ಭಾರತೀಯರ 15 ಲಕ್ಷದ ಮತ್ತೊಂದು ಕಂತು ಪಾವತಿಸಿದ ಮೋದಿ.

ಭಾರತೀಯರ 15 ಲಕ್ಷದ ಮತ್ತೊಂದು ಕಂತು ಪಾವತಿಸಿದ ಮೋದಿ.

0

ಮೋದಿ ರವರು ಅಧಿಕಾರಕ್ಕೆ ಬಂದಾಗಿನಿಂದ ವಿರೋಧ ಪಕ್ಷಗಳು ನನ್ನ 15 ಲಕ್ಷ ವೆಲ್ಲಿ ನನ್ನ 15 ಲಕ್ಷ ವೆಲ್ಲಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ, ಆದರೆ ನಿಜವಾದ ಭಾರತೀಯನಿಗೆ 15 ಲಕ್ಷ ನೀಡುವುದನ್ನು ಮೋದಿ ರವರು ಯಾವ ದಿನದಿಂದಲೂ ಪ್ರಾರಂಭಿಸಿದ್ದಾರೆ ಈಗ ಮತ್ತೊಂದು ಕಂತನ್ನು ಮೋದಿ ರವರು ಪಾವತಿಸಿದ್ದಾರೆ. ಅಷ್ಟಕ್ಕೂ ಏನೆಂದು ಯೋಚನೆ ಮಾಡುತ್ತಿರುವಿರಾ? ಸಂಪೂರ್ಣ ವಿಷಯವನ್ನು ತಿಳಿಯಲು ಕೆಳಗಡೆ ಓದಿ.

ನಿಜವಾದ ಭಾರತೀಯನಿಗೆ 15 ಲಕ್ಷ ಬೇಕಾಗಿಲ್ಲ, ಬದಲಾಗಿ ಪ್ರತಿಯೊಬ್ಬರಿಗೂ ಬೇಕಾಗಿರುವುದು ಅಚ್ಚೇ ದಿನ್, ಮೋದಿ ಸರ್ಕಾರ ಬಂದ ದಿನದಿಂದಲೂ ಒಂದಲ್ಲ ಒಂದು ಯೋಜನೆಗಳ ಮೂಲಕ ಪ್ರತಿ ಮನೆಯ ಬಾಗಿಲು ತಟ್ಟುತ್ತಿರುವ ಮೋದಿ ರವರು ಪರೋಕ್ಷವಾಗಿ ಪ್ರತಿಯೊಬ್ಬ ಭಾರತೀಯರಿಗೆ 15 ಲಕ್ಷಕ್ಕಿಂತಲೂ ಹೆಚ್ಚು ಉಪಯೋಗಕರ ಯೋಜನೆಗಳನ್ನು ನೀಡುತ್ತಿದ್ದಾರೆ.

ಉದ್ಯೋಗ ಸೃಷ್ಟಿ, ವಿಜ್ಞಾನ, ತಂತ್ರಜ್ಞಾನ, ಕಾಮಗಾರಿಗಳು , ಅಭಿವೃದ್ಧಿಯ ಪಥ ಮತ್ತು ಬಹಳ ಮುಖ್ಯವಾಗಿ ಸೇನೆ ಹೀಗೆ ಪ್ರತಿ ಕ್ಷೇತ್ರದಲ್ಲಿಯೂ ಒಂದಲ್ಲ ಒಂದು ರೀತಿ ಪರೋಕ್ಷವಾಗಿ ಮೋದಿ ರವರು ತಮ್ಮ ಕೆಲಸದ ಮೂಲಕ 15 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಯೋಜನೆಗಳನ್ನು ರೂಪಿಸಿದ್ದಾರೆ. ಆದರೆ ತಮ್ಮ 15 ಲಕ್ಷ ಇನ್ನೂ ಅಕೌಂಟಿಗೆ ಬಿದ್ದಿಲ್ಲ ಎನ್ನುತ್ತಿರುವ ವಿರೋಧಿಗಳಿಗೆ ಈ ವಿಷಯ ತಿಳಿದರೆ ಅವರ ಸರ್ಕಾರಕ್ಕೆ ಮೋದಿರವರ ಸರ್ಕಾರಕ್ಕೆ ಇರುವ ವ್ಯತ್ಯಾಸ ತಿಳಿಯುವುದು.

