ಬಿ ಸ್ ವೈ ನೀಡಿದ ಯೋಜನೆ ಕುಮಾರಸ್ವಾಮಿ ಕಿತ್ತುಕೊಂಡರು: ಬಡವರಿಗೆ ಮತ್ತೊಂದು ಶಾಕ್

ಬಿ ಸ್ ವೈ ನೀಡಿದ ಯೋಜನೆ ಕುಮಾರಸ್ವಾಮಿ ಕಿತ್ತುಕೊಂಡರು: ಬಡವರಿಗೆ ಮತ್ತೊಂದು ಶಾಕ್

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕದಲ್ಲಿ ಮದ್ಯಮ ವರ್ಗದ ಜನ ಹೆಚ್ಚಾಗಿ ಇದ್ದಾರೆ. ಹಲವು ಜನರಿಗೆ ಬದುಕು ನಡೆಸಲು ಸಹ ಕಷ್ಟವಾಗಿದೆ. ಇಂತಹ ಜನರಿಗೆ ಶಾಕ್ ನೀಡಲು ಹೊರಟಿದ್ದಾರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು. ಆದರೆ ನಮ್ಮ ಪ್ರಕಾರ ಇದೊಂದು ಅಸಂಬದ್ಧ ನಿರ್ಧಾರ ಯಾಕೆಂದರೆ ಹೊಸ ಯೋಜನೆಗಳನ್ನು ನೀಡದಿದ್ದರೂ ಪರವಾಗಿಲ್ಲ ಇರುವುದನ್ನು ಕಿತ್ತುಕೊಂಡರೆ ಹೇಗೆ ಎಂಬುದು ನಮ್ಮ ವಾದ. ದಯವಿಟ್ಟು ಒಮ್ಮೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ಪ್ರತಿಯೊಬ್ಬರೂ ಓದಲೇಬೇಕಾದ ವಿಷಯವಿದು, ಈ ಅಂಕಣ ಜೊತೆ ನಾವು ಕುಮಾರಸ್ವಾಮಿ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಸಹ ಕೇಳಿದ್ದೇವೆ. ಈ ಪ್ರಶ್ನೆಗಳಿಗೆ ಕುಮಾರಸ್ವಾಮಿ ಉತ್ತರ ನೀಡುವುದಿಲ್ಲ ಎಂಬುದು ನಮಗೂ ಗೊತ್ತು ನಿಮಗೂ ಗೊತ್ತು, ಆದರೆ ಈ ಪ್ರಶ್ನೆ ಮತದಾರರಲ್ಲಿ ಮತ ನೀಡುವ ಮುನ್ನ ಯೋಚಿಸಬೇಕು ಎಂಬ ಆಲೋಚನೆಯನ್ನು ತರಿಸುತ್ತದೆ. ಆದ ಕಾರಣದಿಂದ ದಯವಿಟ್ಟು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಅಷ್ಟಕ್ಕೂ ವಿಷಯದ ಮೂಲವೇನು?

ಮಧ್ಯಮ ವರ್ಗದವರಿಗೆ ಕಾಯಿಲೆ ಬಂದರೆ ಹಲವು ಜನರು ಔಷದ ತೆಗೆದುಕೊಂಡು ಡಾಕ್ಟರ್ ಬಳಿ ಹೋಗದೆ ನಿವಾರಣೆ ಮಾಡಿಕೊಳ್ಳಲ್ಲು ಪ್ರಯತ್ನಿಸುತ್ತಾರೆ. ಕಾರಣ ಆಸ್ಪತ್ರೆಗಳಲ್ಲೂ ಸೌಲಭ್ಯ ಇಲ್ಲದೆ ಇರದಿರುವುದು, ಕೆಲವು ಆಸ್ಪತ್ರಗಳಲ್ಲಿ ಇದ್ದರೂ ಮೊತ್ತವನ್ನು ಬರಿಸುವವರು ಯಾರು? ಎಂಬ ಚಿಂತೆ ಮಾಡುತ್ತಾರೆ. ಹೇಳಲು ನಾಚಿಕೆ ಆಗುತ್ತದೆ ಆದರೆ ಸತ್ಯವೇನೆಂದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ ಸೌಲಭ್ಯಗಳು ಕೂಡ ಇಲ್ಲ,ಇತ್ತ ಖಾಸಗಿ ಆಸ್ಪತ್ರೆಗಳು ಹಗಲು ದರೋಡೆಯನ್ನು ನಡೆಸುತ್ತಿವೆ. ಆದರೆ ನಮ್ಮ ಮುಖ್ಯಮಂತ್ರಿಗಳು ಶಾಕ್ ನೀಡಲು ಹೊರಟಿರುವುದನ್ನು ನೋಡಿದರೆ ಔಷದ ಸಹ ಕೊಳ್ಳಲು ಹಾಗಾದಂತಹ ಪರಿಸ್ಥಿತಿ ರಾಜ್ಯದಲ್ಲಿ ಎದುರಾಗಲಿದೆ.

