ಇಸ್ಲಾಂ ಧರ್ಮದ ಹಸಿರು ಧ್ವಜ ಬ್ಯಾನ್, ಭಾರತಕ್ಕೆ ಮತ್ತೊಂದು ಐತಿಹಾಸಿಕ ದಿನ

ಇಸ್ಲಾಂ ಧರ್ಮದ ಹಸಿರು ಧ್ವಜ ಬ್ಯಾನ್, ಭಾರತಕ್ಕೆ ಮತ್ತೊಂದು ಐತಿಹಾಸಿಕ ದಿನ

0

ಹೌದು ನೀವು ಕೇಳುತ್ತಿರುವುದು ನಿಜ, ಇನ್ನು ಕೆಲವೇ ದಿನಗಳಲ್ಲಿ ಹಿಂದುಗಳಿಗೆ ಮತ್ತೊಂದು ಐತಿಹಾಸಿಕ ದಿನ ನಿರ್ಮಾಣವಾಗಲಿದೆ, ಈ ಐತಿಹಾಸಿ ದಿನಕ್ಕೆಇನ್ನಿರುವುದು  ಒಂದೇ ಒಂದು ಮೆಟ್ಟಿಲು, ಸಂಪೂರ್ಣ ವಿವರನ್ನು ತಿಳಿಯಲು ಕೆಳಗಡೆ ಓದಿ.

ವಿಷಯದ ಮೂಲ: 

ಇನ್ನು ಮುಂದೆ ಸಾರ್ವಜನಿಕವಾಗಿ ಧಾರ್ಮಿಕ ಸ್ಥಳ ಮತ್ತು ಕಟ್ಟಡಗಳ ಮೇಲೆ ನಕ್ಷತ್ರ ಹಾಗೂ ಅರ್ಧಚಂದ್ರ ಆಕೃತಿ ಉಳ್ಳ ಹಸಿರು ಧ್ವಜ ಪ್ರದರ್ಶಿಸದಂತೆ ಕಾನೂನು ರೂಪಿಸಲು ಸುಪ್ರೀಂಕೋರ್ಟ್ ಅಸ್ತು ಎಂದಿದ್ದು, ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯವನ್ನು ಕೇಳಿದೆ.

ಧಾರ್ಮಿಕ ಸ್ಥಳಗಳಲ್ಲಿ ಹಸಿರು ಧ್ವಜ ಪ್ರದರ್ಶನದಿಂದ ಹಿಂದೂ ಮತ್ತು ಮುಸಲ್ಮಾನರ ನಡುವೆ ಕೋಮು ಗಲಭೆಗಳು ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ, ಕೆಲವು ಗಲಭೆಗಳು ನಡೆದಿರುವುದು ಸಹ ಬೆಳಕಿಗೆ ಬಂದಿದೆ. ಇದರಿಂದ ಎಚ್ಚೆತ್ತುಕೊಂಡ ಉತ್ತರ ಪ್ರದೇಶ ಶಿಯಾ ವಕ್ಫ್​ ಬೋರ್ಡ್ ಸುಪ್ರೀಂ ಕೋರ್ಟ್ ಗೆ ಮುಸ್ಲಿಂ ಧ್ವಜವನ್ನು ಬ್ಯಾನ್ ಮಾಡುವಂತೆ ಅರ್ಜಿ ಸಲ್ಲಿಸಿತ್ತು.

ಪಾಕಿಸ್ತಾನದ ಧ್ವಜವನ್ನು ಹೋಲುವ ಈ ಧ್ವಜವು ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಮ್ ಸಮುದಾಯವು ಹಾರಿಸುವಾಗ ಅದನ್ನು ಪಾಕಿಸ್ತಾನ ದ್ವಜ ವೆಂದು ತಪ್ಪಾಗಿ ಅರ್ಥೈಸಿಕೊಂಡು ಕೋಮುಗಲಭೆಗಳು ನಡೆಯುವ ಸಾಧ್ಯತೆಗಳು ದಟ್ಟವಾಗಿವೆ ಮತ್ತು ನಡೆದಿವೆ ಎಂಬುದನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ಕೊಡುವುದರಲ್ಲಿ ಶಿಯಾ ವಕ್ಫ್ ಬೋರ್ಡ್ ಸಮಿತಿ ಯಶಸ್ವಿಯಾಗಿದೆ.

ಜತೆಗೆ ಇಸ್ಲಾಂ ಧರ್ಮಕ್ಕೂ, ಹಸಿರು ಬಾವುಟಕ್ಕೂ ಯಾವುದೇ ಸಂಬಂಧವಿಲ್ಲ. ಹಸಿರು ಬಾವುಟದಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ ಎಂದು ಅರ್ಜಿದಾರರು ಕೋರ್ಟ್​​ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ವಿಚಾರಣೆ ಮುಗಿದಿರುವುದರಿಂದ, ಕೇಂದ್ರ ಸರ್ಕಾರವು ಯಾವುದೇ ತಕರಾರಿಲ್ಲದೆ ಅನುಮತಿ ನೀಡುವುದನ್ನು ಇಡೀ ಭಾರತದ ದೇಶಭಕ್ತರು ಕಾದು ನೋಡುತ್ತಿದ್ದಾರೆ, ಕೆಲವರು ಮುಸ್ಲಿಮರು ಕೂಡ ಇದಕ್ಕೆ ಬೆಂಬಲ ವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಇದಕ್ಕೆ ಅನುಮತಿಸಿ ದ್ದಲ್ಲಿ ಮತ್ತೊಂದು ಐತಿಹಾಸಿಕ ದಿನ ಭಾರತದ ಇತಿಹಾಸದಲ್ಲಿ ನೊಂದಣಿ ಯಾಗಲಿದೆ.

ಇಷ್ಟೇ ಅಲ್ಲದೆ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಯಾವ ಧರ್ಮದ ಬಾವುಟಗಳು ಇಲ್ಲದೆ ಇಡೀ ಭಾರತದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ದಿನವನ್ನು ಪ್ರತಿಯೊಬ್ಬ ಭಾರತೀಯರು ಮತ್ತು ದೇಶಭಕ್ತರು ಎದುರುನೋಡುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಈ ದಿನವೂ ಸಹ ದೂರವಿಲ್ಲ ಎಂಬಂತೆ ಭಾಸವಾಗುತ್ತಿದೆ.