ಮೋದಿ ಅಲೆ ತಡೆಯಲು ಮಾಡಿದ ಪ್ರಯತ್ನ ವಿಫಲ:ವಿಪಕ್ಷಗಳಿಗೆ ಬಾರಿ ಮುಖಭಂಗ

ಮೋದಿ ಅಲೆ ತಡೆಯಲು ಮಾಡಿದ ಪ್ರಯತ್ನ ವಿಫಲ:ವಿಪಕ್ಷಗಳಿಗೆ ಬಾರಿ ಮುಖಭಂಗ

0

ಕೆಲವು ದಿನಗಳ ಹಿಂದಷ್ಟೇ, ಬೃಹತ್ ಸಮೀಕ್ಷೆ ಹೊರಬಂದಿದೆ, ಮೋದಿ ಅಧಿಕಾರದ ಗದ್ದುಗೆ ಏರಿದ ಮೇಲೆ ಸ್ವಿಸ್ ಬ್ಯಾಂಕ್ ನಲ್ಲಿನ ಭಾರತೀಯರ ಕಪ್ಪು ಹಣ ಹೆಚ್ಚಾಗಿದೆ ಎಂದು ಮೋದಿ ರವರ ಮೇಲೆ ಬೊಬ್ಬೆ ಹೊಡೆದ ವಿರೋಧ ಪಕ್ಷಗಳಿಗೆ ಬಾರಿ ಮುಖಭಂಗವಾಗಿದೆ. ಕೇಂದ್ರ ಸಚಿವರಾದ ಪಿಯೂಶ್  ಸತ್ಯಾಂಶವನ್ನು ಹೊರಗಡೆ ತಂದಿದ್ದು ವಿರೋಧ ಪಕ್ಷಗಳು ಮೋದಿ ರವರ ಅಲೆಯನ್ನು ತಡೆಯಲು ಮಾಡಿದ ಮತ್ತೊಂದು ಪ್ರಯತ್ನ ವಿಫಲವಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತೀಯರ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ದುಪ್ಪಟ್ಟಾಗಿದೆ ಎಂದು ಇತ್ತೀಚೆಗಷ್ಟೇ ಒಂದು ಸಮೀಕ್ಷೆ ಹೊರ ಬಂದಿತ್ತು. ಆದರೆ ರಾಜ್ಯಸಭೆಯಲ್ಲಿ ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಕಪ್ಪು ಹಣದ ಬಗ್ಗೆ ಮಾತನಾಡಿದ ಸಚಿವ ಪಿಯೂಷ್ ರವರು ಈ ಬಾರಿ ಭಾರತೀಯರ ಸಾಲ ಮತ್ತು ಠೇವಣಿ ಯಲ್ಲಿ ಬರೋಬ್ಬರಿ  ಶೇಕಡ 34 ಕಡಿಮೆಯಾಗಿದೆ ಎಂದು ಹೇಳಿದರು.

ಇನ್ನು ಸ್ವಿಸ್ ಬ್ಯಾಂಕ್ ಸಂಬಂಧಿಸಿದ ಮಾಹಿತಿಗಳನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ ಗೋಯಲ್ ಬ್ಯಾಂಕ್ ಆಫ್ ನ್ಯಾಷನಲ್ ಸೆಟಲ್ ಮೆಂಟ್ ಮಾಹಿತಿಯ ಪ್ರಕಾರ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಕಪ್ಪು ಹಣ ಠೇವಣೆಯ ಪ್ರಮಾಣ ಶೇಕಡ 80ರಷ್ಟು ಕಡಿಮೆಯಾಗಿದೆ ಎಂಬ ಶಾಕಿಂಗ್ ವಿಷಯವನ್ನು ತಿಳಿಸಿದರು.

ಇದರಿಂದ ಕೆಲವು ದಿನಗಳ ಹಿಂದಷ್ಟೇ ಮೋದಿರವರ ಮೇಲೆ ಮುಗಿಬಿದ್ದ ವಿರೋಧ ಪಕ್ಷಗಳಿಗೆ ಭಾರಿ ಮುಖಭಂಗ ಉಂಟಾಗಿದ್ದು ಮತ್ತೊಮ್ಮೆ ಮೋದಿ ರವರ ಅಲೆಯನ್ನು ತಡೆಯಲು ಮಾಡಿದ್ದ ಉಪಾಯಗಳು ವಿಫಲವಾಗಿದೆ. ಇದರಿಂದ ಮೋದಿರವರ ಜನಪ್ರಿಯತೆ ಮತ್ತು ಹೆಚ್ಚಿದೆ ಎಂಬುದಂತೂ ಸತ್ಯ.