ಬುರ್ಖಾ ಧರಿಸಿ ಚೆಸ್ ಆಡಲ್ಲ ಎಂದ ಸೌಮ್ಯಾ ನಡೆಗೆ ಕೈಫ್ ಹೇಳಿದ್ದೇನೆ !!

ಬುರ್ಖಾ ಧರಿಸಿ ಚೆಸ್ ಆಡಲ್ಲ ಎಂದ ಸೌಮ್ಯಾ ನಡೆಗೆ ಕೈಫ್ ಹೇಳಿದ್ದೇನೆ !!

0

ವಿಷಯದ ಮೂಲ: ಇರಾನ್ ನಲ್ಲಿ ಜೂನ್ 26 ರಿಂದ ಆಗಸ್ಟ್ 4 ವರೆಗೆ ನಡೆಯಲಿರುವ ಏಷ್ಯಾ ಚೆಸ್ ಟೂರ್ನಿಯಿಂದ ಭಾರತದ ತಂಡದ ಆಟಗಾರ್ತಿ ಸೌಮ್ಯಾ ಸ್ವತಃ ನಿರ್ಧಾರದಿಂದ ಹೊರ ನಡೆದಿದ್ದರು. ಇರಾನ್ ದೇಶ ಮಹಿಳೆಯರು ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಧರಿಸಬೇಕೆಂಬ ನಿಯಮವಿದೆ. ಇದರಂತೆ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರ್ತಿಯರು ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಧರಿಸಬೇಕೆಂಬ ನಿಯಮ ರೂಪಿಸಿತ್ತು. ಈ ಕಾರಣದಿಂದ ಸ್ಕಾರ್ಫ್ ಧರಿಸಲು ನಿರಾಕರಿಸಿದ್ದ ಸೌಮ್ಯ ಟೂರ್ನಿಯಿಂದ ಹೊರ ನಡೆಯುವ ತೀರ್ಮಾನವನ್ನು ಪ್ರಕಟಿಸಿದ್ದರು.

ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಸೌಮ್ಯ, ಇರಾನ್ ಕಾನೂನು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ, ಚಿಂತನೆ, ಆತ್ಮಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಗಳು ಸೇರಿದಂತೆ ನನ್ನ ಮಾನವ ಹಕ್ಕುಗಳನ್ನು ರಕ್ಷಿಸಿ ಕೊಳ್ಳಲು ಟೂರ್ನಿಗೆ ತೆರಳದೇ ಇರುವುದು ಸೂಕ್ತ ಎಂದು ಬರೆದುಕೊಂಡಿದ್ದಾರೆ.

ಅಷ್ಟಕ್ಕೂ ಕೈಫ್ ಏನು ಹೇಳಿದ್ದಾರೆ?

ಇರಾನ್ ನಲ್ಲಿ ನಡೆಯುತ್ತಿರುವ 2018 ರ ಏಷ್ಯಾ ಚೆಸ್ ಟೂರ್ನಿಯಿಂದ ಇತ್ತೀಚೆಗಷ್ಟೇ ಹೊರ ನಡೆಯುವ ನಿರ್ಧಾರ ಪ್ರಕಟಿಸಿದ ಭಾರತ ತಂಡದ ಆಟಗಾರ್ತಿ ಸೌಮ್ಯಾ ಸ್ವಾಮಿನಾಥನ್ ನಡೆಗೆ ಕ್ರಿಕೆಟಿಗ ಮಹಮ್ಮದ್ ಕೈಫ್ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೈಫ್, ಯಾವುದೇ ಕ್ರೀಡೆಯಲ್ಲಿ ಧಾರ್ಮಿಕ ನಿಯಮಗಳನ್ನು ಅನುಸರಿಸುವಂತೆ ಒತ್ತಡ ಹೇರುವುದು ಉತ್ತಮವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇರಾನ್ ಟೂರ್ನಿಯಿಂದ ಹೊರ ನಡೆದ ನಿಮ್ಮ ನಿರ್ಧಾರಕ್ಕೆ `ಹ್ಯಾಟ್ಸ್ ಅಫ್’ ಸೌಮ್ಯಾ. ಕ್ರೀಡಾಪಟುಗಳ ಮೇಲೆ ಯಾವುದೇ ಧಾರ್ಮಿಕ ವಸ್ತ್ರ ಸಂಹಿತೆಯನ್ನು ಹೇರಬಾರದು. ಅದರಲ್ಲೂ ಅಂತರಾಷ್ಟ್ರೀಯ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವ ರಾಷ್ಟ್ರ ನಿಯಮ ರೂಪಿಸಬಾರದು. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕೈಫ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಸೌಮ್ಯಾ ಅವರ ನಿರ್ಧಾರಕ್ಕೆ ಕೈಫ್ ಅಲ್ಲದೇ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹ ಬೆಂಬಲ ನೀಡಿದ್ದು, ಸೌಮ್ಯಾ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಹಲವರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.