ಚುನಾವಣಾ ಚಾಣಕ್ಯ ತಂತ್ರಕ್ಕೆ ಚಾಲನೆ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ ಗ್ರೇಟ್ ಕ್ಯಾಪ್ಟನ್

ಚುನಾವಣಾ ಚಾಣಕ್ಯ ತಂತ್ರಕ್ಕೆ ಚಾಲನೆ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ ಗ್ರೇಟ್ ಕ್ಯಾಪ್ಟನ್

0

ಬಿಜೆಪಿ ಪಕ್ಷದ ಚಾಣಕ್ಯ ಎಂದೇ ಖ್ಯಾತಿ ಹೊಂದಿರುವ ಅಮಿತ್ ಶಾ ಏನಾದರೂ ತಂತ್ರಗಳನ್ನು ಮಾಡಿ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದು ಮೋದಿ ರವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಯೋಜನೆಗಳನ್ನು ರೂಪಿಸಿ ಅದನ್ನು ಈಗಾಗಲೇ ಕಾರ್ಯ ರೂಪಕ್ಕೆ ತಂದಿದ್ದಾರೆ.

ಅಷ್ಟಕ್ಕೂ ಏನದು ಯೋಜನೆ?

ಕಳೆದ ಕೆಲವು ದಿನಗಳ ಹಿಂದೆ ನಿಮಗೆ ತಿಳಿದಿರುವ ಹಾಗೆ ಕರುನಾಡ ವಾಣಿ ಯಲ್ಲಿ ಅವರ ಯೋಜನೆಗಳ ಬಗ್ಗೆ ತಿಳಿಸಿದ್ದೆವು. ದೇಶದ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸಿ ಪ್ರಮುಖ ನಾಯಕರ ಬೆಂಬಲ ಕೋರುವುದು ಈ ಯೋಜನೆಯ ಪ್ರಮುಖ ಉದ್ದೇಶ. ಇದರಿಂದ ಜನ ಮತಗಳನ್ನು ಸೆಳೆಯಲು ಸಾಧ್ಯವಾಗುತ್ತದೆ ಎಂಬುದು ಚಾಣಕ್ಯರ ತಂತ್ರ.

ಅಷ್ಟಕ್ಕೂ ಕಾರ್ಯ ರೂಪಕ್ಕೆ ತಂದಿದ್ದು ಯಾರೊಂದಿಗೆ? ಯಾರು ಆ ಪ್ರಮುಖರು?

ಭಾರತದಲ್ಲಿ ಕ್ರಿಕೆಟ್ ನ ಪ್ರಭಾವ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.ಅದ್ಕಕಾಗಿಯೇ ಇರಬೇಕು ನೇರವಾಗಿ ಭಾರತ ತಂಡದ ಮಾಜಿ ನಾಯಕ ಮಾತು ಭಾರತಕ್ಕೆ ಮೋಡ ವಿಶ್ವ ಕಪ್ ತಂದುಕೊಟ್ಟ ಕಪಿಲ್ ದೇವ್ ರವರನ್ನು ಅಮಿತ್ ಶಾ ಭೇಟಿ ಮಾಡಿದ್ದಾರೆ.

ಭೇಟಿಯ ವೇಳೆ ತಮ್ಮ ನಾಲ್ಕು ವರ್ಷದ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದಾರೆ.ಈ ವಿಷವನ್ನು ಅಮಿತ್ ಶಾ ರವರೇ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬೆಂಬಲಕ್ಕಾಗಿ ಬೇಟಿ ಅಭಿಯಾನದಡಿ ಅಮಿತ್ ಶಾ ಕನಿಷ್ಠ 50 ಗಣ್ಯರನ್ನ ಬೇಟಿಯಾಗಿ ಮೋದಿ ಸರ್ಕಾರದ ಸಾಧನೆಯನ್ನ ವಿವರಿಸಲಿದ್ದಾರೆ. ಇದೇ ಕಾರ್ಯಕ್ರಮದಡಿ ಇತ್ತೀಚೆಗೆ ಅಮಿತ್ ಶಾ ಭಾರತೀಯ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರನ್ನ ಬೇಟಿಯಾಗಿದ್ದರು.ಇದೇ ವೇಳೆ ಭಾರತೀಯ ಸೇನೆಗೆ ಮೋದಿ ಸರ್ಕಾರದ ಕೊಡುಗೆಯನ್ನ ವಿವರಿಸಿದ್ದರು. ಜೊತೆಗೆ ಸೇನೆಯ ಸುಧಾರಣೆಗೆ ದಲ್ಬೀರ್ ಅವರಲ್ಲಿ ಸಲಹೆ ಪಡೆದಿದ್ದರು.