ಮೋದಿಯವರ ಹೊಸ ರಕ್ಷಣಾ ತಂತ್ರ, ಓದಿ ನೀವು ದೇಶದ ಬಗ್ಗೆ ಹೆಮ್ಮೆ ಪಡುತ್ತೀರ.

ಮೋದಿಯವರ ಹೊಸ ರಕ್ಷಣಾ ತಂತ್ರ, ಓದಿ ನೀವು ದೇಶದ ಬಗ್ಗೆ ಹೆಮ್ಮೆ ಪಡುತ್ತೀರ.

0

ಪ್ರಧಾನಮಂತ್ರಿ ಮೋದಿ ನೇತೃತ್ವದ ಭಾರತ ಸರಕಾರ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಮಾಡಲು ಹೊರಟಿದೆ. ಮುಂಬರುವ ದಿನಗಳಲ್ಲಿ ಸರಕಾರ ಒಂದು ಹೊಸ ನೀತಿ ಮಂಡನೆ ಮಾಡಲಿದೆ ಇದರಿಂದ ಇನ್ನು ಹತ್ತು ವರ್ಷಗಳಲ್ಲ ಭಾರತ ದೊಡ್ಡ ಶಕ್ತಿಶಾಲಿ ದೇಶಗಳ ಸಾಲಿಗೆ ಸೇರಲಿದೆ. ಸುದ್ದಿಗಳ ಪ್ರಕಾರ ಇದಕ್ಕೆ ಪೂರಕವಾದ ಎಲ್ಲಾ ನಿಯಮಗಳನ್ನು ಅಂತಿಮ ರೂಪಕ್ಕೆ ತರಲಾಗುವುದು ನಂತರ ಸಂಸತ್ತಿನಲ್ಲಿ ಪ್ರಸ್ತಾಪಿಸಲಾಗುತ್ತದೆ. ಏನಿದು ರಕ್ಷಣಾ ನೀತಿ? ಇದರಿಂದ ಭಾರತಕ್ಕೆ ಯಾವ ರೀತಿಯ ಲಾಭವಿದೆ?

ಸೈನ್ಯ ಉಪಕರಣ ತಯಾರಿಸುವ ಐದು ರಾಷ್ಟ್ರಗಳ ಸಾಲಿಗೆ ಸೇರಲಿದೆ ಭಾರತ.

ಮೋದಿಜಿ ಸರಕಾರ ಮುಂದಿನ ತಿಂಗಳೇ ಈ ಹೊಸ ರಕ್ಷಣಾ ನೀತಿಯನ್ನು ಘೋಷಣೆ ಮಾಡಲಿದೆ. ಭಾರತ ರಕ್ಷಣಾ ಉತ್ಪಾದನಾ ಉದ್ಯೋಗ ಎಂಬ ಯೋಜನೆ ಮಾಡಲಿದೆ. ರಕ್ಷಾ ಉತ್ಪಾದನಾ ನೀತಿ (DPP 2018) ಮುಖ್ಯ ಉದ್ದೇಶ ಯುದ್ದ ವಿಮಾನ, ಸ್ವದೇಶಿ ಶಸ್ತ್ರಾಸ್ತ್ರ, ಅತ್ಯಾಧುನಿಕ ಯುದ್ದ ಹೆಲಿಕಾಪ್ಟರ್, ಹಾಗೂ ಹೊಸ ಸೈನ್ಯ ಪ್ಲಾಟ್ ಪಾರ್ಮ್ ತಯಾರಿಸಲು ಈ ಯೋಜನೆಯಾಗಿದೆ. ಇದಕ್ಕಾಗಿ ಸರಕಾರ ಪರ್ಯಾಪ್ತ ರಿಸೋರ್ಸ್ ಗಳ ಮೇಲೆ ಹೂಡಿಕೆ ಮಾಡಲಿದೆ.

ಮುಂದಿನ ಹತ್ತು ವರ್ಷಗಳಲ್ಲಿ ೫ ಶಕ್ತಿಶಾಲಿ ದೇಶಗಳ ಸಾಲಿಗೆ ಸೇರಲು ಗುರಿ ಹೊಂದಿರುವ ಭಾರತ.

ಕೇಂದ್ರ ಸರಕಾರ ಮುಂದಿನ ಹತ್ತು ವರ್ಷಗಳಲ್ಲಿ ಐದು ಶಕ್ತಿಶಾಲಿ ದೇಶಗಳ ಸಾಲಿಗೆ ಸೇರುವ ಗುರಿ ಹೊಂದಿದೆ. ನೀತಿ ಸಂಧಾನಗಳ ಪ್ರಕಾರ ೨೦೨೫ ರ ಹೊತ್ತಿಗೆ ಸುಮಾರು ೧ ಲಕ್ಷದ ೭೦ ಸಾವಿರ ಕೋಟಿ ಹಣ ವೆಚ್ಚ ಮಾಡಲಿದೆ.

ಸ್ವೀಡನ್ ಮೂಲದ ಥಿಂಕ್ ಟ್ಯಾಂಕ್ ಸಂಸ್ಥೆಯ ಸಮೀಕ್ಷೆ ಪ್ರಕಾರ ಭಾರತ ಕಳೆದ ಐದು ವರ್ಷಗಳಲ್ಲಿ ಅತೀ ಹೆಚ್ಚು ಯುದ್ದ ಉಪಕರಣಗಳ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡಿದೆ. ೨೦೦೪-೦೫ ಸಾಲಿಗೆ ಹೋಲಿಸಿದರೆ ಆಮದು ಶೇಕಡಾ ೧೧೧% ಹೆಚ್ಚಾಗಿದೆ.

ಈ ಹೊಸ ರಕ್ಷಣಾ ನೀತಿಯಿಂದ ಭಾರತ ಶಕ್ತಿಶಾಲಿ ದೇಶಗಳ ಸಾಲಿಗೆ ಸೇರುವುದಷ್ಡೇ ಅಲ್ಲದೇ ಇನ್ನೊಂದು ರಾಷ್ಟ್ರಗಳ ಮೇಲೆ ಶಸ್ತ್ರಾಸ್ತ್ರಗಳಿಗಾಗಿ ಅವಲಂಬನೆ ಕೂಡಾ ಕಡಿಮೆಯಾಗುತ್ತದೆ. ಆಧುನಿಕ ಶಸ್ತ್ರಾಸ್ತ್ರ ಹಾಗೂ ಶಕ್ತಿಶಾಲಿ ದೇಶವಾಗುವುದಲ್ಲದೆ ದೇಶದಿಂದ ಶಸ್ತ್ರಾಸ್ತ್ರ ರಪ್ತು ಕೂಡಾ ಆಗಲಿದೆ.