ಸೈನಿಕರಿಗೆ ಇರಲಿದೆ ಸೂಪರ್ ಪವರ್: ಕಾಂಗ್ರೆಸ್ ಕುತಂತ್ರ ನೀತಿಗೆ ಸೆಡ್ಡು ಹೊಡೆದ ಬಿಜೆಪಿ.

ಕೆಲವು ದಿನಗಳ ಹಿಂದಷ್ಟೇ ಉಗ್ರರನ್ನು ಮಟ್ಟ ಹಾಕಲು ಅಡ್ಡಗಾಲಾಗಿದ್ದ ಸರ್ಕಾರವನ್ನು ಮೈತ್ರಿ ಮುರಿದುಕೊಂಡು ಬೀಳಿಸಿದ್ದ ಬಿ ಜೆ ಪಿ ಪಕ್ಷ ಉಗ್ರರನ್ನು ಮಟ್ಟ ಹಾಕಲು ರಾಷ್ಟ್ರಪತಿ ಆಡಳಿತವೇ ಸರಿ ಎಂಬ ನಿರ್ಧಾರಕ್ಕೆ ಬಂದಿತ್ತು. ಅದರ ಪ್ರತಿಫಲವಾಗಿ ಸೇನೆಯು ಭರ್ಜರಿಯಾಗಿ ಉಗ್ರರ ಭೇಟೆಯನ್ನು ಆರಂಭಿಸಿತ್ತು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಇದು ಯಾಕೆ ಇಷ್ಟವಾಗಿಲ್ಲವೋ ತಿಳಿಯುತ್ತಿಲ್ಲ .

ಎಂದಿನಂತೆ ಸೇನೆಯ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ಕಾಂಗ್ರೆಸ್ ನಾಯಕರು ಆರಂಭಿಸಿದರು, ಆದರೆ ಇದ್ಯಾವುದಕ್ಕೂ ಜಗ್ಗದ ಕೇಂದ್ರ ಸರ್ಕಾರ ರಾಷ್ತ್ರಪತಿ ಆದಳಿಕೆಗೆ ಅಸ್ತು ಎಂದಿತ್ತು. ಸೇನೆಯ ಅಬ್ಬರ ನಿಲ್ಲುಸುವುದರಿಂದ ಬಿ ಜೆ ಪಿ ಪಕ್ಷಕ್ಕೆ ಹೊಡೆತ ನೀಡುವ ಸಲುವಾಗಿ ಕಾಂಗ್ರೆಸ್ ಪಕ್ಷ ಉಳಿದ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲು ಪ್ಲಾನ್ ಮಾಡಿತ್ತು.ಆದರೆ ಈ ಪ್ಲಾನ್ ಗೆ ಮೋದಿ ರವರು ಅಡ್ಡಗಾಲಾಗಿದ್ದಾರೆ.

ಅಷ್ಟಕ್ಕೂ ಏನದು ಪ್ಲಾನ್ ? ಏನು ಮಾಡಿದ್ದಾರೆ ಮೋದಿ ?

ಇದ್ದಕ್ಕಿದ್ದ ಹಾಗೆ ಎಂದಿನಂತೆ ತಮ್ಮ ಚಾಣಕ್ಯನಾದ ಅಮಿತ್ ಶಾ ರವರನ್ನು ಕಣಕ್ಕೆ ಇಳಿಸಿದಾ ಮೋದಿ ರವರು ಮೊದಲು ಕಾಶ್ಮೀರದ ಬಿ ಜೆ ಪಿ ಪಕ್ಷದ ಅಧ್ಯಕ್ಷರಾದ ನಿರ್ಮಲ್ ಸಿಂಗ್ ರವರನ್ನು ಭೇಟಿ ಮಾಡಿ ಚರ್ಚೆ ನಡೆಸಲು ಸೂಚಿಸುತ್ತಾರೆ.ಇದರ ಪ್ರತಿಫಲವಾಗಿ ಪಿಡಿಪಿ ಪಕ್ಷದ ಅತೃಪ್ತ ಶಾಸಕರು ಹಾಗೂ ಇತರ ಕೆಲವು ಶಾಸಕರನ್ನು ಒಟ್ಟುಗೂಡಿಸಿಕೊಂಡು ಬಿಜೆಪಿ ಸ್ವತಂತ್ರ್ಯವಾಗಿ ಅಧಿಕಾರ ಹಿಡಿಯಲು ಸಜ್ಜಾಗಿದೆ.

narendra-modi-full-hd-wallpaper

ನಿನ್ನೆ ಸಂಜೆ ನಿರ್ಮಲ ಸಿಂಗ್ ಅವರನ್ನು ಭೇಟಿ ಮಾಡಿದ ಪ್ರಧಾನಿ ನಿನ್ನೆ ಬೆಳಿಗ್ಗೆ ಕಾಶ್ಮೀರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಹದೇವ್ ಅವರನ್ನು ಭೇಟಿ ಮಾಡಿ ಇದೇ ವಿಷಯ ಮಾತನಾಡಿದ್ದಾರೆ ಎನ್ನಲಾಗಿದೆ.ಕಾಶ್ಮೀರದಲ್ಲಿ ಸರ್ಕಾರ ರಚಿಸಲು 44 ಶಾಸಕರ ಬಲ ಬೇಕಿದ್ದು ಬಿಜೆಪಿಗೆ ಸದ್ಯಕ್ಕೆ 25 ಸ್ವಂತ ಶಾಸಕರ ಬಲ ಮಾತ್ರವೇ ಇದೆ. ಆದರೆ ಪಿಡಿಪಿಯ ಸುಮಾರು 14 ಶಾಸಕರು ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದು, ಇವರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಜೊತೆಗೆ ಪಕ್ಷೇತರರರು, ಮತ್ತು ಇತರ ಸಣ್ಣ ಪಕ್ಷಗಳು ಸೇರಿಸಿದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ಮ್ಯಾಜಿಕ್ ಸಂಖ್ಯೆ ದೊರೆಯುತ್ತದೆ.

ಇದರಿಂದ ಸೈನಿಕರಿಗೆ ಸಂಪೂರ್ಣ ಸಹಕಾರವನ್ನು ನೀಡಿ ಉಗ್ರರ ಧಮನ ಮಾಡಭಹುದು ಎಂಬುದು ಮೋದಿ ಮತ್ತು ಚಾಣಕ್ಯನ ಪ್ಲಾನ್ ಆಗಿದೆ. ಮುಂದೆ ಏನು ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ

Post Author: Ravi Yadav