ಮೋದಿಯ ಈ ಮಾಸ್ಟರ್ ಪ್ಲಾನ್ ದಲ್ಲಾಳಿಗಳಿಗೆ ಕಡಿವಾಣ ಹಾಕಿದೆ !!

ಮೋದಿಯ ಈ ಮಾಸ್ಟರ್ ಪ್ಲಾನ್ ದಲ್ಲಾಳಿಗಳಿಗೆ ಕಡಿವಾಣ ಹಾಕಿದೆ

0

ಹೌದು, 4 ವರ್ಷಗಳ ಹಿಂದೆ ರೈತರಿಗೆ ಎಲ್ಲಿಲ್ಲದ ಸಂಕಷ್ಟಗಳು. ಅತಿವೃಷ್ಟಿ ಅನಾವೃಷ್ಟಿ ಇಲ್ಲವಾದಲ್ಲಿ ದಲ್ಲಾಳಿಗಳ ಕಾಟ. ಮೋದಿ ಅಧಿಕಾರಕ್ಕೆ ಬಂದ ಕ್ಷಣ ಪ್ರತಿಪಕ್ಷಗಳು ಟೀಕೆ ಮಾಡುವುದಕ್ಕಾಗಿ ರೈತ ವಿರೋಧಿ ಸರ್ಕಾರ ಎಂದು ಆರೋಪಿಸಿದ್ದರು. ಇತ್ತ ಕಡೆ ರೈತರ ಸಂಕಷ್ಟ ನೀಗಿಸುವುದು ಮೋದಿ ರವರ ಮುಂದಿನ ದೊಡ್ಡ ಸವಾಲಾಗಿತ್ತು. ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಮೋದಿ ರವರು ಯೋಜನೆಗಳಿಂದ ಉತ್ತರವನ್ನು ನೀಡಿದರು.

ಅಷ್ಟಕ್ಕೂ ವಿಷಯದ ಮೂಲವೇನು? 

ಮೋದಿ ಮಾಸ್ಟರ್ ಪ್ಲಾನ್ ಮೂಲಕ ದಲ್ಲಾಳಿಗಳ ಅಟ್ಟಹಾಸ ತಡೆದಿದ್ದಾರೆ. ಅದು ಹೇಗೆ ಎಂದು ವಿವರ ತಿಳಿಯಲು ಮೋದಿ ರವರೆ ತಮ್ಮ ಮಾತುಗಳಲ್ಲಿ ವಿವರಿಸಿದ್ದಾರೆ ಕೆಳಗಡೆ ಸಂಪೂರ್ಣ ಓದಿ.

ಅಷ್ಟಕ್ಕೂ ಯಾವುದು ಆ ಯೋಜನೆ?

ಜನರಿಂದ ಹಣ ಸುಳಿಯುವ ಮಧ್ಯವರ್ತಿಗಳ ಹಾವಳಿಗೆ ,ಕಪ್ಪು ಹಣ ಮತ್ತು ಕಾಳಸಂತೆ ಗಳಗ ಅಂಕುಶ ಹಾಕಲು ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಇಂಡಿಯಾ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮೋದಿ ರವರು ಜಾರಿಗೊಳಿಸಿದ್ದರು.

ಶುಕ್ರವಾರ ಡಿಜಿಟಲ್ ಇಂಡಿಯಾ ಫಲಾನುಭವಿಗಳ ಜೊತೆ ಸಂವಾದ ನಡೆಸಿದ ಮೋದಿ ರವರು ಡಿಜಿಟಲ್ ಇಂಡಿಯಾ ಬಹುತೇಕ ಯಶಸ್ವಿಯಾಗಿದೆ, ಆದರೆ ಮಧ್ಯವರ್ತಿಗಳಿಗೆ ಸಿಂಹಸ್ವಪ್ನವಾಗಿರುವ ಮೋದಿಯನ್ನು ತೆಗಳಲು ಮಧ್ಯವರ್ತಿಗಳು ಸಿಕ್ಕ ಅವಕಾಶಗಳನ್ನೆಲ್ಲಾ ಬಳಸಿಕೊಳ್ಳುತ್ತಿದ್ದಾರೆ ಎಂದು ಮೋದಿ ಹೇಳಿದರು.

ಇಂದು ಗ್ರಾಮೀಣ ಪ್ರದೇಶಗಳ ಬಡ ರೈತರು ಕೂಡ ಡಿಜಿಟಲ್ ಪಾವತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಹಲವು ರೈತರು ಇನ್ನೂ ಹಲವು ರೈತರು ತಮ್ಮ ವ್ಯಾಪಾರ ವಹಿವಾಟನ್ನು ಡಿಜಿಟಲೀಕರಣ ಮಾಡಿದ್ದಲ್ಲಿ ದಲ್ಲಾಳಿಗಳಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ.

ತಮ್ಮ ಆದಾಯಕ್ಕೆ ಹೊಡೆತ ಬೀಳುವ ಭೀತಿಯಿಂದ ಮಧ್ಯವರ್ತಿಗಳು ಡಿಜಿಟಲ್ ವಹಿವಾಟು ಸುರಕ್ಷಿತವಲ್ಲ ಗಾಳಿಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ದಯವಿಟ್ಟು ಜನರು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮೋದಿ ಹೇಳಿದರು.

ಯುವಕರಿಗೆ ಕರೆ ನೀಡಿದ ಮೋದಿ ರವರು ತಮ್ಮ ಸುತ್ತಮುತ್ತಲಿನ ಅನಕ್ಷರಸ್ಥರಿಗೆ ಡಿಜಿಟಲಿಕರಣದ ಕುರಿತು ಮಾಹಿತಿ ನೀಡಿ ಪ್ರತಿಯೊಬ್ಬರು ಡಿಜಿಟಲೀಕರಣ ಎಂಬ ಅಸ್ತ್ರವನ್ನು ಬಳಿಸಿಕೊಂಡು ದಲ್ಲಾಳಿಗಳಿಗೆ ಬ್ರೇಕ್ ಹಾಕಲು ಮೋದಿ ರವರ ಜೊತೆ ಕೈಜೋಡಿಸಬೇಕೆಂದು ಇದೇ ಸಮಯದಲ್ಲಿ ಹೇಳಿದರು.