ಬೆಂಗಳೂರಿನೊಂದಿಗಿನ ತಮ್ಮ ಹಳೆ ನೆನಪುಗಳನ್ನು ಬಿಚ್ಚಿಟ್ಟ ರಘು ದೀಕ್ಷಿತ್ ಹಾಗೂ ರಶ್ಮಿಕಾ ಮಂದಣ್ಣ

ಬೆಂಗಳೂರಿನೊಂದಿಗಿನ ತಮ್ಮ ಹಳೆ ನೆನಪುಗಳನ್ನು ಬಿಚ್ಚಿಟ್ಟ ರಘು ದೀಕ್ಷಿತ್ ಹಾಗೂ ರಶ್ಮಿಕಾ ಮಂದಣ್ಣ

0

ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ಸಾಕಷ್ಟು ಬದಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವವರನ್ನು ಆ ಬಗ್ಗೆ ಕೇಳಬೇಕು. ನಗರದ ಬಗ್ಗೆ ಮಾತನಾಡುವ ಅವರ ಮಾತಿನಲ್ಲಿ ಗತ ಕಾಲದ ಸ್ಮರಣೆಯಿರುತ್ತದೆ.  ನಗರದ ಈ ಬದಲಾವಣೆಯನ್ನು ಅವರು ಸ್ವಾಗತಿಸಿದ್ದಾರೆ. #FlirtWithYourCity ಅಭಿಯಾನದಲ್ಲಿ  ಬೆಂಗಳೂರು ನಗರದ ಬಗ್ಗೆ ಈ ಇಬ್ಬರು ಖ್ಯಾತನಾಮರು ಸಂಭಾಷಣೆ ನಡೆಸುವಾಗ ನಗರದ ಬದಲಾವಣೆಯೊಂದಿಗೆ ಹೇಗೆ ಫ್ಲರ್ಟ್ ಮಾಡಿದ್ದಾರೆ ಎಂಬುದನ್ನು ನಾವು ತಿಳಿಯೋಣ.

ಗಾಯಕ ರಘು ದೀಕ್ಷಿತ್ ನೆನಪುಗಳನ್ನು ಹಂಚಿಕೊಳ್ಳುತ್ತಾ, “ನಾವು ಬೆಂಗಳೂರಿಗೆ ಬಂದಂದಿನಿಂದ ಅಂದರೆ ಸುಮಾರು 20 ವರ್ಷಗಳಿಗೂ ಹಿಂದಿನಿಂದ ಕೃಷ್ಣ ರಾಜೇಂದ್ರ ಹೂವಿನ ಮಾರುಕಟ್ಟೆಯಲ್ಲಿ ಮಾರಾಟಗಾರರ ಮಧ್ಯ ಕುಳಿತಿದ್ದೇವೆ. ಕಳೆದ ಹಲವಾರು ವರ್ಷಗಳಿಂದ ಅದೆಷ್ಟೋ ಜನ ಬಂದು ನೆಲೆಸಿದ್ದಾರೆ. ನನ್ನ ಪ್ರಕಾರ ಇಲ್ಲಿನ ಹೂವುಗಳು ನಗರವನ್ನು ಅತ್ಯುತ್ತಮವಾಗಿ ಪ್ರತಿನಿಧಿಸುತ್ತವೆ.

ನಗರ ಬಿಇಎಲ್ ರಸ್ತೆಯಲ್ಲಿರುವ ರಾಮಯ್ಯಾ ಕಾಲೇಜಿನಲ್ಲಿ ಪದವಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ, ಆ ರಸ್ತೆಯ ಬಗ್ಗೆ ಪ್ರೇಮ ವ್ಯಕ್ತಪಡಿಸುತ್ತಾ, “2014ರಿಂದ ನಾನಿಲ್ಲಿ ವಾಸಿಸುತ್ತಿದ್ದೇನೆ. ನನ್ನ ಕುಟುಂಬ ನನ್ನ ಬಗ್ಗೆ ಭೀತಿಯಿಂದಿತ್ತು. ಹಿಂದೆ ಈ ಪ್ರದೇಶ ಅಭಿವೃದ್ಧಿಯಿಂದ ದೂರ ಉಳಿದಿತ್ತು. ಹೀಗಾಗಿ ಜನ ಇಲ್ಲಿ ವಾಸಿಸಲು ಹಿಂಜರಿಯುತ್ತಿದ್ದರು. ಕಾಲ ಕಳೆದಂತೆ ಬೆಂಗಳೂರು ನಗರ ಮಹಿಳೆಯರಿಗೂ ಸೇರಿದಂತೆ ಎಲ್ಲರಿಗೂ ಸುರಕ್ಷಿತ ನಗರವಾಗಿ ಬದಲಾಗಿದೆ. ರಾತ್ರಿ ವೇಳೆಯೂ ಹೆಣ್ಣುಮಕ್ಕಳು ಭೀತಿಯಿಲ್ಲದೆ ಓಡಾಡುವುದೇ ಇದಕ್ಕೆ ಸಾಕ್ಷಿ. ಇಲ್ಲಿ ಜೀವಿಸುವುದು ನಿಜಕ್ಕೂ ಹೆಮ್ಮೆ!” ಎಂದರು.