ಕಾಂಗ್ರೆಸ್ ಮತ್ತು ರೈತರ ಸಂಬಂಧ ವಿವರಿಸಿದ ಮೋದಿ

ಕಾಂಗ್ರೆಸ್ ಮತ್ತು ರೈತರ ಸಂಬಂಧ ವಿವರಿಸಿದ ಮೋದಿ

0

ಹೌದು, ಮೊದಲಿಂದಲೂ ರೈತರ ಮತಗಳು ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಕ್ಕೆ ಬೀಳುತ್ತಿದ್ದವು, ಈಗ ಕಾಲ ಬದಲಾಗಿದೆ ಎಂಬ ಅಂಶವನ್ನು ಮೋದಿ ವಿವರಿಸಿದ್ದಾರೆ. ಅವರ ಮಾತುಗಳನ್ನು ಒಮ್ಮೆ ನೀವೇ ಓದಿ.ಪಂಜಾಬ್ನ ಮುಕ್¤ಸಾರ್ ನಲ್ಲಿ ಎನ್ಡಿಎ ಅಂಗಪಕ್ಷ ಶಿರೋಮಣಿ ಆಕಾಲಿ ದಳ ಬುಧವಾರ ಆಯೋಜಿಸಿದ್ದ ಕಿಸಾನ್ ಕಲ್ಯಾಣ್ ಬೃಹತ್ ಸಮಾವೇಶದಲ್ಲಿ ರೈತರನ್ನು ನರೇಂದ್ರ ಮೋದಿ ರವರು ಉದ್ದೇಶಿಸಿ ಮಾತನಾಡಿದರು. 

ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ಈಗ ನಿದ್ದೆ ಬರುತ್ತಿಲ್ಲ, ಕಾರಣ ಈಗ ದೇಶದ ರೈತರು ಬದಲಾಗಿದ್ದಾರೆ. ಬರೋಬ್ಬರಿ ೭೦ ವರ್ಷಗಳ ರೈತರಿಗೆ ಸುಳ್ಳು ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್ಗೆ ಈಗ ಬಾರಿ ಶಾಕ್ ಆಗಿದೆ ಕಾರಣ ಈಗ ರೈತರು ನೆಮ್ಮದಿಯಿಂದ ನಿದ್ದೆ ಮಾಡಿ ಕೇಂದ್ರ ಸರ್ಕಾರದ ಯೋಜನೆಗಳನ್ನು ನೋಡಿ ನಮಗೆ ಮತ ನೀಡುತ್ತಿದ್ದಾರೆ.

ಮೊನ್ನೆಯಷ್ಟೇ ಸರ್ಕಾರ ೧೪ ಮುಂಗಾರು ಬೆಳೆಗಳ ಕನಿಷ್ಠ ಬೆಲೆಯನ್ನು ಏರಿಸಿದನ್ನು ನೆನೆದ ಮೋದಿ ರವರು ಮೊನ್ನೆಯಷ್ಟೇ ಸರ್ಕಾರ ೧೪ ಮುಂಗಾರು ಬೆಳೆಗಳ ಕನಿಷ್ಠ ಬೆಲೆಯನ್ನು ಏರಿಸಿದನ್ನು ನೆನೆದ ಮೋದಿ ರವರು ಕಾಂಗ್ರೆಸ್ ವಿರುದ್ಧ ಆರೋಪಗಳ ಪಟ್ಟಿಯನ್ನೇ ನೀಡಿದರು, ಇದೆ ವೇಳೆ ರೈತರು ಮೋದಿ ರವರಿಗೆ ಸನ್ಮಾನ ಮಾಡಿ ಅಭಿನಂದಿಸಿದರು .

ಕೃಷಿ ಉತ್ಪನ್ನಗಳನ್ನು ದಾಖಲೆ ಸಂಖ್ಯೆಯಲ್ಲಿ ಉತ್ಪಾದಿಸಿ ನೀಡಿದ ರೈತರಿಗೆ ನಾನು ಶಿರಬಾಗಿ ನಮಿಸುತ್ತೇನೆ. ಅವರ ಕಠಿಣ ಶ್ರಮಕ್ಕೆ ನಾನು ಗೌರವ ನೀಡುತ್ತೇನೆ. ಕೊಟ್ಟ ಮಾತಿನಂತೆ 2020 ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದರು.ರೈತರು ಕಾಂಗ್ರೆಸ್ ಮೇಲೆ ವಿಶ್ವಾಸವಿರಿಸಿದ್ದರು ಆದರೆ ಅವರ ಶ್ರಮಕ್ಕೆ ಕಾಂಗ್ರೆಸ್ ಬೆಲೆ ಕೊಟ್ಟಿಲ್ಲ. ರೈತರನ್ನು ವೋಟ್ ಬ್ಯಾಂಕ್ ಆಗಿ ಮಾತ್ರ ನೋಡಿ ಕೊಂಡಿತ್ತು, ಆದರೆ ಈಗಿನ ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದರು.ರಾಜ್ಯದ ರೈತರು ಪಂಜಾಬನ್ನು ಭಾರತದ ಕೃಷಿ ಶಕ್ತಿಯನ್ನಾಗಿ ರೂಪಿಸಿದ್ದಾರೆ ಇದಕ್ಕಾಗಿ ಅಭಿನಂದನೆಗಳು ಎಂದರು.