ಮೋದಿ ರವರಿಗೆ ಗಡುವು ನೀಡಿದ ಔರಂಗಜೇಬ್ ನವರ ತಂದೆ !!

ಮೋದಿ ರವರಿಗೆ ಗಡುವು ನೀಡಿದ ಔರಂಗಜೇಬ್ ನವರ ತಂದೆ !!

0

ಹೌದು ನೀವು ಓದುತ್ತಿರುವುದು ನಿಜ, ಮೋದಿಜಿ ಪ್ರತಿಯೊಬ್ಬರಿಗೂ ತಮ್ಮ ತಪ್ಪು ತಿದ್ದುಕೊಳ್ಳಲು ಗಡುವು ನೀಡುತ್ತಿದ್ದರು. ಆದರೆ ಈಗ ಔರಂಗಜೇಬ್ ನ ಅವರ ತಂದೆ ಮೋದಿಜೀ ರ ವರೆಗೆ ಗಡುವು ನೀಡಿದ್ದಾರೆ. ಅಷ್ಟಕ್ಕೂ ವಿಷಯವೇನು ಮತ್ತು ಅದರ ಸಂಪೂರ್ಣ ಮಾಹಿತಿ ಕೆಳಗಡೆ ಇದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಕೆಲವು ದಿನಗಳ ಹಿಂದಷ್ಟೇ ಔರಂಗಜೇಬ್ ಎಂಬ ಸೈನಿಕ ಮೃತರಾಗಿದ್ದರು. ಇವರ ಬಳಿ ಯಾವುದೇ ಶಸ್ತ್ರಾಸ್ತ್ರ ವಿಲ್ಲದ ಸಮಯ ನೋಡಿಕೊಂಡು ಉಗ್ರರು ಈತನನ್ನು ಕೊಂದಿದ್ದರು. ಈದ್ ರಜೆಯ ಮೇಲಿದ್ದ ಸೈನಿಕನನ್ನು ಸಮಯ ನೋಡಿಕೊಂಡು ಉಗ್ರರು ಕೊಂದಿದ್ದರು. ಇಡೀ ದೇಶದಾದ್ಯಂತ ಈ ಸುದ್ದಿ ಹರಿದಾಡಿತ್ತು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ತನ್ನ ಮಗನ ಸಾವಿನ ನೋವಿನಿಂದ ತಂದೆ ಈ ಮಾತುಗಳನ್ನಾಡಿದ್ದಾರೆ.

ಅಷ್ಟಕ್ಕೂ ಔರಂಗಜೇಬ್ ನವರ ತಂದೆ ಏನು ಹೇಳಿದ್ದಾರೆ?

ನನ್ನ ಮಗ ಸತ್ತಿರಬಹುದು, ಆದರೆ ಇದು ಇಲ್ಲಿಗೇ ನಿಲ್ಲಬಾರದು.ನನ್ನ ಮಗ ಸತ್ತನೆಂದು ಪೋಷಕರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದನ್ನು ನಿಲ್ಲಿಸಬಾರದು. ಎಲ್ಲರೂ ನಿಲ್ಲಿಸುತ್ತ ಹೋದರೆ ದೇಶಕ್ಕಾಗಿ ಹೋರಾಡುವವರು ಯಾರು?ಯಾರೇ ಆಗಲಿ ಎಷ್ಟೇ ಸಾವುಗಳು ಬರಲಿ, ಪ್ರತಿಯೊಬ್ಬರು ದೇಶಕ್ಕಾಗಿ ಪ್ರಾಣ ತೆತ್ತರು ಪರವಾಗಿಲ್ಲ ದೇಶವನ್ನು ರಕ್ಷಿಸುವುದು ನಮ್ಮ ಕರ್ತವ್ಯ.

ನನ್ನ ಮಗನ ಸಾವಿನ ಪ್ರತಿಕಾರ ಕೇವಲ 32 ಗಂಟೆಗಳಲ್ಲಿ ನಡೆಯಬೇಕು. ಈ ಗಡುವು ಕೇಂದ್ರ ಸರ್ಕಾರಕ್ಕೆ ಮತ್ತು ಮೋದಿ ರವರಿಗೆ, ಪ್ರತೀಕಾರ ಹೇಗಿರಬೇಕೆಂದರೆ ದೇಶದ ಸೈನಿಕನನ್ನು ಮುಟ್ಟುವ ಧೈರ್ಯ ಯಾರು ಮಾಡಬಾರದು ಎಂದು ಹೇಳಿದ್ದಾರೆ.