ಕನ್ನಡದ ಕೋಟ್ಯಾಧಿಪತಿಯಲ್ಲಿ ಯಶ್ : ಗೆದ್ದದ್ದು ಎಷ್ಟು ಲಕ್ಷ ಗೊತ್ತಾ?

ಕನ್ನಡದ ಕೋಟ್ಯಾಧಿಪತಿಯಲ್ಲಿ ಯಶ್ : ಗೆದ್ದದ್ದು ಎಷ್ಟು ಲಕ್ಷ ಗೊತ್ತಾ?

0

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಾಧಿಪತಿ ಎಂಬ ಕಾರ್ಯಕ್ರಮದಲ್ಲಿ ನಟ ಯಶ್ ರವರು ಭಾಗವಹಿಸಿದ್ದಾರೆ. ಅವರು ಗೆದ್ದ ಹಣವೆಷ್ಟು ಮತ್ತು ಅದರ ಉಪಯೋಗ ನೋಡಿದರೆ ಶಹಬ್ಬಾಸ್ ಎನ್ನುತ್ತೀರಾ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಮಾನ್ಯ ಸ್ಪರ್ಧಿಗಳ ಜೊತೆ ಪ್ರತಿವಾರವೂ ಒಬ್ಬ ಸೆಲೆಬ್ರಿಟಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ, ಅದರಂತೆ ಈ ವಾರ ಯಶ್ ರವರು ಕನ್ನಡದ ಕೋಟ್ಯಾಧಿಪತಿಯಲ್ಲಿ ಪಾಲ್ಗೊಂಡಿದ್ದಾರೆ.ಕಾರ್ಯಕ್ರಮದ ವೇಳೆ ಯಶ್ ರವರು ತಮ್ಮ ಹಲವು ವಿಚಾರಗಳನ್ನು ಮತ್ತು ತಾವು ಎದುರಿಸಿದ ಸವಾಲುಗಳನ್ನು ಹಂಚಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.


ಕಾರ್ಯಕ್ರಮದಲ್ಲಿ ಬರೋಬ್ಬರಿ 25 ಲಕ್ಷ ಗೆದ್ದಿರುವ ನಟ ಯಶ್ ರವರು ಈ ಹಣದಲ್ಲಿ ಒಂದು ನಯಾ ಪೈಸೆಯನ್ನು ಸಹ ತಾವು ಬಳಸಿಕೊಳ್ಳದೆ ತಮ್ಮದೇ ಸಾರಥ್ಯದ ಯಶೋಮಾರ್ಗ ಟ್ರಸ್ಟ್ ಗೆ ನೀಡಲು ನಿರ್ಧರಿಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಯಶ್ ರವರ ಫೋಟೋಗಳು ಹರಿದಾಡುತ್ತಿದ್ದು ಸಂಚಿಕೆಗಾಗಿ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