“ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿಲ್ಲ ಎಂದವರು ಸಚಿವ ಸ್ಥಾನಕ್ಕಾಗಿ ಬೀದಿಯ ನಾಯಿಯಂತೆ ಕಿತ್ತಾಡುತ್ತಿರುವುದು ಏಕೆ..??”

0

‘ಹಣ ಎಂದರೆ, ಹೆಣ ಕೂಡ ಬಾಯಿ ಬಿಡುತ್ತದೆ’ ಎನ್ನುವುದು ಹಳೆಯ ಗಾದೆ. ಹೊಸ ಗಾದೆ “ಮುಖ್ಯಮಂತ್ರಿ ಹುದ್ದೆ ಎಂದರೆ, 120 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡವರು ಬಾಯಿ ಬಿಡುತ್ತಾರೆ” ಎನ್ನುವುದು ಈಗಿನ ರಾಜಕೀಯ ಗಾದೆ.!

ಹೌದು..! ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಜನರ ತೀರ್ಪು ಬೇರೆಯಾದರೆ, ಅನೈತಿಕ ಮೈತ್ರಿಯಿಂದ ಅಧಿಕಾರಕ್ಕಾರದ ಗದ್ದುಗೆ ಏರಿದವರೇ ಬೇರೆಯವರು. ಸರ್ಕಾರವೇನೋ ರಚಿಸಿದರು ಆದ್ರೆ ಸಂಪುಟ ರಚನೆಗೆ ಇವರು ತಗೆಡುಕೊಂಡು ಬರೋಬ್ಬರಿ 15 ಕ್ಕೂ ಹೆಚ್ಚು ದಿನಗಳು..!!

ಇತ್ತ ಜನಸಾಮಾನ್ಯರು “ಛೇ.. ಎಂತಹ ಸರ್ಕಾರ ರಚನೆಯಾಯಿತು ನಾವು ಮತ ಹಾಕಿದ್ದೆ ಬೇರೆ, ಆಗಿದ್ದೆ ಬೇರೆ ಎಂದು ಕೈ ಕೈ ಹಿಸುಕಿಕೊಳ್ಳುವಂತದಾಗಿದೆ. ನಿಜ..! ಈಗ ಕರ್ನಾಟಕದ ಜನೆತೆ ಅಸಹಾಯಕತೆ ಇಂದ ಏನಾಗುತ್ತಿದೆ ಕರ್ನಾಟಕದಲ್ಲಿ ಎಂಬ ಆತಂಕದಿಂದ ನೋಡುತ್ತಿದ್ದಾರೆ.

ಚುನಾವಣೆಗೂ ಮೊದಲು ಕುಮಾರಸ್ವಾಮಿ ಅವರು “ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ, ನಾನು ಮತ್ತೆ ಜನರ ಬಳಿ ಹೋಗುತ್ತೇನೆ ಹೊರತು ಮೈತ್ರಿ ಮಾಡಿಕೊಳ್ಳುವುದಿಲ್ಲ” ಅಂತ 120 ಕ್ಕೂ ಹೆಚ್ಚೂ ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡ ಪಕ್ಷದ ರಾಜ್ಯಧ್ಯಕ್ಷರು ಮತ್ತು ಮಾನ್ಯ ಮುಖ್ಯಮಂತ್ರಿಯವರು ಹೇಳಿದ್ದರು. ಆದರೆ ಈ ಹೊಲಸು ರಾಜಕೀಯದಲ್ಲಿ ‘ಯಾರೂ ಶತ್ರುಗಳು ಅಲ್ಲ, ಯಾರೂ ಮಿತ್ರರು ಅಲ್ಲ’ ಎಂಬ ಮಾತಿನಂತೆ ಇನ್ನೂ ಫಲಿತಾಂಶ ಪೂರ್ಣ ಪ್ರಕಟವಾಗುವ ಮೊದಲೆ ಕನ್ನಡದ ಮಣ್ಣಿನ ಮಕ್ಕಳು ಪರಿವಾರ ಸಮೇತ ದೆಹಲಿ ಕೈಕಮಾಂಡ ಮುಂದೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಅಂಗಲಾಚುತ್ತಿದ್ದರು‌..!!

ಇತ್ತ ಕಾಂಗ್ರೆಸ್ ಪರಿಸ್ಥಿತಿಯಂತೂ ಹೇಳತಿರದೂ 20 ಸಚಿರವರ, ಮಾಜಿ ಮುಖ್ಯಮಂತ್ರಿಯವರ ಸೋಲು ಕಂಡರು ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ದುರಾಸೆಯಿಂದ ದೊಡ್ಡ ಗೌಡ್ರ ಮನೆಮುಂದೆ ನಿಂತು “ನಾವು ನಿಮಗೆ ಬೇಷರತ್ತ ಬೆಂಬಲ ಕೊಡುತ್ತೇವೆ, 5 ವರ್ಷಗಳ ಕಾಲ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಆಗಲಿ” ಎಂದು ಗೌಡ್ರ ಮನೆ ಮುಂದೆ ಕೈಕಮಾಂಡ ಮತ್ತು ದುರಂಹಕಾರದಿಂದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಮೆರೆದ ಸಿದ್ದರಾಮಯ್ಯನವರ ಸಹಿತ ಎಲ್ಲರೂ ಕೈಕಟ್ಟಿ ಗೌಡ್ರ ಒಪ್ಪಿಗೆಗಾಗಿ ಕಾದಿದ್ದು ನಮಗೆಲ್ಲರಿಗೂ ಗೊತ್ತಿರುವ ವಿಷಯ.

ನಂತರ ಕರ್ನಾಟಕ ಜನತೆಯ ಗುಲಾಮರಾದ.. ಅಯ್ಯೋ ಸ್ವಾರಿ.!! ಕಾಂಗ್ರೆಸ್ಸಿನ ಮುಲಾಜಿನಲ್ಲಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರು ಮೈತ್ರಿ ನಂತರ “ನಾನು ಅಧಿಕಾರಕ್ಕೆ ಮೈತ್ರಿ ಮಾಡಿಕೊಂಡಿಲ್ಲ, ಪ್ರಜಾಪ್ರಭುತ್ವ ಉಳಿವಿಗಾಗಿ, ನಾಡಿನ ಜನತೆಗಾಗಿ ಮೈತ್ರಿಕೊಂಡಿದ್ದೇನೆ” ಎಂದು ಹೇಳುವ ಮೂಲಕ ಮುಂದೊಂದು ದಿನ ಬಹುಮತದ ಪಡೆದು ಮುಖ್ಯಮಂತ್ರಿ ಆಗುವ ಆಸೆಯಿಂದ ಹೇಳಿಕೆ ನೀಡಿದರು.

ಆದರೆ ಆ ಮಾತನ್ನು ಬಹಳ ದಿನ ಉಳಿಸಿಕೊಳ್ಳಲಾಗಲಿಲ್ಲ. ಸಂಪುಟ ರಚನೆ ಮಾಡುವ ಸಂಧರ್ಭ ಬಂದಾಗ ಎರಡು ಪಕ್ಷಗಳ ಶಾಸಕರು ಸಚಿವ ಸ್ಥಾನಕ್ಕಾಗಿ ಕಿತ್ತಾಟ ಶುರುವಾಗಿಯೇ ಬಿಟ್ಟಿತು! ಅಷ್ಟೇ ಅಲ್ಲದೆ ಅಪ್ಪ ಮಕ್ಕಳ ಪಕ್ಷದಲ್ಲೇ.. ಛೇ ಸ್ವಾರಿ, ಅಪ್ಪಟ ಕನ್ನಡ ಮಣ್ಣಿನ ಮಕ್ಕಳ ಪಕ್ಷದ ಮಣ್ಣಿನ ಮಗನಾದ HD. ರೇವಣ್ಣ ಅವರು “ನನಗೆ ಇಂಧನ ಮತ್ತು ಲೋಕೋಪಯೋಗಿ, ಎರಡೂ ಖಾತೆಗಳು ಬೇಕೆಂದು ಹಠ ಹಿಡಿದರು. (ನನ್ನ ನಂಬಿ ಇವರೇ ನಮ್ಮ ನಾಡಿನ ಮಣ್ಣಿನ ಮಕ್ಕಳು ಅದಕ್ಕೆ ಈ ಖಾತೆಗಳು) ಇವರಷ್ಟೇ ಅಲ್ಲದೇ ದೊಡ್ಡ ಗೌಡ್ರು, ಜೆಡಿಎಸ್ ಗೆ ಇಂಧನ, ಲೋಕೋಪಯೋಗಿ, ಹಣಕಾಸು ಮತ್ತು ಇತರ ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟರೂ.

ಇತ್ತ ಕಾಂಗ್ರೆಸ್ ಸಹ ಮುಖ್ಯಮಂತ್ರಿ ಸ್ಥಾನ ನಿಮಗೆ ಕೊಟ್ಟಿದ್ದೇವೆ ಹಣಕಾಸು, ಇಂಧನ, ಲೋಕೋಪಯೋಗಿ ಖಾತೆಗಳು ನಮಗೆ ಬೇಕು ಅಂತ ಪಟ್ಟು ಹಿಡಿದಿದ್ದು ಜಗತ್ತಿಗೆ ತಿಳಿದ ವಿಚಾರ.!

ಇರಲಿ, ಎಲ್ಲವೂ ಮುಗಿತು ಸಂಪುಟ ರಚನೆಯಾಯಿತು ಇನ್ನಾದರೂ ಒಳ್ಳೆಯ ಆಡಳಿತ ನೀಡುತ್ತಾರೆ ಎನ್ನುವ ಮಹಾದಾಶೆಯಲ್ಲಿದ್ದ ನಾಡಿನ ಜನತೆಗೆ ಸಚಿವ ಸ್ಥಾನದ ಪ್ರಮಾಣವಚನ ಸ್ವೀಕರಿಸಿದವರ ಜೊತೆ ಸಚಿವ ಸ್ಥಾನ ಕೈತಪ್ಪಿದ ಕೈ ಶಾಸಕರ ಗೂಂಡಾ ವರ್ತನೆಗೆ ಕರುನಾಡು ನಲುಗಿತು. ನಮ್ಮ ನಾಯಕನಿಗೆ ಸಚಿವ ಸ್ಥಾನ ಕೈತಪ್ಪಿದೆ ಎಂಬ ಹತಾಶ ಮನೋಭಾವದಲ್ಲಿ ಅವರ ಬೆಂಬಲಿಗರು ತಮ್ಮ ತಮ್ಮ ಕ್ಷೇತ್ರದಲ್ಲಿ ಟಾಯರ್‌ಗೆ ಬೆಂಕಿ ಹಚ್ಚಿ ದೊಡ್ಡ ಪ್ರತಿಭಟನೆಯನ್ನೇ ಮಾಡಿದರೂ. ಅಷ್ಟೇ ಏಕೆ ಸೀಮಿ ಎಣ್ಣೆ, ವಿಷ ಸೇವಿಸಿ ಆತ್ಮಹತ್ಯೆಯ ನಾಟಕವೂ ನಡೆಯಿತು.

ವಿಧಾನಸೌಧದಲ್ಲಿ ನಿಂತು ಕ್ಷೇತ್ರದ ಜನತೆಯ ಕಷ್ಟಗಳನ್ನು ಪರಿಹರಿಸಬೇಕಾದ ಶಾಸಕರು ಸಚಿವ ಸ್ಥಾನ ತಪ್ಪಿದ್ದಕ್ಕಾಗಿ ರಾಜೀನಾಮೆ ಎಂಬ ಹೊಸದೊಂದು ನಾಟಕ ಶುರು ಮಾಡಿಯೇ ಬಿಟ್ಟರು..ಇತ್ತ ಜನರ ಸಮಸ್ಯೆಗಳನ್ನು ತಮ್ಮ ಶಾಸಕರಿಗೆ ತಿಳಿಸಿ ಸಮಸ್ಯೆ ಬಗೆಹರಿಸಬೇಕಾದ ಅವರ ಬೆಂಬಲಿಗರು ನಡುರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಚ್ಚುವ ಮೂಲಕ ಕ್ಷೇತ್ರದ ಜನತೆಗೆ ಮತ್ತೊಂದು ತೊಂದರೆಯನ್ನೇ ಕೊಟ್ಟರು.!

ವಿಪರ್ಯಾಸವೆಂದರೆ, ಇಂತವರಿಗೆ ಮತ ಹಾಕಿದ ತಪ್ಪಿಗಾಗಿ ಎನೂ ಮಾಡಲಾಗದೆ ಮುಖ ಪ್ರೇಕ್ಷಕರಂತೆ ಮತದಾರ ಪ್ರಭು ಕೈಕಟ್ಟಿ ಕುಳಿತಕೊಳ್ಳಬೇಕಾಯಿತು.

ಒಂದು ಕಡೆ ಶಾಸಕರು ಸಚಿವರಾಗಿ ಭಾರತದ ಕಾನೂನಿಗೆ ಬದ್ಧವಾಗಿ ಕೆಲಸ ಮಾಡುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿದರೇ ಇನ್ನೊಂದು ಕಡೆ ಸಚಿವ ಸ್ಥಾನ ಕೈತಪ್ಪಿದಕ್ಕೆ ಕಾನೂನನ್ನು ಕೈಗೆ ತಗೆದುಕೊಂಡು ನಾಡಿನ ರಸ್ತೆಗಳಲ್ಲಿ ಬೆಂಕಿ ಹಚ್ಚಿದರು..!!

ಅಂದಹಾಗೆ ಈ ಅವಾಂತರಕ್ಕೆ ಕಾರಣ ಯಾರು..??

ಮತ್ಯಾರು ಸ್ವಾಮಿ ನಾವು ನೀವುಗಳೇ.. ಒಂದು ಪಕ್ಷಕ್ಕೆ ಸ್ಪಷ್ಟವಾದ ಬಹುಮತ ಕೊಟ್ಟಿದ್ದರೇ ಇಷ್ಟೆಲ್ಲಾ ಡೊಂಬರಾಟ ‌ನೋಡುವ ಅವಶ್ಯಕತೆಯೇ ಬರುತ್ತಿರಲಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಿ.. ನಮ್ಮ ಮತವನ್ನು ಮಾರಿಕೊಳ್ಳದೇ ನಾಡು, ನುಡಿ, ನೆಲ, ಜಲ, ಸಂಸ್ಕೃತಿ, ಸಂಪ್ರದಾಯವನ್ನು ಕಾಪಾಡುವ ಪಕ್ಷವನ್ನು ಬೆಂಬಲಿಸಿ..

ಇಂತಿ

ನೊಂದ ಕನ್ನಡಿಗ ಪ್ರಸನ್ನ ಮ.