ನೋಟ್ ಬಾನ್ ನಿಂದ ತೊಂದರೆ ಆಯಿತು ಎಂದವರು ಮುಟ್ಟಿ ನೋಡಿಕೊಳ್ಳುವಂಥಹ ವಿಷಯ

ನೋಟ್ ಬಾನ್ ನಿಂದ ತೊಂದರೆ ಆಯಿತು ಎಂದವರು ಮುಟ್ಟಿ ನೋಡಿಕೊಳ್ಳುವಂಥಹ ವಿಷಯ

0

ನೋಟ್ ಬಾನ್ ನಿಂದ ಅದು ಕಷ್ಟ ವಾಯಿತು ಇದು ಕಷ್ಟ ವಾಯಿತು ಎಂದು ಬೊಬ್ಬೆ ಒದೆಯುವ ಸಂಖ್ಯೆ ಏನೂ ಕಡಿಮೆ ಇಲ್ಲ. ಈಗಲೂ ಕೂಡ ಪ್ರತಿಪಕ್ಷಗಳು ಇದನ್ನು ಟೀಕೆ ಮಾಡುವುದಕ್ಕೆ ಬಳಸುತ್ತವೆ. ಆದರೆ ಈಗ ಅವರೆಲ್ಲರೂ ಮುಖದ ಮೇಲೆ ಬಟ್ಟೆ ಹಾಕಿ ಕೊಳ್ಳುವಂತಹ ವಿಷಯವೊಂದು ಬಹಿರಂಗಗೊಂಡಿದೆ.ಪ್ರತಿಪಕ್ಷಗಳು ಬೇರೆ ವಿಷಯ ಹುಡುಕಬೇಕಾಗುತ್ತದೆ ಟೀಕೆ ಮಾಡಲು.

ಅಷ್ಟಕ್ಕೂ ವಿಷಯವೇನು?

ಇದು ಒಂದು ಎರಡು ರೂಪಾಯಿಯ ವಿಷಯವಲ್ಲ ಬರೋಬ್ಬರಿ ೨೪೦೦೦ ಕೋಟಿಯ ವಿಷಯ. ಕಣ್ಣಿಗೆ ಕಂಡಂತೆ ಇಷ್ಟು ಹಣ ಆದರೆ ಲೆಕ್ಕದ ಪ್ರಕಾರ ಇನ್ನು ಜಾಸ್ತಿ ಹೇಗೆಂದು ಮತ್ತು ಎಷ್ಟು ಹಣದ ವಿಷಯವೆಂದು ತಿಳಿಯಲು ಸಂಪೂರ್ಣ ಓದಿ.

ನೋಟ್ ಬ್ಯಾನ್ ಆದ ಬಳಿಕ ಅನರ್ಹಗೊಂಡ ಸುಮಾರು 73,000 ಕಂಪನಿಗಳು ನೋಟು ಅಮಾನ್ಯೀಕರಣದ ನಂತರ 24,000 ಕೋಟಿ ರೂ.ಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿವೆ ಎಂಬ ಸಂಗತಿಯನ್ನು ಸರ್ಕಾರಿ ಅಂಕಿ-ಅಂಶಗಳು ತಿಳಿಸಿವೆ. ದೀರ್ಘ ಕಾಲದಿಂದ ವಾಣಿಜ್ಯ ಮತ್ತು ವ್ಯವಹಾರಗಳನ್ನು ನಡೆಸದೇ ಇದ್ದ 2.26 ಲಕ್ಷ ಕಂಪನಿಗಳ ಹೆಸರುಗಳನ್ನು ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ತೆಗೆದು ಹಾಕಿದೆ. ಕಾಳಧನ ಮತ್ತು ಅಕ್ರಮ ಸ್ವತ್ತುಗಳ ವಿರುದ್ಧ ಕೇಂದ್ರ ರಾಷ್ಟ್ರವ್ಯಾಪಿ ಕೈಗೊಂಡ ಕಾರ್ಯಾಚರಣೆಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಇವುಗಳಲ್ಲಿ ಅನೇಕ ಸಂಸ್ಥೆಗಳು ಅಕ್ರಮ ಹಣಕಾಸು ವಹಿವಾಟು ನಡೆಸುವ ಉದ್ದೇಶದಿಂದಲೇ ಕಂಪನಿಗಳನ್ನು ಆರಂಭಿಸಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ 2.26 ಲಕ್ಷ ಅನರ್ಹ ಕಂಪನಿಗಳಲ್ಲಿ 1.68 ಲಕ್ಷ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಸಚಿವಾಲಯ ಪರಿಶೀಲನೆ ನಡೆಸಿದ್ದು, ನೋಟು ಅಮಾನ್ಯೀಕರಣದ ನಂತರ ಇವುಗಳಲ್ಲಿ 73,000 ಸಂಸ್ಥೆಗಳು 24,000 ಕೋಟಿ ರೂ.ಗಳನ್ನು ಠೇವಣಿಯಾಗಿರಿಸಿದೆ. ಇನ್ನೂ ಅನೇಕ ಕಂಪನಿಗಳ ಹಣಕಾಸು ವಹಿವಾಟಿಗೆ ಸಂಬಂಧಪಟ್ಟಂತೆ ವಿವಿಧ ಬ್ಯಾಂಕುಗಳ ಶಾಖೆಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅಲ್ಲದೇ ಕೆಲವು ಸಂಸ್ಥೆಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಸರಿ ಸುಮಾರು ಈ ಎಲ್ಲ ಅಕ್ರಮ ಕಂಪನಿಗಳನ್ನು ಸರ್ಕಾರ ತಡೆಯುವಲ್ಲಿ ವಿಫಲವಾಗಿದ್ದರೆ ಈ ೨೪೦೦೦ ಕೋಟಿಯು ಬರೋಬ್ಬರಿ ೧ ಲಕ್ಷ ಕೋಟಿಯಷ್ಟು ಬೆಳೆಯುತಿತ್ತು.ಒಟ್ಟಿನಲ್ಲಿ ಬರೋಬ್ಬರಿ ಮೋದಿ ಸರ್ಕಾರ ಕಣ್ಣ ಮುಂದೆ ೨೪ ಸಾವಿರ ಕೋಟಿ ಮತ್ತು ಪರೋಕ್ಷವಾಗಿ ಸುಮಾರು ಕಡಿಮೆ ಅಂದರೂ ೧ ಲಕ್ಷ ಕೋಟಿಯಷ್ಟು ಹಣವನ್ನು ಕಾಲ ಧನಿಕರಿಂದ ತಡೆದಿದೆ.

ಈಗ ಹೇಳಿ ವಿರೋಧಿಗಳೇ, ನಿಮ್ಮ ಮುಂದಿನ ಟೀಕಾಸ್ತ್ರ ಯಾವುದು?