ಹೀಗಿದೆ ನೋಡಿ ಪ್ರತಾಪ್ ಸಿಂಹರವರ ರಿಪೋರ್ಟ್ ಕಾರ್ಡ್

ಇತ್ತೀಚಿಗಷ್ಟೇ ಪ್ರತಾಪ್ ಸಿಂಹ ರವರು ಇಂಡಿಯಾ ಮೋದಿ ಆಡಳಿತದಲ್ಲಿ ತಮ್ಮ ಲೋಕಸಭಾ ಕ್ಷೇತ್ರವಾದ ಮೈಸೂರು-ಕೊಡಗು ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ವಿವರವುಳ್ಳ ಪುಸ್ತಕವನ್ನು ಬಿಡುಗಡೆ ಗೊಳಿಸಿದ್ದಾರೆ.ಈ ಪುಸ್ತಕ 12 ಪುಟಗಳನ್ನು ಹೊಂದಿದ್ದು 30 ಅಂಶಗಳನ್ನು ಚಿತ್ರದ ಸಮೇತ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಅಷ್ಟಕ್ಕೂ ಮೋದಿ ಕೊಟ್ಟಿದ್ದೇನು ? ಪ್ರತಾಪ್ ಸಿಂಹ ತಂದಿದ್ದೇನು?


ಮೈಸೂರು ಬೆಂಗಳೂರು ಜೋಡಿ ರೈಲು ಹಳಿ ಹಾಕುವ ಕಾರ್ಯ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಆರಂಭವಾದರೂ ಬರೋಬ್ಬರಿ ಹತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ತನ್ನ ಅವಧಿಯಲ್ಲಿ ಪೂರ್ಣಗೊಳಿಸಿ ರಲಿಲ್ಲ. ಪ್ರತಾಪ್ ಸಿಂಹ ರವರು ಸಂಸದರಾದ ಪ್ರಾರಂಭದಲ್ಲಿ ರೈಲ್ವೆ ಸಚಿವರಾಗಿದ್ದ ಸದಾನಂದ ಗೌಡರಿಂದ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಸ್ವತಹ ಪ್ರಧಾನ ಮೋದಿ ರವರನ್ನು ಕರೆಸಿ ಉದ್ಘಾಟನೆ ಮಾಡಿಸಿದರು.

ಕೇವಲ ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ಮೈಸೂರಿನಲ್ಲಿ ತೆರೆಯುವಂತೆ ಮಾಡಿದರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೈಸೂರು ಮತ್ತು ಬೆಂಗಳೂರಿನ ನಡುವೆ ಕಾರ್ಮಿಕರು ನೌಕರರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೈಸೂರು ಮತ್ತು ಬೆಂಗಳೂರಿನ ನಡುವೆ ಕಾರ್ಮಿಕರು ನೌಕರರು ಮತ್ತು ಜನಸಾಮಾನ್ಯರು ಪ್ರತಿದಿನ ಓಡಾಡುತ್ತಾರೆ. ಇವರೆಲ್ಲರಿಗೂ ಅನುಕೂಲವಾಗುವಂತೆ ಮೈಸೂರು ಮತ್ತು ಬೆಂಗಳೂರು ನಡುವಿನ ರೈಲು ಗಳ ಸಂಖ್ಯೆಯನ್ನು ಹೆಚ್ಚಿಸಿದರು. ಇದರಲ್ಲಿ ಸಂಜೆ 6:30 ಕ್ಕೆ ವಿಶ್ವಮಾನವ, ಮೈಸೂರು-ಉದಯಪುರ ಪ್ಯಾಲೇಸ್ ಕ್ರೀಂ ಮತ್ತು ಮೈಸೂರು-ವಾರಣಾಸಿ ರೈಲುಗಳು ಸೇರಿವೆ.ದೇಶದ ಮೊದಲ ಬ್ರೈಲ್ ಎನೇಬಲ್ಡ್ ಸ್ಟೇಷನ್ ಎಂಬ ಖ್ಯಾತಿಗೆ ಮೈಸೂರು ನಿಲ್ದಾಣ ಪಾತ್ರವಾಗಿದೆ. ರೈಲು ನಿಲ್ದಾಣಕ್ಕೆ ಲಿಫ್ಟ್, ಎಲವೇಟರ್, ಬ್ಯಾಟರಿ ಚಾಲಿತ ಕಾರುಗಳು, ಇ-ಟಾಯ್ಲೆಟ್, ಸಬ್ ವೇ ಅಳವಡಿಸಲಾಗಿದೆ.


ಸ್ಯಾಟ್ ಲೇಟ್ ರೈಲ್ವೆ ಟರ್ಮಿನಲ್

ಮೈಸೂರಿನ ರೈಲು ನಿಲ್ದಾಣದಲ್ಲಿ ಜಾಗದ ಕೊರತೆ ಇದ್ದುದರಿಂದ ನಾಗನಹಳ್ಳಿಯಲ್ಲಿ ಬರೋಬರಿ 347 ಎಕರೆ ಜಮೀನಿನಲ್ಲಿ ಕೇಂದ್ರದಿಂದ 879 ಕೋಟಿ ವೆಚ್ಚದಲ್ಲಿ ಕರ್ನಾಟಕದ ಅತಿ ದೊಡ್ಡ ಸ್ಯಾಟ್ ಲೇಟ್ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಲು ಯೋಜನೆಯೊಂದನ್ನು ರೂಪಿಸಿದ್ದಾರೆ.

ಕುಡಿಯುವ ನೀರಿನ ವ್ಯವಸ್ಥೆ.

