ಶಾರುಖ್ ಖಾನ್ ಮಗಳಿಗೆ ಈ ಆಟಗಾರನ ಮೇಲೆ ಪ್ಯಾರ್ !!!

ಶಾರುಖ್ ಖಾನ್ ಮಗಳಿಗೆ ಈ ಆಟಗಾರನ ಮೇಲೆ ಪ್ಯಾರ್

0

ಪ್ರತಿಬಾರಿಯಂತೆ ಈ ಬಾರಿಯ ಐಪಿಎಲ್ ಭರ್ಜರಿಯಾಗಿ ಕೊನೆಗೊಂಡಿದೆ. ಪ್ರತಿ ಐಪಿಎಲ್ ನಲ್ಲಿಯೂ ಕೆ ಕೆ ರ್ ತಂಡ ಉತ್ತಮ ಪ್ರದರ್ಶವನ್ನು ನೀಡುತ್ತಿದೆ, ಇದರ ಮಾಲೀಕರು ಶಾರುಖ್ ಖಾನ್ ಎಂಬ್ಬು ತಿಳಿದಿರುವ ವಿಷಯ.

ಪ್ರತಿ ಪಂದ್ಯಕ್ಕೂ ಶಾರುಖ್ ಹಾಜರಿರುತ್ತಾರೆ, ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದಾರೆ ಅಷ್ಟೇ, ಆದರೆ ಈ ಬಾರಿ ಶಾರುಖ್ ಖಾನ್ ರ ಜೊತೆ ಅವರ ಮಗಳು ಪ್ರತಿ ಪಂದ್ಯಕ್ಕೂ ಬರುತಿದ್ದರು, ಕಳೆದ ಆವೃತಿಗಳಲ್ಲಿ ಇಷ್ಟು ಆಸಕ್ತಿ ತೋರುತ್ತಿರಲಿಲ್ಲ ಅವರ ಮಗಳು. ಇದನ್ನು ಕೆಲವರು ಪ್ರಶ್ನಿಸಿದ್ದು ಉಂಟು.

ಈಗ ಅದಕ್ಕೆ ಪುಷ್ಠಿ ನೀಡುವಂತೆ ಒಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ, ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್ ತಮ್ಮದೇ ತಂಡದ ಯುವ ಆಟಗಾರನ ಮೇಲೆ ಪ್ರೇಮ ಚಿಗುರಿದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಾಗು ಕೆಕೆಆರ್ ತಂಡದ ಯುವ ಆಟಗಾರ ಶುಭಮನ್ ಗಿಲ್ ಮೇಲೆ ಸುಹಾನ್‍ಗೆ ಕ್ರಶ್ ಆಗಿದೆ ಎಂಬ ಚರ್ಚೆ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಬಾರಿ ಐಪಿಎಲ್‍ನಲ್ಲಿಯೂ ಶುಭಮನ್ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಸುಹಾನಾ ಈ ಬಾರಿ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುವದರ ಹಿಂದಿನ ವಿಷಯವೇ ಶುಭಮನ್ ಗಿಲ್ ಎಂಬ ಗಾಸಿಪ್ ವೈರಲ್ ಆಗಿದೆ.