ಮೋದಿ ರವರ ಉತ್ತರಕ್ಕೆ ಬೆಪ್ಪಾದ ಬ್ರಿಟನ್ ಪ್ರಧಾನಿ

ಮೋದಿ ರವರ ಉತ್ತರಕ್ಕೆ ಬೆಪ್ಪಾದ ಬ್ರಿಟನ್ ಪ್ರಧಾನಿ

0

ವಿಜಯ್ ಮಲ್ಯ ಭಾರತದಲ್ಲಿ ಉತ್ತಮ ಆರಂಭಪಡೆದು ತನ್ನ ಅಸ್ಥಿತ್ವನ್ನೇ ಉಳಿಸಿಕೊಳ್ಳಲು ಆಗದೆ ಬ್ರಿಟನ್ ಗೆ ಪರಾರಿಯಾಗಿ, ಭಾರತಕ್ಕೆ ಮರಳದೇ ಹಲವಾರು ಕೇಸ್ ಗಳನ್ನೂ ಮೈಮೇಲೆ ಎಳೆದುಕೊಂಡು, ಬ್ಯಾಂಕ್ ಗಳಿಗೆ ಮೋಸ ಮಾಡಿರುವ ಉದ್ಯಮಿ.ಈ ವಿಷಯ ಅಂತಾರಾಷ್ತ್ರೀಯ ಮಟ್ಟದಲ್ಲಿ ಚರ್ಚೆಯಾಗಿದ್ದು ವಿಜಯ್ ಮಲ್ಯರವರನ್ನು ವಾಪಸ್ ಭಾರತಕ್ಕೆ ಬರುವಂತೆ ಮಾಡುವವರೇ ಮೋದಿ ಎಂದು ಪ್ರಶ್ನೆ ಮಾಡಿದ್ದರು.

ಈ ಪ್ರಕರಣ ಬ್ರಿಟನ್ ಅಲ್ಲಿಯೂ ಬಾರಿ ಸದ್ದು ಮಾಡಿದ್ದು ಭಾರತದ ವಿದೇಶಾಂಗ ಸಚಿವಾಲಯ ವಿಜಯ್ ಮಲ್ಯರವರನ್ನು ಭಾರತಕ್ಕೆ ಹಸ್ತಾತರಿಸುವಂತೆ ಬ್ರಿಟನ್ ಸರ್ಕಾರವನ್ನು ಕೋರಿತ್ತು. ಇದಕ್ಕೆ ಬ್ರಿಟನ್ ಸಮ್ಮತಿ ನೀಡಿದ್ದರು, ಸಂವಿಧಾನದ ಪ್ರಕಾರ ಕೋರ್ಟಿನ ಆದೇಶವಿಲ್ಲದೆ ಒಬ್ಬ ವ್ಯಕ್ತಿಯನ್ನು ವಿದೇಶಕ್ಕೆ ಒಪ್ಪಿಸಲು ಹಾಗುವುದಿಲ್ಲ ಎಂದು ಬ್ರಿಟನ್ ಸರ್ಕಾರ ಹೇಳಿಕೆ ನೀಡಿತ್ತು.

ಭಾರತದ ವಿದೇಶಾಂಗ ಸಚಿವಾಲಯವು ಬ್ರಿಟನ್ ಕೋರ್ಟ್ ನಲ್ಲಿ ಕೇಸ್ ಒಂದನ್ನು ದಾಖಲಿಸಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಒಪ್ಪಿಸುವಂತೆ ಕೋರಿತ್ತು. ಈ ಕುರಿತು ತನಿಖೆ ನಡೆಸಿದ ಕೋರ್ಟ್ ವಿಜಯ್ ಮಲ್ಯರವರನ್ನು ವಿಚಾರಣೆ ನಡೆಸಿತ್ತು.

