ಜೆಡಿಎಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ

ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಬಿ ಎಸ್ ಯಡಿಯೂರಪ್ಪನವರ ಇಂದು ಮೈತ್ರಿ ಸರ್ಕಾರದ ಚೊಚ್ಚಲ ಅಧಿವೇಶನಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ಸಮಯವನ್ನು ಬಳಸಿಕೊಂಡ ಯಡಿಯೂರಪ್ಪನವರು ಸರ್ಕಾರದ ವೈಫಲ್ಯತೆಗಳನ್ನು ವಿವರಿಸಿ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು. ಅವರು ಏನು ಹೇಳಿದರು ಎಂಬುದನ್ನು ಅವರ ಮಾತಿನಲ್ಲೇ ಕೇಳಿ.

ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇವೆ ಎಂದಿದ್ದ ಕುಮಾರಸ್ವಾಮಿ ರವರು ಕೊಟ್ಟ ಮಾತು ಉಳಿಸಿಕೊಂಡರೆ ಒಳಿತು ಮುಂದಿನ ಬಜೆಟ್ ನಲ್ಲಿ ಸಾಲ ಮನ್ನಾ ಘೋಷಣೆ ಮಾಡಿದರೆ ಅಷ್ಟೇ ಸಾಕು, ಬಜೆಟ್ ನ ಬಗ್ಗೆ ನಾನು ಕಾಯುತ್ತಿದ್ದೇನೆ ಎಂದರು. ನೂರಾ ನಾಲ್ಕು ಶಾಸಕರು ಪ್ರತಿಪಕ್ಷದ ಸ್ಥಾನದಲ್ಲಿ ಹಾಗೆ 37 ಶಾಸಕರು ಆಡಳಿತ ಪಕ್ಷವನ್ನು ನಡೆಸುತ್ತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಸನ್ಮಾನ್ಯ ಬಿಎಸ್ ಯಡಿಯೂರಪ್ಪ ನವರು ಹೇಳಿದ್ದಾರೆ.

ಇದೇ ವೇಳೆಯಲ್ಲಿ ಪ್ರತಿಪಕ್ಷವಾಗಿ ಆಡಳಿತ ಪಕ್ಷಕ್ಕೆ ನಾವು ಎಲ್ಲಾ ರೀತಿಯಲ್ಲಿಆಡಳಿತಕ್ಕೆ ಬೇಕಾದ ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದರು.

Post Author: Ravi Yadav