ಪ್ರಾಣಿ-ಪಕ್ಷಿಗಳು ಬಿದ್ದು ನಾರುತಿದ್ದ ವಿಜಯಪುರ ನೀರಿನ ಟ್ಯಾಂಕುಗಳನ್ನು ಅಮೃತ ಯೋಜನೆಯಡಿ ಬರೋಬ್ಬರಿ 29 ಕೋಟಿಯ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣ ಮಾಡಿಸುತ್ತಿದ್ದಾರೆ. ಯೋಜನೆ ಪೂರ್ಣಗೊಂಡಲ್ಲಿ 3 ಕೋಟಿ ಲೀಟರ್ ಸಾಮರ್ಥ್ಯದ ಟ್ಯಾಂಕುಗಳು ಮೈಸೂರಿನ ಶೇಕಡ 40 ಭಾಗಕ್ಕೆ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ಮಾಡಲಿವೆ.28 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ.

ರೈತರ ಪರ ಕಾಳಜಿ ವಹಿಸಿರುವ ಪ್ರತಾಪ್ ಸಿಂಹರವರು ತಂಬಾಕು ಬೆಳೆಗಾರರಿಗೆ ನೂರ ಮೂವತ್ತೈದು ರೂಪಾಯಿ ಬೆಲೆ ಕೊಡಿಸಿದ್ದಾರೆ. ರೈತರಿಗೆ ಕಡಿಮೆ ಮೊತ್ತದಲ್ಲಿ ಗೊಬ್ಬರ ಸಿಗುವಂತೆ ಮಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಪುನರ್ಜೀವನ ನೀಡಿ ಚೆನ್ನಾಗಿ ಸಂಪರ್ಕ ಕಲ್ಪಿಸಿದ್ದು ಇನ್ನು ಮೂರ್ನಾಲ್ಕು ಪ್ರದೇಶಗಳಿಗೆ ವಿಮಾನವನ್ನು ತಲುಪಿಸುವ ಗುರಿಯನ್ನು ಹೊಂದಿದ್ದಾರೆ. ಇ ಎಸ್ ಐ ಆಸ್ಪತ್ರೆಯನ್ನು ಪೂರ್ಣಗೊಳಿಸಿ ಬಡವರಿಗೆ ಸಹಾಯ ಮಾಡಿದ್ದಾರೆ.ಕೇವಲ 24 ತಿಂಗಳುಗಳಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಬರೋಬ್ಬರಿ ಏಳು ಸಾವಿರ ಕೋಟಿ ವೆಚ್ಚದಲ್ಲಿ 8 ಪತದ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.

ಮೈಸೂರಿನ ಸುತ್ತಲಿನ ಪ್ರದೇಶಗಳಲ್ಲಿ ನೆನಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗಳನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿ ಕೊಂಡು ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಅರಣ್ಯ ಇಲಾಖೆಯ ಸಹಕಾರದೊಂದಿಗೆ ರಿಂಗ್ ರಸ್ತೆ ಮತ್ತು ಸರ್ವಿಸ್ ರಸ್ತೆಯುದ್ದಕ್ಕೂ ಗಿಡಗಳನ್ನು ನೀಡಲಾಗಿದೆ.ಕೊಡಗಿಗೆ ರೈಲು ವ್ಯವಸ್ಥೆಯನ್ನು ಕಲ್ಪಿಸಲು 667 ಕೋಟಿ ವೆಚ್ಚದಲ್ಲಿ ರೈಲು ಸಂಪರ್ಕಕ್ಕೆ ಅನುಮೋದನೆ ಕೊಡಿಸಿದ್ದಾರೆ.

ಬರೋಬ್ಬರಿ ಇಪ್ಪತ್ತು ಸಾವಿರ ಕುಟುಂಬಕ್ಕೆ ಉಚಿತ ಗ್ಯಾಸ್ ವ್ಯವಸ್ಥೆಯನ್ನು ನೀಡಲಾಗಿದೆ. ಮೈಸೂರು ವಿಮಾನ ವಿಧಾನದ ವಿಸ್ತರಣೆಗೆ ಅಗತ್ಯವಾಗಿದ್ದ ರಾಷ್ಟ್ರೀಯ ಹೆದ್ದಾರಿಗೆ ಅಂಡರ್ ಪಾಸ್ ನಿರ್ಮಿಸಲು ಅನುಮತಿ ಕೊಡಿಸಿದ್ದಾರೆ. ಹಳೆ ಮೈಸೂರು ವಿಭಾಗದಲ್ಲಿ ಪರಿವಾರ ಮತ್ತು ಉತ್ತರ ಕರ್ನಾಟಕದಲ್ಲಿ ತಳವಾರು ಜನಾಂಗದವರು ಕಾನೂನು ತೊಡಕಿನಿಂದ ಉದ್ಯೋಗ ವಂಚಿತರಾಗಿದ್ದರು ಅವರ ಕೂರಿಗೆ ಸ್ಪಂದಿಸಿ ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ.

ಅಭಿವೃದ್ಧಿ ಸಾಧನೆಯ ವಿವರದ ಕೊನೆಯ ಪುಟದಲ್ಲಿ ಪ್ರತಾಪ್ ಸಿಂಹರವರು ಪ್ರಧಾನಿ ಮೋದಿ , ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯಾಧ್ಯಕ್ಷ ಯಡಿಯೂರಪ್ಪ ರವರೊಂದಿಗೆ ಇರುವ ಚಿತ್ರಗಳನ್ನು ಹಾಕಲಾಗಿದೆ. 2019 ರಲ್ಲಿ ಮೋದಿ ಅವರಿಗೆ ಮತ್ತೆ ಅಧಿಕಾರ ನೀಡಿದರೆ ದೇಶವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ

Post Author: Ravi Yadav