ಕಾಂಗ್ರೆಸ್ ಗೆ ತಿರುಗೇಟು ನೀಡಿದ ಮೋದಿ

ಜಿ ಎಸ್ ಟಿ ಜಾರಿಗೆ ಬಂದು ಒಂದು ವರ್ಷವಾಗಿದೆ. ಹಲವಾರು ಆರ್ಥಿಕ ತಜ್ಞರ ಸತತ ಪರಿಶ್ರಮದಿಂದ ದೇಶದೆಲ್ಲೆಡೆ ಜಿ ಎಸ್ ಟಿ ಎಂಬ ತೆರಿಗೆ ಪದ್ಧತಿಯನ್ನು ಮೋದಿ ಸರ್ಕಾರ ಜಾರಿಗೆ ತಂದಿತ್ತು. ಆದರೆ ಪ್ರತಿಪಕ್ಷದವರು ತೆರಿಗೆ ಪದ್ಧತಿಯನ್ನು ವಿರೋಧಿಸಿ ಎಲ್ಲಾ ವಸ್ತುಗಳ ತೆರಿಗೆಯನ್ನು ಶೇಕಡ ಹದಿನೆಂಟಕ್ಕೆ ನಿಗದಿಪಡಿಸಬೇಕೆಂದು ಅರ್ಥವಿಲ್ಲದ ಮಾತುಗಳನ್ನು ಆಡಿತ್ತು. ಪ್ರತಿಪಕ್ಷಗಳ ಈ ಟೀಕೆಗಳಿಗೆ ಮೋದಿ ರವರು ತಿರುಗೇಟು ನೀಡಿದ್ದಾರೆ.


ಜಿ ಎಸ್ ಟಿ ಜಾರಿಯಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾತನಾಡಿದ ಮೋದಿ ರವರು ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಕ್ರಯಿಸಿ ಒಂದು ವರ್ಷದಲ್ಲಿ ಜಿಎಸ್ಟಿ ಇಂದ ತೆರಿಗೆಯಲ್ಲಿ ಶೇಕಡ 70 ರಷ್ಟು ಹೆಚ್ಚಳವಾಗಿದೆ. ಇದೀಗ ಚೆಕ್ ಪೋಸ್ಟ್ ವ್ಯವಸ್ಥೆಯನ್ನು ರದ್ದುಗೊಳಿಸಲಾಗುತ್ತದೆ 17 ರೀತಿಯ ತೆರಿಗೆಗಳು ಮತ್ತು 23 ಮೂರು ರೀತಿಯ ಸೆಸ್ ಗಳನ್ನು ಒಳಗೊಂಡ ನೀತಿಯನ್ನು ಜನರಿಗೆ ಜಾರಿಗೊಳಿಸಿದ್ದೇವೆ, ಇದರಿಂದ ಉಳಿತಾಯದ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಲಾಗುವುದು ಎಂದರು.

ಇನ್ನು ಪ್ರತಿಪಕ್ಷಗಳ ಟೀಕೆಗಳ ಬಗ್ಗೆ ಮಾತನಾಡಿದ ಮೋದಿ ರವರು ಎಲ್ಲವನ್ನು ಒಂದೇ ಸ್ಲಾಬ್ ನ ಅಡಿ ತರಲು ಸಾಧ್ಯವಿಲ್ಲ ಕಾಂಗ್ರೆಸ್ಸಿನವರು ಎಲ್ಲಾ ಸರಕು ಮತ್ತು ಸೇವಾ ವಸ್ತುಗಳಿಗೆ ಒಂದೇ ರೀತಿಯ ಶೇಕಡ 18ರಷ್ಟು ತೆರಿಗೆಯನ್ನು ವಿಧಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ, ಇದು ಅರ್ಥವಿಲ್ಲದ ಮಾತು ಅವರು ಹೇಳಿದ ಹಾಗೆ ಮಾಡಿದರೆ ಕಾರು ಮತ್ತು ಹಾಲಿಗೆ ಒಂದೇ ತೆರಿಗೆಯನ್ನು ವಿಧಿಸಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.


ಜಿ ಎಸ್ ಟಿ ಭಾರತದ ಆರ್ಥಿಕತೆಯಲ್ಲಿ ಮತ್ತು ಉತ್ಪನ್ನಗಳಲ್ಲಿ ಹೆಚ್ಚಳವನ್ನು ತಂದಿದೆ ಎಂದ ಮೋದಿ ರವರು ಪ್ರತಿಯೊಂದು ವ್ಯಾಪಾರ ವ್ಯವಹಾರಗಳಿಗೂ ಜಿ ಎಸ್ ಟಿ ಬಳಸಿದ್ದಲ್ಲಿ ಎಲ್ಲವು ಸುಗಮವಾಗಿ ನಡೆಯಲಿದೆ ಎಂದರು. ಇದರಿಂದ ದೇಶಕ್ಕೆ ಯಾವುದೇ ಅಪಾಯವಿಲ್ಲ ಬದಲಾಗಿ ಬಹಳ ಲಾಭಗಳಿವೆ ಎಂದು ಮೋದಿ ಹೇಳಿದ್ದಾರೆ

Post Author: Ravi Yadav