ ಇತಿಹಾಸದಲ್ಲಿ ಒಂದು ಐತಿಹಾಸಿಕ ದಿನವನ್ನು ಮೋದಿ ಸರ್ಕಾರ ಪೂರೈಸಿದ್ದು ಎಲ್ಲೆಡೆ ಮನೆಮಾತಾಗಿತ್ತು. ಈಗ ಮೋದಿ ಸರ್ಕಾರ ಮತ್ತೊಮ್ಮೆ ಮಹತ್ವದ ಗುರಿಯನ್ನು ಅವಧಿಗೂ ಮುನ್ನ ತಲುಪಿ ವಿಪಕ್ಷಗಳಿಗೆ ಬಾರಿ ತಿರುಗೇಟು ನೀಡಿದೆ.

ಅಷ್ಟಕ್ಕೂ ಆ ಯೋಜನೆ ಯಾವುದು ಮತ್ತು ಅದರ ಗುರಿ ಏನು ಎಂಬುದನ್ನು ತಿಳಿಯಲು ಕೆಳಗಡೆ ಓದಿ?

ಪ್ರಧಾನಮಂತ್ರಿ ದವರು ಅಧಿಕಾರಕ್ಕೆ ಬಂದ ಮೇಲೆ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಮಾತಿನಂತೆ ಬರೋಬ್ಬರಿ 5 ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕ ನೀಡುವ ಗುರಿಯನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆ  ಎನ್ನುವ ಹೆಸರಿನ ಯೋಜನೆಯಡಿ ಆರಂಭಿಸಿದ್ದರು. 2016ರ ಏಪ್ರಿಲ್ ನಲ್ಲಿ ಜಾರಿಗೆ ಬಂದಿದ್ದ ಈ ಯೋಜನೆ   2019ರ ಏಪ್ರಿಲ್ ಒಳಗೆ ಅಂದರೆ ಮೂರು ವರ್ಷದ ಅವಧಿಯಲ್ಲಿ 5 ಕೋಟಿ ಅಡುಗೆ ಅನಿಲ ಸಂಪರ್ಕ ನೀಡಲು ಯೋಜನೆಯನ್ನು ರೂಪ ಗಳಿಸಲಾಗಿತ್ತು.

ಆದರೆ ಮೋದಿ ಸರ್ಕಾರ ಇದನ್ನು ಕೇವಲ 2.4 ಅವಧಿಯಲ್ಲಿ ಪೂರ್ಣಗೊಳಿಸಿ ಇನ್ನೂ 8 ತಿಂಗಳ ಮುನ್ನವೇ ಗುರಿಯನ್ನು ತಲುಪಿದ್ದು ಮೋದಿ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದ ವಿರೋಧ ಪಕ್ಷಗಳಿಗೆ ಈ ಯಶಸ್ವಿ ಯೋಜನೆಯು ಭಾರಿ ಮುಖಭಂಗವನ್ನುಂಟು ಮಾಡಿದೆ.

ಆದರೆ ಇದನ್ನು ಯಾವ ಮೀಡಿಯಾದಲ್ಲೂ ತೋರಿಸುತ್ತಿಲ್ಲ ಎಲ್ಲರೂ ಪ್ರತ್ಯೇಕ ರಾಜ್ಯದ ಇಲ್ಲಸಲ್ಲದ  ಹೋರಾಟಗಳನ್ನು ತೋರಿಸುವುದರಲ್ಲಿ ನಿರತರಾಗಿದ್ದಾರೆ. ಮೋದಿ ಸರ್ಕಾರದ ಈ ಮಹತ್ತರ ಯೋಜನೆಗೆ ನಮ್ಮ ನಮನಗಳು ದಯವಿಟ್ಟು ಶೇರ್ ಮಾಡಿ ಪ್ರತಿಯೊಬ್ಬರಿಗೂ ತಿಳಿಸಿ