ಬಿಗ್ ನ್ಯೂಸ್: ಭಾರತದ ಆರ್ಥಿಕತೆಗೆ ಮತ್ತು ಮೋದಿ ಸರ್ಕಾರಕ್ಕೆ ಮತ್ತೊಂದು ಗರಿ

ಬಿಗ್ ನ್ಯೂಸ್: ಭಾರತದ ಆರ್ಥಿಕತೆಗೆ ಮತ್ತು ಮೋದಿ ಸರ್ಕಾರಕ್ಕೆ ಮತ್ತೊಂದು ಗರಿ

0

ಹೌದು ಭಾರತದ ಆರ್ಥಿಕತೆಗೆ ಮತ್ತು ಮೋದಿ ರವರ ದೃಢನಿರ್ಧಾರ ಗಳಿಗೆ ಮತ್ತೊಂದು ಗರಿ. ವಿರೋಧ ಪಕ್ಷಗಳು ಭಾರತದ ಆರ್ಥಿಕತೆಯನ್ನುಮುಂದಿಟ್ಟುಕೊಂಡು ಮೋದಿ ಸರ್ಕಾರವನ್ನು ಅಣಕಿಸುತ್ತಿದ್ದ ಕಾಲ ಇನ್ನು ಮುಂದೆ ನೋಡಲು ಸಾಧ್ಯವಿಲ್ಲ ಎಂಬ ಅಂಕಿ ಅಂಶ ಹೊರಬಿದ್ದಿದೆ. ವಿಶ್ವಸಂಸ್ಥೆಯು ಈ ಬಾರಿ ಅಂಕಿ ಅಂಶಗಳನ್ನು ಹೊರ ಹಾಕಿದ್ದು ಪ್ರಪಂಚದಲ್ಲೆಡೆ ತಲ್ಲಣ ಉಂಟಾಗಿದೆ. ಭಾರತದ ಶತ್ರು ರಾಷ್ಟ್ರಗಳಾದ ಚೀನಾ ಗೆ ಶಾಕ್ ಆಗಿದೆ.

ನೋಟು ಅಮಾನ್ಯೀಕರಣದ ನಂತರ ಭಾರತದ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ ಎಂದು ವಿರೋಧಿಸುತ್ತಿದ್ದ ವಿರೋಧ ಪಕ್ಷಗಳು ಇನ್ನು ಮುಂದೆ ಹೊಸ ಕಾರಣವನ್ನು ಹುಡುಕಿಕೊಳ್ಳಬೇಕಾಗಿದೆ. ಅಷ್ಟಕ್ಕೂ ವಿಷಯವೇನೆಂಬುದನ್ನು ತಿಳಿಯಲು ಮುಂದೆ ಓದಿ.

2017ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ 2.597 ಟ್ರಿಲಿಯನ್ ಡಾಲರ್ ನಷ್ಟಾಗಿದ್ದು, 2.582 ಟ್ರಿಲಿಯನ್ ಜಿಡಿಪಿ ಹೊಂದಿರುವ ಫ್ರಾನ್ಸ್ ನ್ನು ಹಿಂದಿಕ್ಕುವ ಮೂಲಕ ವಿಶ್ವದ 6 ನೇ ಅತಿ ದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ವಿಶ್ವ ಬ್ಯಾಂಕ್ ನ ಈ ಅಂಕಿ ಅಂಶಗಳು ಇದನ್ನು ಪುಷ್ಠಿಕರೀಸಿವೆ. ಹಲವು ತ್ರೈಮಾಸಿಕಗಳಲ್ಲಿ ಕುಂಠಿತವಾಗಿದ್ದ ಭಾರತದ ಜಿಡಿಪಿ 2017 ರ ಜುಲೈ ನಂತರ ಚೇತರಿಕೆ ಕಂಡಿದ್ದು ಈ ಸಾಧನೆ ಮಾಡಲು ಕಾರಣವಾಗಿದೆ.

67 ಮಿಲಿಯನ್ ಜನಸಂಖ್ಯೆಯುಳ್ಳ ಫ್ರಾನ್ಸ್ ನ ಜಿಡಿಪಿ 2.582 ಟ್ರಿಲಿಯನ್ ಡಾಲರ್ ನಷ್ಟಿತ್ತು, ಭಾರತದ ತಲಾದಾಯಕ್ಕಿಂತ 20 ರಷ್ಟು ಹೆಚ್ಚಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಯುಎಸ್ ಮೊದಲನೇ ಸ್ಥಾನ ಪಡೆದುಕೊಂಡಿದ್ದರೆ ಚೀನಾ ಮತ್ತು ಜಪಾನ್ ಹಾಗೂ ಜರ್ಮನಿ ನಂತರದ ಸ್ಥಾನದಲ್ಲಿವೆ.ಇಂಟರ್ ನ್ಯಾಶನಲ್ ಮಾನಿಟರಿ ಫಂಡ್ ಹೇಳುವಂತೆ ಮುಂದಿನ 2018ರಲ್ಲಿ ಭಾರತದ ಜಿಡಿಪಿ ಶೇ.7.4ರಷ್ಟು ಏರಿಕೆ ಕಣಲಿದ್ದು 2019ರಲ್ಲಿ ಶೇ. 7.8ಕ್ಕೆ ತಲುಪಲಿದೆ ಎಂದು ಅಂದಾಜಿಸಿದೆ