ಈತ ಮಾಡಿದ ಕೆಲಸ ನೋಡಿದರೆ, ಕನ್ನಡಿಗರ ರಕ್ತ ಕುದಿಯುತ್ತದೆ

ಈತ ಮಾಡಿದ ಕೆಲಸ ನೋಡಿದರೆ, ಕನ್ನಡಿಗರ ರಕ್ತ ಕುದಿಯುತ್ತದೆ

0

ನಾವು ಮೊದಲಿಗೆ ಹೇಳುವುದೆಂದರೆ ಯಾವ ಪಕ್ಷದವರೇ ಹಾಗಿರಲಿ ಇದು ಕರ್ನಾಟಕ ನೆನಪಿರಲಿ ಇಲ್ಲಿ ಕನ್ನಡಿಗನೇ ಸೌರ್ವಭೋಮ, ಯಾವುದೇ ಧರ್ಮವಿರಲಿ ಎಲ್ಲರೂ ಕನ್ನಡಿಗರು ಅನ್ನುವುದನ್ನು ಮರೆಯದಿರಿ, ಇಲ್ಲಿ ನಿಮಗೆ ಬಂದಿರುವ ಮತಗಳು ಅಸ್ಟೆ ಕನ್ನಡಿಗರದ್ದೇ ಹಾಗಿದೆ. ಈ ಲೇಖನದ ಕೊನೆಯಲ್ಲಿ ಒಂದು ಪ್ರಶ್ನೆ ಕೇಳಲಾಗಿದೆ ಸಂಪೂರ್ಣ ಓದಿ ಅದಕ್ಕೆ ನೀವೇ ಉತ್ತರಿಸಿ.

ನಾವು ಕನ್ನಡಿಗರು ಶಾಂತ ಸ್ವಭಾವದವರು, ಆದರೆ ಜಮೀರ್ ರವರ ಈ ನಡುವಳಿಕೆ ನನ್ನ ರಕ್ತ ಕುದಿಯುವಂತೆ ಮಾಡಿದೆ. ಹೌದು ಈ ಮಾತುಗಳನ್ನು ಮೊದಲ ಬಾರಿಗೆ ಬಳಸಿದ್ದೇನೆ ಯಾಕೆಂದರೆ ಅಷ್ಟು ಮನಸಿನಲ್ಲಿ ಕೋಪವಿದೆ. ಓದುಗರೇ ಕ್ಷಮಿಸಿಬಿಡಿ.

ಅಷ್ಟಕ್ಕೂ ಜಮೀರ್ ರವರು ಮಾಡಿದ್ದೇನು?

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಜಮೀರ್ ರವರಿಗೆ ಮಂತ್ರಿ ಪದವಿ ಸಿಗುವ ಅನುಮಾನವಿತ್ತು, ಹೇಗೋ ಸಿದ್ದರಾಮಯ್ಯ ನವರ ಕೃಪೆಯಿಂದ ಹೇಗೋ ಮಂತ್ರಿಗಿರಿ ಗಿಟ್ಟಿಸಿಕೊಂಡರು. ಜಮೀರ್ ರವರು ಪ್ರಮಾಣ ವಚನ ಸ್ವೀಕರಿಸಿದ ರೀತಿ ತಿಳಿದರೆ ನೀವು ಕಂಡಿತಾ ಅವರಿಗೆ ಮಾತ್ರವಲ್ಲ ಅವರು ಯಾವುದೇ ಪಕ್ಷವನ್ನು ಸೇರಿದರು ಅವರಿಗೆ ಮತ  ನೀಡಲು ಮನಸ್ಸು ಬರುವುದಿಲ್ಲ.

ನೆನ್ನೆ ಎಲ್ಲರೂ ಪ್ರಮಾಣ ವಚನವನ್ನು ಕನ್ನಡದಲ್ಲಿ ಸ್ವೀಕರಿಸಿದರು. ಕರ್ನಾಟಕದಲ್ಲಿ ಇದ್ದುಕೊಂಡು ಕನ್ನಡ ಮಾತನಾಡಲು ಬಂದರೂ ಜಮಿರ್ ಮಾತ್ರ ಹಾಗೆ ಮಾಡಲಿಲ್ಲ. ಬದಲಾಗಿ ಮೊದಲು ಇಂಗ್ಲಿಷ್ ನಲ್ಲಿ ತದ ನಂತರ ಉರ್ದು ವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಹಾಗಾದರೆ ಇವರಿಗೆ ಕನ್ನಡ ನೆನಪು ಬರುಳಿಲ್ಲವೇ? ಬಂದಿರುತ್ತದೆ ಆದರೆ ಬಿಡು ಹೇಗಿದ್ದರೂ ಗೆದ್ದಿದೇನೆ, ಇನ್ನು ಯಾರು ಏನು ಮಾಡುವರು ಎಂಬ ಭಂಡ ಧೈರ್ಯವೇ?ಸ್ವಾಮಿ ಇಂದು ಹೇಳುತ್ತೇನೆ ಕೇಳಿ ನೀವು ಕರ್ನಾಟಕದಲ್ಲಿ ಇರುವುದು ಕನ್ನಡ ಮಾತನಾಡಿ, ನೀವು ಮೊದಲು ಭಾರತೀಯರು ನಂತರ ಕನ್ನಡಿಗರು ಅದು ಆದಮೇಲೆ ಜಾತಿ ಧರ್ಮವನ್ನು ಪ್ರೀತಿಸಿ ನಾವು ಬೇಡ ಎನ್ನುವುದಿಲ್ಲ.

ಇಲ್ಲಿ ಕೆಲವು ಪದಗಳನ್ನು ಬಳಸಬಾರದಿತ್ತು. ಆದರೆ ಇಷ್ಟರ ಮಟ್ಟಿಗೆ ಕರ್ನಾಟಕದಲ್ಲಿ ಕನ್ನಡ ಭಾಷೆಯ ತೇಜೋವಧೆ ಆದಮೇಲೆ ನನ್ನ ಕೋಪವನ್ನು ಲೇಖನದ ರೊಪದಲ್ಲಿ ತಿಳಿಸಿದ್ದೇನೆ. ನಾನು ಮಾಡಿರುವುದು ತಪ್ಪು ಎಂದು ನಿಮಗೆ ಅನಿಸಿದರೆ ಕ್ಷಮಿಸಿಬಿಡಿ. ನನ್ನ ಹೇಳಿಕೆಗಳು ನಿಜ ಅನಿಸಿದರೆ ಶೇರ್ ಮಾಡಿ.

ಹೀಗೇ ಹೇಳಿ ಕನ್ನಡಿಗರೇ ಎಲ್ಲಿಂದಲೋ ಬಂದು ಕನ್ನಡದಲ್ಲಿ ಮಾತನಾಡಿದ ಮೋದಿ ಬೇಕಾ? ಕನ್ನಡಲಿ ಪ್ರಮಾಣ ವಚನ ಸ್ವೀಕರಿಸದ ಜಮೀರ್ ಬೇಕಾ?

– ಹೆಮ್ಮೆಯ ಕನ್ನಡಿಗ