ಅಖಾಡಕ್ಕಿಳಿದ ಬಿ ಸ್ ವೈ ಅಂಡ್ ಟೀಮ್: ಕೊಟ್ಟ ಮಾತು ಉಳಿಸಿಕೊಳ್ಳುವತ್ತ ನಡೆ

ಅಖಾಡಕ್ಕಿಳಿದ ಬಿ ಸ್ ವೈ ಅಂಡ್ ಟೀಮ್: ಕೊಟ್ಟ ಮಾತು ಉಳಿಸಿಕೊಳ್ಳುವತ್ತ ನಡೆ

0

ಬಿ ಸ್ ವೈ ರವರು ರಾಜೀನಾಮೆಗೂ ಮುನ್ನ ಮಾಡುವ ಭಾಷಣದಲ್ಲಿ ಮೋದಿ ರವರಿಗೆ ಎಲ್ಲ ಲೋಕಸಭಾ ಸ್ಥಾನಗಳನ್ನು ಗೆಲ್ಲಿಸಿಕೊಡುತ್ತೇವೆ ಎಂದು ಹೇಳಿದ್ದರು. ಈಗ ಈ ಮಾತನ್ನು ನಿಜ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ ರೈತರ ನಾಯಕ ಎಂದೇ ಖ್ಯಾತಿ ಪಡೆದಿರುವ ಬಿ ಸ್ ವೈ.

ಹೌದು ನೀವು ಓದುತ್ತಿರುವುದು ನಿಜ, ಇವರಿಗೆ ವಯಸ್ಸು ಹೆಚ್ಚಾದಂತೆ ಉಮ್ಮಸ್ಸು ಮತ್ತು ಗೆಲ್ಲುವ ಛಲ ಹೆಚ್ಚಾಗುತ್ತಿದೆ ಅದಕ್ಕೇ ಇರಬೇಕು ಹುಟ್ಟು ಹೋರಾಟಗಾರ ಎನ್ನುವುದು.

ಅಷ್ಟಕ್ಕೂ ಬಿ ಸ್ ವೈ ರವರ ನಡೆ ಯಾವುದು?

ಬಿ ಸ್ ವೈ ರವರು ಒಂದು ತಂಡವನ್ನು ಕಟ್ಟಿ ಅದಕ್ಕೆ ತಾವೇ ಮುಂದಾಳತ್ವವನ್ನು ಹೆಗಲ ಮೇಲೆ ಹಾಕಿಕೊಂಡು ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ಏರಿಸಿಯೇ ಸಿದ್ದ ಎಂದು ಹೊರಟಿದ್ದಾರೆ.ಅದರ ಸಂಪೂರ್ಣ ವಿವರ ಕೆಳಗಡೆ ಇದೆ. ಒಮ್ಮೆ ಸಂಪೂರ್ಣ ಓದಿ ನೀವು ಕೈಲಾದಷ್ಟು ಈ ಕಾರ್ಯಕ್ರಮಗಳನ್ನು ಕೈಗೊಳ್ಳಿ

9 ಮಾರ್ಗಗಳ ಮೂಲಕ ಕೇಂದ್ರ ಸರ್ಕಾರದ  ಸಾಧನೆ ಪ್ರಚಾರಕ್ಕೆ ನಿರ್ಧಾರ ಮಾಡಿದ್ದು, ಇದಕ್ಕೆಂದೇ 9 ವಿಭಾಗಗಳನ್ನು ರಚಿಸಿ ಸಂಚಾಲಕರು, ಸಹಸಂಚಾಲಕರ ನೇಮಕ ಮಾಡಿದೆ.ಈ ಟೀಂನ  ಪ್ರತಿ ಸಮಿತಿಗೆ ಪ್ರಮುಖ ಮೂವರು ನಾಯಕರ ನೇತೃತ್ವವಹಿಸಲಿದ್ದಾರೆ.  ಬಿಜೆಪಿ ಸುದ್ದಿಗೋಷ್ಠಿ ಸಮಿತಿಗೆ ಸಂಚಾಲಕರಾಗಿ ಸಿ.ಟಿ. ರವಿ, ಸಹ ಸಂಚಾಲಕರಾಗಿ ಅಶ್ವಥನಾರಾಯಣಗೌಡ, ಪ್ರಕಾಶ ನೇಮಕ ಮಾಡಿದೆ.

ಫಲನಾಭವಿಗಳ ಸಭೆ ಸಮಿತಿಗೆ ಸಂಚಾಲಕರಾಗಿ ಸಂಸದ ಪ್ರಹ್ಲಾದ್ ಜೋಶಿ,ಸಹ ಸಂಚಾಲಕರಾಗಿ ಸಂಸದ ಭಗವಂತ ಖೂಬಾ, ಪಿ.ಸಿ.ಮೋಹನ್ ನೇಮಕಮಾಡಲಾಗಿದೆ.

