ಐಪಿಎಲ್’ನಲ್ಲಿ ಇದುವರೆಗೂ ಎಬಿ ಡಿವಿಲಿಯರ್ಸ್ ಸಂಪಾದಿಸಿದ್ದೆಷ್ಟು..?

ಐಪಿಎಲ್’ನಲ್ಲಿ ಇದುವರೆಗೂ ಎಬಿ ಡಿವಿಲಿಯರ್ಸ್ ಸಂಪಾದಿಸಿದ್ದೆಷ್ಟು..?

0

ಮಿಲಿಯನ್ ಡಾಲರ್ ಟೂರ್ನಿ ಎಂದೇ ಕರೆಸಿಕೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಹನ್ನೊಂದನೇ ಆವೃತ್ತಿ ಪೂರೈಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಲಾ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕೋಲ್ಕತಾ ನೈಟ್’ರೈಡರ್ಸ್ ಎರಡು ಬಾರಿ, ಡೆಕ್ಕನ್ ಚಾರ್ಜರ್ಸ್, ಸನ್’ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ತಲಾ ಒಂದೊಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ.

ಐಪಿಎಲ್ ಸಾಕಷ್ಟು ಆಟಗಾರರ ಜೇಬು ತುಂಬಿಸಿದೆ. ಐಪಿಎಲ್ ಇತಿಹಾಸದಲ್ಲಿ 17 ಕ್ರಿಕೆಟಿಗರು 50ಕ್ಕೂ ಹೆಚ್ಚು ಕೋಟಿ ರುಪಾಯಿಗಳನ್ನು ಸಂಪಾದಿಸಿದ್ದಾರೆ. ಇದರಲ್ಲಿ 13 ಬ್ಯಾಟ್ಸ್’ಮನ್’ಗಳಾದರೆ, ಇಬ್ಬರು ಆಲ್ರೌಂಡರ್’ಗಳು ಹಾಗೂ ಇಬ್ಬರು ಬೌಲರ್’ಗಳು. ಅದರಲ್ಲೂ ಸುನಿಲ್ ನರೈನ್ ಹಾಗೂ ಹರ್ಭಜನ್ ಸಿಂಗ್ ಮಾತ್ರ 50 ಕೋಟಿಗೂ ಹೆಚ್ಚು ಸಂಪಾದಿಸಿದ ಬೌಲರ್’ಗಳೆನಿಸಿದ್ದಾರೆ.

50 ಕೋಟಿ ಸಂಪಾದಿಸಿದವರ ಪಟ್ಟಿಯಲ್ಲಿ 11 ಆಟಗಾರರು ಭಾರತದವರಾದರೆ, ಮೂವರು ವೆಸ್ಟ್’ಇಂಡಿಸ್, ಇಬ್ಬರು ದಕ್ಷಿಣ ಆಫ್ರಿಕಾ ಹಾಗೂ ಓರ್ವ ಆಸ್ಟ್ರೇಲಿಯಾದ ಕ್ರಿಕೆಟಿಗರಾಗಿದ್ದಾರೆ. ಭಾರತದ ಕ್ರಿಕೆಟಿಗರಲ್ಲಿ ಎಂ.ಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಐಪಿಎಲ್’ನಲ್ಲಿ ನೂರು ಕೋಟಿ ಬಾಚಿದ ಬ್ಯಾಟ್ಸ್’ಮನ್’ಗಳೆನಿಸಿದರೆ, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಶಿಖರ್ ಧವನ್, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್ ಹಾಗೂ ಹರ್ಭಜನ್ ಸಿಂಗ್ 50 ಕೋಟಿಗೂ ಅಧಿಕ ಹಣ ಐಪಿಎಲ್’ನಿಂದ ಸಂಪಾದಿಸಿದ್ದಾರೆ.

ವಿದೇಶಿ ಕ್ರಿಕೆಟಿಗರಲ್ಲಿ ಎಬಿ ಡಿವಿಲಿಯರ್ಸ್’ಗೆ ಮೊದಲ ಸ್ಥಾನ:

ಹಣ ಗಳಿಕೆಯಲ್ಲಿ ಭಾರತೀಯ ಆಟಗಾರರೇ ಸಿಂಹ ಪಾಲು ಪಡೆದಿದ್ದರೂ ವಿದೇಶಿ ಆಟಗಾರರ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಹಣ ಗಳಿಕೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇದುವರೆಗೂ ಎಬಿಡಿ ಐಪಿಎಲ್’ನಲ್ಲಿ 69.5 ಕೋಟಿ ಹಣ ಸಂಪಾದಿಸಿದ್ದಾರೆ. ಇನ್ನುಳಿದಂತೆ ವೆಸ್ಟ್’ಇಂಡಿಸ್’ನ ಕ್ರಿಸ್ ಗೇಲ್, ಕಿರಾನ್ ಪೊಲ್ಲಾರ್ಡ್ ಹಾಗೂ ಸುನಿಲ್ ನರೈನ್, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಹಾಗೂ ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವಾಟ್ಸನ್ ಈ ಪಟ್ಟಿಯಲ್ಲಿರುವ ಇತರ ಆಟಗಾರರೆನಿಸಿದ್ದಾರೆ.

Credits: Suvanrna News