ಬಿಗ್ ಬ್ರೇಕಿಂಗ್: ಅನಂತ ಕುಮಾರ್ ಹೆಗಡೆ ರವರಿಗೆ ಕೈತಪ್ಪಲಿದೆಯೇ ಟಿಕೆಟ್?

ಬಿಗ್ ಬ್ರೇಕಿಂಗ್: ಅನಂತ ಕುಮಾರ್ ಹೆಗಡೆ ರವರಿಗೆ ಕೈತಪ್ಪಲಿದೆಯೇ ಟಿಕೆಟ್?

0

ಅನಂತ ಕುಮಾರ್ ಹೆಗಡೆ, ಇವರ ಹೆಸರು ಯಾರಿಗೆ ತಿಳಿದಿಲ್ಲ ಹೇಳಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬರೋಬ್ಬರಿ 5 ಬಾರಿ ಗೆದ್ದು  ತಮ್ಮ ಹಿಂದುತ್ವದ ಪರವಾದ ಹೋರಾಟ ದಿಂದ ಮನೆಮಾತಾಗಿರುವ ಅನಂತ್ ಕುಮಾರ್ ಹೆಗಡೆ ರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಬಹು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಒಂದು ವೇಳೆ ಟಿಕೆಟ್ ಕಳೆದುಕೊಂಡಲ್ಲಿ ಬಿ ಜೆ ಪಿ ಪಕ್ಷಕ್ಕೆ ಬಹುದೊಡ್ಡ ಹೊಡೆತ ವಾಗುವುದರಲ್ಲಿ ಅನುಮಾನವಿಲ್ಲ , ಆದರೆ ತಾವು ಟಿಕೆಟ್ ಕಳೆದುಕೊಂಡರು ಬಿಜೆಪಿ ಪರವಾಗಿ ನಿಲ್ಲುತ್ತೇವೆ ಎಂದು ಸ್ವತಃ ಅವರೇ ಹೇಳಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು?

ಮೋದಿ ಮತ್ತು ಅಮಿತ್ ಶಾ ರವರು ಒಂದಲ್ಲ ಒಂದು ಹೊಸ ತಂತ್ರಗಳನ್ನು ರೂಪಿಸಿ ಪ್ರತಿ ಚುನಾವಣೆಯನ್ನು ಎದುರಿಸುತ್ತಾರೆ,ಈ ಬಾರಿ 2019ರ ಲೋಕಸಭಾ ಚುನಾವಣೆಯು ಬಹಳ ಮುಖ್ಯವಾಗಿರುವುದರಿಂದ ಪ್ರತಿಯೊಂದು ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಸಾಕಷ್ಟು ವಿಚಾರಿಸಿ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ. ಬಹುಶಃ ಇದೇ ಕಾರಣಕ್ಕೆ ಅನಂತ ಕುಮಾರ್ ಹೆಗಡೆ ರವರು ಈ ಮಾತುಗಳನ್ನು ಹೇಳಿರಬೇಕು, ಇಷ್ಟಕ್ಕೂ ಅನಂತ್ ಕುಮಾರ್ ಹೆಗಡೆ ಅವರು ಏನು ಹೇಳಿದ್ದಾರೆ?

ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹುಬ್ಬಳ್ಳಿ ಗ್ರಾಮದಲ್ಲಿ ನಡೆದ ಕಿತ್ತೂರು  ಶಾಸಕರಾದ ಮಹಾಂತೇಶ್ ದೊಡ್ಡಗೌಡರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ  ಅನಂತ್ ಕುಮಾರ್ ಹೆಗಡೆ ದವರು ಕಳೆದ ಐದು ಬಾರಿ ಯಿಂದ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ನಾನು ಗೆಲುವು ಪಡೆದಿದ್ದೇನೆ ನನ್ನ ಯೋಗ್ಯತೆ ನೋಡಿ ಜನ ಓಟು ಕೊಟ್ಟಿಲ್ಲ ಬದಲಿಗೆ ಪ್ರೀತಿ ವಿಶ್ವಾಸ ಮತ್ತು ಕೆಲಸ ನೋಡಿ ಮತ ನೀಡಿದ್ದಾರೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಕಾಲುಮುಟ್ಟಿ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮುಂದಿನ ಬಾರಿ ಈ ಕ್ಷೇತ್ರದಿಂದ ಯಾರು ಬೇಕಾದರೂ ಸ್ಪರ್ಧಿಸಬಹುದು ಆದರೆ ಬಿಜೆಪಿ ಪಕ್ಷದಿಂದ ಯಾರಿ ಸ್ಪರ್ಧಿಸಿದರೂ ಅವರಿಗೆ ನಮ್ಮ ಬೆಂಬಲ ವಿರಬೇಕು, ಎಂದು ಅನಂತಕುಮಾರ್ ಹೆಗಡೆ ಅವರು ಸ್ವತಃ ತಮ್ಮ ಅನುಮಾನವನ್ನು ತಾವೇ ಹೊರಹಾಕಿದ್ದಾರೆ, ಅಷ್ಟಕ್ಕೂ ಇವರು ಹೀಗೆ ಹೇಳಲು ಕಾರಣಗಳು ಏನಿರಬಹುದು?

ಆ ಕಾರಣವೇ ಮಾಧ್ಯಮಗಳು, ಹೌದು ತಾವು ಯಾವುದೇ ಸಮಾರಂಭದಲ್ಲಿ ಪಾಲ್ಗೊಂಡರು ಭಾಷಣದ ವೇಳೆ ಇರುವ ಕಟುಸತ್ಯವನ್ನು ಇದ್ದ ಹಾಗೆ ಹೇಳುವುದು ಅನಂತಕುಮಾರ್ ಹೆಗಡೆ ರವರ ಸ್ವಭಾವ, ತಮ್ಮ ಹಿಂದುತ್ವದ ಪರ ಇರುವ ಆಲೋಚನೆಯನ್ನು ವ್ಯಕ್ತಪಡಿಸುವ ಇವರನ್ನು ಮಾಧ್ಯಮಗಳು ಹಿಂದುತ್ವದ ಪರವಾಗಿ ಮಾತನಾಡಿದರು ಅಥವಾ ಸತ್ಯ ಮಾತನಾಡಿದರು ಎನ್ನುವ ಬದಲು ಕೆಲವು ಧರ್ಮಗಳ ವಿರುದ್ಧ ವಾಗಿ ಮಾತನಾಡಿದರು ಎಂಬಂತೆ ಬಿಂಬಿಸುತ್ತಿರುವುದು.

ಅದು ಯಾವ ಕಾರಣವೇ ಇರಲಿ ಸತತ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ ಎಂದರೆ ಖಂಡಿತ ಜನಪರ ಯೋಜನೆಗಳನ್ನು ಮಾಡಿಗೆ ಎಂಬುದನ್ನು ಬಿಜೆಪಿ ಹೈಕಮಾಂಡ್ ಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆ ಅವರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವುದು ಉತ್ತಮ ಎಂಬುದು ನಮ್ಮ ಅಭಿಪ್ರಾಯ, ನಿಮಗೂ ಸಹ ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆ ರವರನ್ನು ಲೋಕಸಭಾ ಸದಸ್ಯರನ್ನಾಗಿ ನೋಡಲು ಇಚ್ಛೆ ಇದ್ದರೆ ದಯವಿಟ್ಟು ಶೇರ್ ಮಾಡಿ ಬೆಂಬಲಿಸಿ.