ಚಿಂತಕರ ಸಭೆ ಸಮಿತಿಗೆ ಸಂಚಾಲಕರಾಗಿ ಸಂಸದೆ ಶೋಭಾ ಕರಂದ್ಲಾಜೆ, ಸಹ ಸಂಚಾಲಕರಾಗಿ ಸಿ.ಎಂ.ಉದಾಸಿ, ತಿಂಗಳೆ ವಿಕ್ರಮಾರ್ಜುನ್ ಹೆಗಡೆ, ಗಣ್ಯರ ಸಂಪರ್ಕ ಸಮಿತಿ ಸಂಚಾಲಕರಾಗಿ ಎಂ.ನಾಗರಾಜ,ಸಹ ಸಂಚಾಲಕ ಕೋಟ ಶ್ರೀನಿವಾಸ ಪೂಜಾರಿ, ಸಚ್ಚಿದಾನಂದ ಮೂರ್ತಿ ಕಾರ್ಯ ನಿರ್ವಹಿಸಲಿದ್ದಾರೆ.

ಗ್ರಾಮಸಭೆಗಳ ಸಮಿತಿ ಸಂಚಾಲಕರಾಗಿ ಎನ್.ರವಿಕುಮಾರ್​, ಸಹ ಸಂಚಾಲಕ ಶಿವಕುಮಾರ, ಗುರುಲಿಂಗನಗೌಡ, ಸ್ವಚ್ಚತಾಭಿಯಾನ ಸಮಿತಿ ಸಂಚಾಲಕರಾಗಿ ಜಗದೀಶ್ ಹಿರೇಮನಿ,ಸಹ ಸಂಚಾಲಕರಾಗಿ ಸುಭಾಸ್ ರಾಮಪ್ಪ, ಹೆಚ್.ವಿ.ರಾಜು ಇರಲಿದ್ದಾರೆ.

ಬೈಕ್ ಜಾಥಾ ಸಮಿತಿಗೆ ಸಂಚಾಲಕ ಅರವಿಂದ ಲಿಂಬಾವಳಿ,ಸಹ ಸಂಚಾಲಕ ಕರುಣಾಕರ್, ತಮ್ಮೇಶಗೌಡ ಹಿರಿಯ ನಾಗರಿಕರ ಸಂಪರ್ಕ ಸಮಿತಿ ಸಂಚಾಲಕ ಶಾಸಕ ಸುರೇಶಕುಮಾರ,ಸಹಸಂಚಾಲಕ ಈರಣ್ಣ ಕರಾಡಿ, ಉದಯಕುಮಾರ ಶೆಟ್ಟಿ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ

ಚುನಾವಣೆಗೂ ಮುನ್ನ ಯಾವೆಲ್ಲಾ ರೀತಿ ಕಾರ್ಯ ನಿರ್ವಹಿಸಬೇಕು ಎಂದು ಕಾರ್ಯಕರ್ತರಿಗೆ ಸೂಚನೆಯನ್ನು ನೀಡಿದೆ.

1- ಜಿಲ್ಲಾವಾರು ಸುದ್ದಿಗೋಷ್ಠಿಗಳನ್ನು ನಡೆಸುವುದು

2- ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಒಗ್ಗೂಡಿಸಿ ಸಭೆ

3- ರಾಜ್ಯದ ಚಿಂತಕರನ್ನು ಸಂಪರ್ಕಿಸಿ ಸಭೆ ನಡೆಸುವುದು

4- ರಾಜ್ಯದ ಗಣ್ಯರನ್ನು ಸಂಪರ್ಕಿಸಿ ವಿಶ್ವಾಸ ಮೂಡಿಸುವುದು

5- ಗ್ರಾಮ ಸಭೆಗಳನ್ನು ನಡೆಸಿ ಗ್ರಾಮಗಳಲ್ಲಿ ಮೋದಿ ವರ್ಚಸ್ಸು ಹೆಚ್ಚಿಸುವುದು

6- ಕೊಳಚೆ ಪ್ರದೇಶಗಳಲ್ಲಿ  ಸ್ವಚ್ಛತಾ ಅಭಿಯಾನ ಕಾರ್ಯ ಆಯೋಜನೆ

7- ಪ್ರಮುಖ ಜಿಲ್ಲೆಗಳಲ್ಲಿ ಬೈಕ್ ಜಾಥಾ ನಡೆಸಿ ಮೋದಿ ಸಾಧನೆ ಬಿಂಬಿಸುವುದು

8-  ಹಿರಿಯ ನಾಗರಿಕರ ಸಭೆ ನಡೆಸಿ ಜನರಿಗೆ ವಿಷಯ ತಲುಪಿಸಲು ನಿರ್ಧಾರ

9- ಕೇಂದ್ರ ನಾಯಕರ ಕಾರ್ಯಕ್ರಮ ಜೋಡಣೆ

ಈ ಎಲ್ಲ ಕಾರ್ಯಕ್ರಮಗಳ ಮೂಲಕ ಮತ್ತೊಮ್ಮೆ ಮೋದಿ ಅಧಿಕಾರದ ಗದ್ದುಗೆ ಏರುವರೇ? ನಿಮ್ಮ ಅಭಿಪ್ರಾಯ ತಿಳಿಸಿ ಶೇರ್ ಮಾಡಿ ಬೆಂಬಲಿಸಿ