ಆದರೆ ವಿಜಯ್ ಮಲ್ಯರವರು ನಾನು ಭಾರತಕ್ಕೆ ಹೋಗಲು ಸಾಧ್ಯವಿಲ್ಲ, ಭಾರತದ ಜೈಲುಗಳು ಕಳಪೆ ಮಟ್ಟದ್ದು, ಅಲ್ಲಿ ನಾನು ಇರುವುದು ಅಸಾಧ್ಯದ ಮಾತು ಎಂದು ವಾದ ನಡೆಸಿ, ತಪ್ಪಿಸಿಕೊಳ್ಳವು ಯತ್ನಿಸಿದರು.

ಈ ವಿಷಯ ಕುರಿತು ಬ್ರಿಟನ್ ಪ್ರವಾದನಿಯನ್ನು ಭೇಟಿಯಾದ ವೇಳೆ ಮೋದಿರವರು ಮಾತುಕತೆ ನಡೆಸಿದ್ದರು.ಭಾರತೀಯ ಬ್ಯಾಂಕುಗಳಿಗೆ ವಂಚಿಸಿ ಬ್ರಿಟನ್‌ಗೆ ಪರಾರಿಯಾದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಲು ಜೈಲುಗಳ ಪರಿಸ್ಥಿತಿಯ ನೆಪವೊಡ್ಡಿರುವ ಅಲ್ಲಿನ ನ್ಯಾಯಾಲಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಉತ್ತರ ರವಾನಿಸಿದ್ದಾರೆ.

‘ಭಾರತದ ಜೈಲುಗಳ ಸ್ಥಿತಿ ಉತ್ತಮವಾಗಿಲ್ಲ ಎಂದು ಇಂಗ್ಲೆಂಡ್‌ನ ನ್ಯಾಯಾಲಯ ಹೇಳಿದೆ. ಆದರೆ, ಮಹಾತ್ಮ ಗಾಂಧಿ, ನೆಹರೂ ಮುಂತಾದ ಮಹಾನ್ ನಾಯಕರನ್ನು ನೀವು ಹಿಂದೆ ಇರಿಸಿದ್ದು ಇದೇ ಜೈಲುಗಳಲ್ಲಿ’ ಎಂದು ಮೋದಿ ಅವರು ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಅವರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ನಡೆದ ಕಾಮನ್‌ವೆಲ್ತ್ ಸರ್ಕಾರಗಳ ಮುಖ್ಯಸ್ಥರ ಸಭೆಯ ವೇಳೆ ಪ್ರಧಾನಿ ಮೋದಿ ಅವರು ಥೆರೆಸಾ ಮೇ ಅವರಿಗೆ ಖಡಕ್ ಸಂದೇಶ ನೀಡಿದ್ದಾರೆ. ಭಾರತೀಯ ಜೈಲುಗಳ ಪರಿಸ್ಥಿತಿಯ ಬಗ್ಗೆ ಇಂಗ್ಲೆಂಡ್ ನ್ಯಾಯಾಲಯಗಳಲ್ಲಿ ದೂರಿರುವ ಮಲ್ಯ ಅವರ ಗಡಿಪಾರಿಗೆ ಸಂಬಂಧಿಸಿದಂತೆ ಈ ಸಂದರ್ಭದಲ್ಲಿ ಅವರು ಚರ್ಚೆ ನಡೆಸಿದ್ದರು.

ಮಲ್ಯ ಅವರ ಗಡಿಪಾರಿಗೆ ನಾವು ಮನವಿ ಸಲ್ಲಿಸಿದ್ದೇವೆ. ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳ ಪೈಕಿ, 12 ಬ್ಯಾಂಕುಗಳನ್ನು ಒಳಗೊಂಡ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಪ್ರಕರಣ ಬ್ಯಾಂಕ್ ಪರವಾಗಿದೆ. ಅವರು ಮಲ್ಯ ಅವರಿಂದ ಹಣವನ್ನು ಮರಳಿ ವಸೂಲಿ ಮಾಡಬಹುದಾಗಿದೆ ಎಂದು ಸುಷ್ಮಾ ತಿಳಿಸಿದ್ದಾರೆ.