ಈ ಖ್ಯಾತ ಫುಟ್ಬಾಲ್ ಆಟಗಾರ ಕೊಟ್ಟ ಟಿಪ್ಸ್ ಎಷ್ಟು ಲಕ್ಷ ಗೊತ್ತೆ? ಮತ್ತು ಕಾರಣ?

ಬರೋಬ್ಬರಿ 16 ಲಕ್ಷ ಟಿಪ್ಸ್ ಕೊಟ್ಟ ರೊನಾಲ್ಡೋ

0

ಸಾಮಾನ್ಯವಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಟಿಪ್ಸ್ ಕೊಡುತ್ತಾರೆ, ಮಧ್ಯಮವರ್ಗದವರು ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ  ಸೇವೆ ಇಷ್ಟವಾದರೆ ರೂಪಾಯಿಗಳ ಲೆಕ್ಕದಲ್ಲಿ ಟಿಪ್ಸ್ ಗಳನ್ನು ಕೊಡುವುದನ್ನು ನೋಡಿದ್ದೇವೆ. ಅಪ್ಪಿತಪ್ಪಿಯೂ ಯಾರಾದರೂ ಸಾವಿರ ಇಲ್ಲವೇ 2 ಸಾವಿರ ನೀಡಿದರೆ ನಾವು ಆಶ್ಚರ್ಯದಿಂದ ನೋಡುತ್ತೇವೆ.

ಆದರೆ ಫುಟ್ಬಾಲ್ ಲೋಕದ ಆದರೆ ಫುಟ್ಬಾಲ್ ಲೋಕದ ಕ್ರಿಸ್ಟಿಯಾನೊ ರೊನಾಲ್ಡೊ ಬರೋಬ್ಬರಿ 16 ಲಕ್ಷ ಟಿಪ್ಸ್ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಮೊದಲಿನಿಂದಲೂ ತಮ್ಮ ಉದಾರ ಮನಸ್ಸಿನಿಂದ ಜಗತ್ತಿನೆಲ್ಲೆಡೆ ಸುದ್ದಿಯಾಗಿರುವ ಈ ಆಟಗಾರ ಮತ್ತೊಮ್ಮೆ ತಮ್ಮ ಉದಾರತೆಯನ್ನು ಮೆರೆದಿದ್ದಾರೆ. ಅಷ್ಟಕ್ಕೂ ವಿಷಯವೇನು?

ಇತ್ತೀಚೆಗಷ್ಟೇ ಕ್ರಿಸ್ಟಿಯಾನೋ ರೋನಾಲ್ಡೋ ಅವರು ಬರೋಬ್ಬರಿ 850 ಕೋಟಿಯ ಇಟಲಿಯ ಜುವೆಂಟಸ್ ಕ್ಲಬ್ ನ ಜೊತೆ ಒಪ್ಪಂದ ಮಾಡಿಕೊಳ್ಳುವ ಮುನ್ನ ತಮ್ಮ ಕುಟುಂಬದೊಂದಿಗೆ ಪ್ರವಾಸಕ್ಕಾಗಿ ಗ್ರೀಸ್ ಗೆ ತೆರಳಿರುತ್ತಾರೆ. ತಾವು ತಂಗಿದ್ದ ಹೋಟೆಲ್ ನ ಸೇವೆಯನ್ನು ಮೆಚ್ಚಿದ ರೊನಾಲ್ಡೊ ರವರು ಸಿಬ್ಬಂದಿಗೆ ಬರೋಬ್ಬರಿ 16 ಲಕ್ಷ ಟಿಪ್ಸ್ ನೀಡಿದ್ದಾರೆ.

ಹಲವಾರು ಜನರಿಗೆ ಸಹಾಯ ಮಾಡಿರುವ ರೊನಾಲ್ಡೋ ರವರು, ಸಾಮಾಜಿಕ ಕಳಕಳಿ ಇರುವ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು.