ತನ್ನ ಪಕ್ಷ ನಾಶವಾಗುತ್ತಿದೆ ಸೋಲೊಪ್ಪಿಕೊಂಡು ರಾಜಿನಾಮೆ ಸೂಚನೆ ಪಕ್ಷದ ನಾಯಕ

ತನ್ನ ಪಕ್ಷ ನಾಶವಾಗುತ್ತಿದೆ ಸೋಲೊಪ್ಪಿಕೊಂಡ ಪಕ್ಷದ ನಾಯಕ

0

ಹೌದು ಹೀಗೆ ಹೇಳಿರುವುದು ಯಾವುದೇ ಮಾಜಿ ಶಾಸಕನಲ್ಲ. ಬದಲಾಗಿ ಅಧಿಕಾರದಲ್ಲಿರುವ ಪಕ್ಷದ ಶಾಸಕ ತಮ್ಮ ಪಕ್ಷ ನಾಶವಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಯಾರು ಯಾವ ಕಾರಣಕ್ಕೆ ಎಂಬುದನ್ನು ತಿಳಿಯಲು ಸಂಪೂರ್ಣ ಓದಿ

ಅಷ್ಟಕ್ಕೂ ಯಾವ ಶಾಸಕ ಮತ್ತು ಪಕ್ಷ ಯಾವುದು?

ಕರ್ನಾಟಕದಲ್ಲಿ ಅಧಿಕಾರದಲ್ಲಿರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಸರ್ಕಾರ, ಆದರೆ ಈಗ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕರಾದ ಡಾ.ಕೆ.ಸುಧಾಕರ್  ಕಾಂಗ್ರೆಸ್ ಪಕ್ಷ ನಾಶವಾಗಿ ಹೋಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಇಷ್ಟೇ ಅಲ್ಲದೆ ಎಂಬಿ ಪಾಟೀಲ್ ಅವರ ನಿವಾಸದಲ್ಲಿ ಅತೃಪ್ತ ಶಾಸಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಕ್ಕಲಿಗರನ್ನು ಜೆಡಿಎಸ್ ಪಕ್ಷ ಗುತ್ತಿಗೆ ಏನಾದರೂ ಪಡೆದುಕೊಂಡಿದೆಯಾ? ಎಂದು ಖಾರವಾಗಿ ಪ್ರಶ್ನಿಸಿದರು.

ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ಸುಧಾಕರ್ ಅವರು, ‘ರಾಹುಲ್ ಗಾಂಧಿ ಅವರನ್ನು ನೋಡಿ ರಾಜಕೀಯಕ್ಕೆ ಬಂದೆ, ಸಿದ್ದರಾಮಯ್ಯ ಅವರೂ ಕೂಡ ಉತ್ತಮ ಆಡಳಿತ ಕೊಟ್ಟಿದ್ದರು ಆದರೆ ಇಂದು ಅವರನ್ನು ಹೈಕಮಾಂಡ್ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಪಕ್ಷ ಬಿಡುವ ಸೂಚನೆಯನ್ನೂ ನೀಡಿದ ಸುಧಾಕರ್ ಅವರು, ‘ಕ್ಷೇತ್ರದ ಜನರ ಜೊತೆ ಚರ್ಚೆ ಮಾಡಿ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ’ ಎಂದರು. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸುಧಾಕರ್ ಅವರು ಎರಡು ಬಾರಿ ಗೆದ್ದಿದ್ದಾರೆ.

ಒಕ್ಕಲಿಗರಾಗಿರುವ ಸುಧಾಕರ್ ಅವರು ಕಳೆದ ಬಾರಿಯ ಸರ್ಕಾರದಲ್ಲಿ ಸಂಪುಟ ಪುನರ್‌ರಚನೆ ಆದಾಗಲೇ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು ಆದರೆ ಆಗ ಸಚಿವ ಸ್ಥಾನ ಸಿಕ್ಕಿರಲಿಲ್ಲ ಹಾಗಾಗಿ ಈ ಬಾರಿ ಸಚಿವ ಸ್ಥಾನ ಪಕ್ಕಾ ಎಂದೇ ಎಣಿಸಲಾಗಿತ್ತು ಆದರೆ ಈ ಬಾರಿಯೂ ಸ್ಥಾನ ಕೈತಪ್ಪಿದೆ.ರಾಜೀನಾಮೆ ಸೂಚನೆ ನೀಡಿದ್ದಾರೆ  ಕಾದು ನೋಡಬೇಕಿದೆ.