ಮಧ್ಯಮ ವರ್ಗದವರಿಗೆ ಹೆಚ್ಚು ಭಯ ಕಾಡುವುದೆಂದರೆ ಮಗುವಿನ ಜನನ. ಎಲ್ಲರ ಬಳಿಯೂ ಖಾಸಗಿ ಆಸ್ಪತ್ರೆಗಳ ದರೋಡೆಯ ಮೊತ್ತವನ್ನು ನೀಡಲು ಸಾಧ್ಯವಿರುವುದಿಲ್ಲ. ಇದನ್ನು ನೋಡಿಯೇ ಇರಬೇಕು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ರಾಜ್ಯದಲ್ಲಿನ ಕಡುಬಡವರಿಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಸೌಲಭ್ಯಕ್ಕಾಗಿ 2008-09 ರಲ್ಲಿ ತಾಯಿ ಬಾಗ್ಯ ಯೋಜನೆಯನ್ನು ಜಾರಿಗೆ ತಂದು ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡು ಬಿ ಪಿ ಲ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ ಅತ್ಯಂತ ಕಡಿಮೆ ದರದಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಅವಕಾಶ ನೀಡಿದ್ದರು.ಆದರೆ ಇದೀಗ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ, ಆ ಯೋಜನೆಗೆ ಕತ್ತರಿ ಹಾಕಲಿದ್ದಾರೆ ಎನ್ನಲಾಗಿದೆ.

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ಮಹಿಳೆಯರು ಕಡಿಮೆ ದರ ಎಂದು ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಆದರೆ ಸರ್ಕಾರದ ನೂತನ ಆದೇಶದಿಂದ ಇದೀಗ ಆ ಬಡ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ದುರಂತ ಅಂದರೆ ಏಪ್ರಿಲ್ 2018 ರಿಂದ ಇಲ್ಲಿಯವರೆಗೆ ಸಲ್ಲಿಸಿದ ಬಿಲ್ಲುಗಳಿಗೆ ನಮಗೂ ಸಂಬಂಧವಿಲ್ಲ ಎಂದು ಆಧೇಶ ಮಡಿದ್ದಾರೆ ಎನ್ನಲಾಗಿದೆ. ನೋಡಿ ಸ್ವಾಮಿ ನೀವು ಯೋಜನೆಯನ್ನು ನಿಲ್ಲಿಸುವ ಮುಂಚೆ ಸರ್ಕಾರಿ ಆಸ್ಪತ್ರೆಗಳು ಎಂದು ಹೆಸರು ಇಟ್ಟಿಕೊಂಡಿರುವ ಕಟ್ಟಡಗಳನ್ನು ದಯವಿಟ್ಟು ಆಸ್ಪತ್ರೆಗಳಾಗಿ ಬದಲಾಯಿಸಿ.

ಕನಿಷ್ಠ ಮೂಲಸೌಕರ್ಯ ಗಳನ್ನೂ ಹೊದಗಿಸಿ, ಆಸ್ಪತ್ರೆಗಳಂತೆ ಕಾಣುವಂತೆ ಮಾಡಿ. ಅಷ್ಟು ಹಣದ ಕೊರತೆಯಿದ್ದರೆ ರಾಮ ನಗರದಲ್ಲಿ ಫಿಲ್ಮ್ ಸಿಟಿ ಮಾಡುವ ಬದಲು ಈ ಯೋಜನೆಗೆ ಹಣ ಬಳಸಿ. ತಮ್ಮ ಅವಳಿ ಮಕ್ಕಳು ಎಂದು ಹೇಳಿಕೊಂಡಿರುವ ನಿಮ್ಮ ಕ್ಷೇತ್ರಗಳಾದ ರಾಮನಗರ ಮತ್ತು ಚೆನ್ನಪಟ್ಟಣ ಗಳಲ್ಲಿನ ಆಸ್ಪತ್ರೆಗಳ ಸ್ಥಿತಿಯನ್ನು ನೋಡಿದ್ದೀರಾ? ಒಮ್ಮೆ ಯೋಚಿಸಿ ನಿಮ್ಮ ಕುಟುಂಬದ ಯಾರೇ ಆಗಲಿ ಇದುವರೆಗೂ ಅಲ್ಲಿ ಚಿಕಿತ್ಸೆ ಪಡೆದಿದ್ದಾರೆಯೇ?

ನಿಮ್ಮ ಕ್ಷೇತ್ರಗಳಿಗೆ ನೀವು 2000 ಕೋಟಿ ಅನುದಾನವನ್ನು ಘೋಷಿಸಿದ್ದೀರಿ, ಅದರಂತೆ ಸರ್ಕಾರಿ ಆಸ್ಪತ್ರೆ ಗಳಿಗೂ ಸಹ ಘೋಷಿಸಿದ್ದಲ್ಲಿ ಬಹುಶಃ ನೀವು ಯಾವುದೇ ಸರ್ಕಾರಿ ಆರೋಗ್ಯ ಯೋಜನೆ ಗಳನ್ನು ನೀಡುವ ಅಗತ್ಯವಿಲ್ಲ. ನೀವು ಯೋಜನೆಯನ್ನು ಕೊಡಿಸಲು ಕಾರಣವನ್ನು ಕೇಳಬಹುದೇ.?ಇಲ್ಲಿ ನೀವು ರಾಜಕಾರಣವನ್ನು ಮಾಡುತ್ತಿದ್ದೀರಾ?ದಯವಿಟ್ಟು ಈ ಯೋಜನೆ ಏನು ಮುಂದುವರಿಸಿ ನಿಮ್ಮ ಬಳಿ ಹಣವಿದೆ ನೀವು ಸಿಂಗಾಪುರಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿರು ಆದರೆ ಮಧ್ಯಮ ವರ್ಗದ ಜನರು ಕರ್ನಾಟಕದಲ್ಲಿನ ಆಸ್ಪತ್ರೆಗಳನ್ನೇ ನಂಬಿ ಬದುಕುತ್ತಿದ್ದಾರೆ.