ಕುತಂತ್ರಗಳು ನಡೆಯಲಿಲ್ಲ: ಬಿಎಸ್ ವೈಗೆ ಮತ್ತೊಮ್ಮೆ ಗೆಲುವು

ಕುತಂತ್ರಗಳು ನಡೆಯಲಿಲ್ಲ: ಬಿಎಸ್ ವೈಗೆ ಮತ್ತೊಮ್ಮೆ ಗೆಲುವು

0

ಹೌದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ಬಿಜೆಪಿಯಲ್ಲಿ ಒಳಜಗಳ ನಡೆಯುತ್ತಿವೆ ಎಂಬ ಮಾಹಿತಿಗಳಿವೆ. ಅದಕ್ಕೆ ತಕ್ಕಂತೆ ಕೆಲವೇ ಕೆಲವು ದಿನಗಳ ಹಿಂದೆ ಬಿಜೆಪಿ ಪಕ್ಷದ ಹೈಕಮಾಂಡ್ ಗೆ ಪತ್ರವೊಂದನ್ನು ಬಿಜೆಪಿ ಪಕ್ಷದ ಕೆಲವು ಮುಖಂಡರು ಬರೆದಿದ್ದರು.


ಅಷ್ಟಕ್ಕೂ ವಿಷಯದ ಮೂಲವೇನು?
ಕೆಲವು ದಿನಗಳ ಹಿಂದೆ ಬಿಜೆಪಿ ಪಕ್ಷದ ಹೈಕಮಾಂಡಿಗೆ ಕರ್ನಾಟಕ ಬಿಜೆಪಿ ಪಕ್ಷದ ಕೆಲವು ಮುಖಂಡರು ಪತ್ರವನ್ನು ಬರೆದಿದ್ದರು. ಈ ಪತ್ರದಲ್ಲಿ ಉಲ್ಲೇಖಿಸಿದ ಪ್ರಕಾರ, ಬಿ ಎಸ್ ವೈ ರವರು ವಿಧಾನಸಭಾ ವಿರೋಧ ಪಕ್ಷದ ನಾಯಕ ರಾಗಿ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಎರಡು ಹುದ್ದೆಯಲ್ಲಿ ಮುಂದುವರೆಯುವುದಕ್ಕೆ ಸ್ವ ಪಕ್ಷದಿಂದ ಕೆಲವರಿಗೆ ಅಸಮಾಧಾನವಿದೆ, ದಯವಿಟ್ಟು ಯಾವುದಾದರೂ ಒಂದು ಹುದ್ದೆಯನ್ನು ಬೇರೆಯವರಿಗೆ ನೀಡಬೇಕೆಂದು ಕೆಲವು ಬಿಜೆಪಿಯ ನಾಯಕರು ಆಗ್ರಹಿಸಿದ್ದರು.

ಅದರಲ್ಲಿಯೂ ಬಿ ಎಸ್ ವೈ ರವರನ್ನು ರಾಜ್ಯ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿ ಯಾರಾದರೂ ಯುವ ನಾಯಕನಿಗೆ ಆ ಹುದ್ದೆಯನ್ನು ನೀಡಿ ಲೋಕಸಭಾ ಚುನಾವಣೆಯಲ್ಲಿ ಚೈತನ್ಯದಿಂದ ಓಡಾಡುವಂತೆ ಮಾಡಬೇಕು ಎಂದು ವಿನಂತಿಸಿ ಕೊಳ್ಳಲಾಗಿತ್ತು.


ಆದರೆ ಹೈಕಮಾಂಡ್ ಈ ಬೇಡಿಕೆಗಳಿಗೆ ಯಾವುದೇ ಸೊಪ್ಪು ಹಾಕದೆ ಕೆಲವು ಗುರಿಗಳನ್ನು ನೀಡಿ ಬಿಎಸ್ವೈ ರವರನ್ನು ಮುಂದಿನ ಲೋಕಸಭಾ ಚುನಾವಣೆಯ ವರೆಗೂ ರಾಜ್ಯ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಬೇಕು ಎಂದು ಆದೇಶಿಸಿದೆ.

ಅಷ್ಟಕ್ಕೂ ಆ ಗುರಿಯಾದರೂ ಏನು?

ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆಯು ನಡೆಯಲಿದ್ದು ಕರ್ನಾಟಕದಲ್ಲಿನ 28 ಸ್ಥಾನಗಳಲ್ಲಿ ಕನಿಷ್ಠ 25 ಸ್ಥಾನಗಳನ್ನು ಬಿಜೆಪಿ ಪಕ್ಷಕ್ಕೆ ಗೆಲ್ಲಿಸಿಕೊಡುವ ಬೃಹತ್ ಜವಾಬ್ದಾರಿಯನ್ನು ಹೈಕಮಾಂಡ್ ಬಿಎಸ್ ವೈ ಅವರ ಹೆಗಲಿಗೆ ಏರಿಸಿದೆ, ಆಪ್ತವಲಯದಲ್ಲಿ ವಿರೋಧವಿದ್ದರೂ ಬಿಎಸ್ ವೈ ರವರಿಗೆ ರಾಜ್ಯದೆಲ್ಲೆಡೆ ಇರುವ ವರ್ಚಸ್ಸು ಹೈಕಮಾಂಡಿಗೆ ತಿಳಿದಂತಿದೆ.

ಆದರೆ ಬಿಎಸ್ ವೈ ರವರು ಈ ಗುರಿಯನ್ನು ಮುಟ್ಟಲು ದಾರಿ ಸುಲಭವಾಗಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ, ಬಿಎಸ್ ವೈ ರವರು ಏನು ಮಾಸ್ಟರ್ ಪ್ಲಾನ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು