ಬಾಲ ಬಿಚ್ಚಿದ ಪ್ರಕಾಶ್ ರೈ ಗೆ ಚಳಿ ಬಿಡಿಸಿದ ಸಿಂಹ

ಬಾಲ ಬಿಚ್ಚಿದ ಪ್ರಕಾಶ್ ರೈ ಗೆ ಚಳಿ ಬಿಡಿಸಿದ ಸಿಂಹ

0

ಪ್ರಕಾಶ್ ರೈ ಮೊದಲಿಂದಲೂ ಬೇಡದ ವಿಷಯಕ್ಕ್ಕೆ ಕೈ ಹಾಕಿ ಕನ್ನಡಗಿಗರ ಕೆಂಗಣ್ಣಿಗೆ ಗುರಿಯಾಗುವುದು ಸಾಮಾನ್ಯವಾಗಿಬಿಟ್ಟಿದೆ.ಪ್ರತಿ ಬಾರಿಯೂ ಕಾವೇರಿ ವಿಷಯಕ್ಕೆ ಸಂಭಂದವಿಲ್ಲದಿದ್ದರು ಮೂಗು ತೂರಿಸುತಿದ್ದಾರೆ. ಸುಮ್ಮನೆ ಕಾಲು ಕೆರೆದು ಕನ್ನಡಿಗರ ಕೋಪಕ್ಕಾ ತುತ್ತಾಗುವುದು ಎಷ್ಟರ ಮಟ್ಟಿಗೆ ಸರಿ.

‘ಕಾಳ’ ಚಿತ್ರವನ್ನು ಪ್ರತಿಯೊಬ್ಬ ಕನ್ನಡಿಗನೂ ವಿರೋಧಿಸುತ್ತಿರುವುದು ತಿಳಿದಿರುವ ವಿಷಯ, ಕಾರಣ ನಿಮಗೆ ತಿಳಿದಿಯೇ ಇದೆ ತಾನು ಒಬ್ಬ ಕನ್ನಡಿಗನು ಎಂದು ಮರೆತಿರುವ ರಜನಿ ಕೇವಲ ರಾಜಕೀಯ ಉದ್ದೇಶದಿಂದ ಕನ್ನಡಿಗರಿಗೆ ಕಾವೇರಿ ವಿಷಯದಲ್ಲಿ ಮೂಗು ತೂರಿಸಿ ವಿವಾದ ಸೃಷ್ಟಿಸಿದ್ದಾರೆ.

ಈ ವಿಷಯಕ್ಕೆ ಸಂಭದಿಸಿದಂತೆ ಟ್ವೀಟ್ ಮಾಡಿ ಮತ್ತೊಮ್ಮೆ ಕನ್ನಡಿಗರನ್ನು ನೇರವಾಗಿ ಎದುರು ಹಾಕಿಕೊಂಡ ಪ್ರಕಾಶ್ ರವರಿಗೆ ಸಿಂಹ ತಮ್ಮದೇ ಶೈಲಿಯಲ್ಲಿ ಘರ್ಜಿಸಿದ್ದಾರೆ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹರವರು ಕಟು ಮಾತುಗಳಿಂದ ಪ್ರಕಾಶ್ ರವರಿಗೆ ಚಳಿ ಬಿಡಿಸಿದ್ದಾರೆ. ಸಿಂಹರವರ ಪ್ರತಿ ಮಾತುಗಳನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ಪ್ರಕಾಶ್ ರವರಿಗೆ ಕಾಸು ಮುಖ್ಯವೇ ಹೊರತು ಜನರ ಗೋಳು ಅಲ್ಲ ಆದರೆ ನಮಗೆ ನಮ್ಮ ಹೆತ್ತ ತಾಯಿ ಕಾವೇರಿ ಮುಖ್ಯ ಎಂದು ಮಾತಿನ ಏಟು ನೀಡಿದ್ದಾರೆ. ರಜನೀಕಾಂತ್ ಅವರನ್ನು ನಾವೆಲ್ಲರೂ ಇಷ್ಟಪಟ್ಟಿದ್ದೇವೆ. ಆದರೆ ಈ ಹಿಂದೆ ಕಾವೇರಿ ವಿಚಾರವಾಗಿ ಕೊಟ್ಟಂತಹ ಹೇಳಿಕೆ ಬಹಳ ನೋವನ್ನು ಕೊಟ್ಟಿದೆ. ಹೀಗಾಗಿ ಕನ್ನಡ ಪರ ಸಂಘಟನೆಗಳು ಸಹಜವಾಗಿ ಅವರ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿವೆ ಎಂದರು.

ಸಿನಿಮಾಗಳಲ್ಲಿ ಖಳ ನಟನಾಗಿರುವ ಪ್ರಕಾಶ್ ನಿಜ ಜೀವನದಲ್ಲಿಯೂ ರಜನೀಕಾಂತ್ ಅವರಿಗೆ ಸಲಹೆ ಕೊಡುವುದರ ಬದಲು ಕಾವೇರಿಗೂ ‘ಕಾಳ’ ಚಿತ್ರಕ್ಕೂ ಸಂಬಂಧವಿಲ್ಲ ಎಂದು ಹೇಳುವುದರ ಮೂಲಕ  ಕರ್ನಾಟಕದ ಜನತೆಯ ಪಾಲಿಗೆ ಓರ್ವ ಖಳನಾಯಕನಾಗಿದ್ದಾರೆ.

ಪ್ರಕಾಶ್ ರೈ ಈನಾನು ಕೆಲವು ಸಾಮಾಜಿಕ ತಾಣಗಳಲ್ಲಿ ನೋಡಿದ್ದೇ ಒಂದು ಚಾನೆಲ್ ನ ಸಂದರ್ಶನದಲ್ಲಿ ಕಾವೇರಿ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈಆದರೆ ಈಗ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಜನರ ಶಾಂತಿಯನ್ನಿ ಕೆಡಿಸುತ್ತಿದ್ದಾರೆ, ಆ ಮೂಲಕ ಕರ್ನಾಟಕ ಹಾಗೂ ಕಾವೇರಿಯನ್ನು ಪದೇ ಪದೇ ಕೆಣಕುತ್ತಿದ್ದಾರೆ ಎಂದು ಹೇಳಿದರು.

ಪ್ರಕಾಶ್ ರವರಿಗೆ ಕೇವಲ ಹಣ ಮಾತ್ರ ಕಾಣುತ್ತದೆ, ಅದಕ್ಕಾಗಿ ರಜನೀಕಾಂತ್ ಚಿತ್ರದ ಪರ ಟ್ವೀಟ್ ಮಾಡಿದ್ದಾರೆ. ಕಾವೇರಿ ನಮ್ಮ ಹೆತ್ತ ತಾಯಿ , ಅವರ ಬಗ್ಗೆ ಯಾರು ಲಘುವಾಗಿ ಮಾತಾನಾಡಿದರು ಕೇವಲ ನಾನು ವಿರೋಧಿಸುವುದಿಲ್ಲ ಪ್ರತಿಯೊಬ್ಬ ಕನ್ನಡಿಗನೂ ವಿರೋಧಿಸುತ್ತಾನೆ ಎಂದರು.

ಕರ್ನಾಟಕದ ಪಾಲಿಗೆ ಜೀವನಾಡಿ ಕಾವೇರಿ. ಕರ್ನಾಟಕಕ್ಕೆ ಅನ್ನ ಹಾಗೂ ನೀರನ್ನು ಕೊಡುತ್ತಿರುವುದು ಕಾವೇರಿ. ಅಂಥ ಕಾವೇರಿ ವಿಚಾರವಾಗಿ ರಜನೀಕಾಂತ್ ಅಲ್ಲ, ಬೇರೆ ಯಾರೇ ಹೇಳಿಕೆ ಕೊಟ್ಟರೂ ನಾವು ಸಹಿಸಲ್ಲ. ಕಾವೇರಿಯನ್ನು ಕರ್ನಾಟಕದಿಂದ ಕಿತ್ತುಕೊಳ್ಳಲು ಪ್ರಯತ್ನಿಸಿದರೆ ತೀವ್ರವಾಗಿ ಖಂಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅದು ಏನೇ ಇರಲಿ, ಒಬ್ಬ ಕನ್ನಡಿಗನಾಗಿ ನಾನು ಕಾವೇರಿ ತಾಯಿ ಪರ ಯಾರು ಹೋರಾಟ ಮಾಡುತ್ತಾರೋ ಅವರಿಗೆ ಬೆಂಬಲ ನೀಡುತ್ತೇನೆ, ಯಾರು ಮಾಡಿಲ್ಲ ಅಂದರೆ ನಾನೇ ಹೋರಾಟ ಮಾಡುತ್ತೇನೆ. ದಯವಿಟ್ಟು ನೀವು ಕಾವೇರಿ ಪರವಾಗಿ ನಿಲ್ಲಿ

-ಹೆಮ್ಮೆಯ ಕಾವೇರಿ ತಾಯಿಯ ಮಗ