ಪ್ರತಿಯೊಬ್ಬ ಜವಾಬ್ದಾರಿಯುತ ಭಾರತೀಯರು ಕಟ್ಟುವ ತೆರಿಗೆಯನ್ನು ಮೋದಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವ ವಿರೋಧಪಕ್ಷಗಳಿಗೆ ಈ ಕೆಲಸ ನೋಡಿದರೆ ಪ್ರತಿಯೊಬ್ಬರೂ ಸಹ ಸಲಾಂ ಹೊಡೆಯುತ್ತಾರೆ. ಅಷ್ಟಕ್ಕೂ ಏನದು ಯೋಜನೆ?

ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು ಭಾರತೀಯ ಯೋಧರು ಕಷ್ಟಪಟ್ಟು ಗಡಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಭಾರತ ತಾಯಿಯ ರಕ್ಷಣೆ ಮಾಡುತ್ತಿದ್ದರೆ ಅವರಿಗೆ ಯಾವುದೇ ಸರ್ಕಾರವಾಗಲಿ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸಿರಲಿಲ್ಲ, ಯಾವುದೋ ಕಲುಷಿತ ನದಿಯ ನೀರನ್ನು ಕುಡಿದು ಜೀವನ ಸಾಗಿಸುತ್ತಿದ್ದ ಹೆಮ್ಮೆಯ ಸೈನಿಕರು ಅಚ್ಚೇ ದಿನ್ ಕಾಣಲು ಪ್ರಾರಂಭಿಸಿದ್ದಾರೆ, ಅದರ ಅಂಗವಾಗಿಯೇ ಇಂದು ಭಾರತೀಯ ಹೆಮ್ಮೆಯ ಸೈನಿಕರು ಒಳ್ಳೆಯ ಕುಡಿಯುವ ನೀರು 50 ಡಿಗ್ರಿ ಗೂ ಹೆಚ್ಚು ತಾಪಮಾನವಿರುವ ಸ್ಥಳಗಳಲ್ಲಿ ಕೆಲಸ ಮಾಡುವ ಯೋಧರಿಗೆ AC ವ್ಯವಸ್ಥೆ ಮತ್ತು ಫ್ರಿಡ್ಜ್ ನ ವ್ಯವಸ್ಥೆ ಮಾಡಲಾಗಿದೆ, ಯೋಧರಿಗೆ ಕುಡಿಯುವ ನೀರಿನ ಬಾಟಲಿ ಮತ್ತು ಉಳಿದುಕೊಳ್ಳಲು ಸ್ಥಳದ ವ್ಯವಸ್ಥೆಯನ್ನು ಮಾಡಲಾಗಿದೆ.

ಇಂತಹದ್ದೇ ಯೋಜನೆಗಳನ್ನು ಇನ್ನು ಹೆಚ್ಚು ಹೆಚ್ಚು ರೀತಿಯಲ್ಲಿ ಜಾರಿಗೆ ತಂದು ಪ್ರತಿಯೊಬ್ಬ ಸೈನಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟರೆ ಅದೇ ನನ್ನ ಅಕೌಂಟಿಗೆ 15 ಲಕ್ಷ ಬಂದಂತೆ, ಪ್ರಾಣವನ್ನು ಪಣಕ್ಕಿಟ್ಟು ದೇಶ ಕಾಯುವ ಯೋಧರಿಗೆ ನಮ್ಮ ತೆರಿಗೆ ಹಣದಲ್ಲಿ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಯೋಜನೆಗಳನ್ನು ನೀಡಿದರೆ ನಾವು ಸಹ ದೇಶಸೇವೆ ಮಾಡಿದಂತೆ ಭಾಸವಾಗುತ್ತದೆ.ನನ್ನ ಪ್ರಕಾರ ಇಂದು ನನ್ನ ಅಕೌಂಟಿಗೆ 15 ಲಕ್ಷ ಬಂದಿದೆ, ಮತ್ತು ನಿಮಗೆ?