ಮತ್ತೊಮ್ಮೆ ಅಬ್ಬರಿಸಿದ ಸ್ಮೃತಿ ಮಂದಾನ: ಶತಕ ಸಿಡಿಸಿದ್ದು ಎಷ್ಟು ಎಸೆತಗಳಲ್ಲಿ ಗೊತ್ತಾ?

ಮತ್ತೊಮ್ಮೆ ಅಬ್ಬರಿಸಿದ ಸ್ಮೃತಿ ಮಂದಾನ: ಶತಕ ಸಿಡಿಸಿದ್ದು ಎಷ್ಟು ಎಸೆತಗಳಲ್ಲಿ ಗೊತ್ತಾ?

0

ಕಿಯಾ ಮಹಿಳಾ ಟಿ-ಟ್ವೆಂಟಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಭಾರತದ ತಾರೆ ಸ್ಮೃತಿ ಮಂದಾನ ರವರು ಟೂರ್ನಿಯ ಮೊದಲ ಶತಕವನ್ನು ಬಾರಿಸಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲ್ಯಾನ್ಸಾಶೈರ್  ತಂಡ 154 ರನ್ ಗಳ ಗುರಿಯನ್ನು ನೀಡಿತ್ತು, ಎರಡನೇ ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂದಾನ ತಂಡ (ವೆಸ್ಟರ್ನ್ ಸ್ಟ್ರೋಮ್) ಭರ್ಜರಿ ಗೆಲುವು ಸಾಧಿಸಿದೆ. ತಂಡಕ್ಕೆ ಆಸರೆಯಾಗಿ ನಿಂತ ಸ್ಮೃತಿ ಮಂದನಾ ರವರು ಕೇವಲ 60 ಎಸೆತಗಳಲ್ಲಿ 12 ಬೌಂಡರಿ  ಹಾಗೂ ನಾಲ್ಕು ಭರ್ಜರಿ  ಸಿಕ್ಸರುಗಳ ನೆರವಿನಿಂದ ಶತಕ ಸಿಡಿಸಿ ಮಿಂಚಿದರು.

ಒಟ್ಟು 61 ಎಸೆತಗಳನ್ನು ಎದುರಿಸಿದ ಸ್ಮೃತಿ ಮಂದಾನ ರವರು 102 ರನ್ ಗಳಿಸಿದ್ದಾಗ ಔಟಾದರು. ಕಿಯಾ ಸೂಪರ್ ಲೀಗ್ ಮಹಿಳಾ ಟಿ20 ಟೂರ್ನಿಯಲ್ಲಿ ಮಂದಾನ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. 48, 37, 52*, 43*, ಹಾಗೂ 102 ರನ್ ಸಿಡಿಸೋ ಮೂಲಕ ಓಟ್ಟು 282 ರನ್ ದಾಖಲಿಸಿದ್ದಾರೆ.