ಅವರು ಇವರು ಅಲ್ಲ ಖುದ್ದು ಮೋದಿಯೇ ಅಖಾಡಕ್ಕೆ: ತಂತ್ರಗಾರಿಕೆಗೆ ಬೆದರುತ್ತದೆಯೇ ತೃತೀಯ ರಂಗ

ಅವರು ಇವರು ಅಲ್ಲ ಖುದ್ದು ಮೋದಿಯೇ ಅಖಾಡಕ್ಕೆ: ತಂತ್ರಗಾರಿಕೆಗೆ ಬೆದರುತ್ತದೆಯೇ ತೃತೀಯ ರಂಗ

0

ಕರ್ನಾಟಕ ಚುನಾವಣೆ ಮುಗಿದ ಮೇಲೆ ಎಲ್ಲರ ಕಣ್ಣು ಮುಂದಿನ ಲೋಕಸಭೆ ಚುನಾವಣೆಯ ಮೇಲಿದೆ, ಚುನಾವಣೆ ಇನ್ನು ಒಂದು ವರ್ಷವಿದ್ದರೂ ಕಾವು ಹೆಚ್ಚಾಗುತ್ತಲೇ ಇದೆ.ಇದರ ಬೆನ್ನಲ್ಲೇ ಮೋದಿ ಅಲೆಯನ್ನು ತಡೆಯಲು ದೇಶದ ಎಲ್ಲ ಪಕ್ಷಗಳೂ ಒಂದಾಗಿ ತೃತೀಯ ರಂಗವನ್ನು ಸೃಷ್ಟಿಸಿಕೊಂಡಿವೆ.

ಮೋದಿರವರ ಸುತ್ತ ಈಗ ಚಕ್ರವ್ಯೂಹವೊಂದು ಸೃಷ್ಟಿಯಾಗಿದೆ ಎಂದು ಹೇಳಿದರು ತಪ್ಪಿಲ್ಲ. ಆದರೆ ಮೋದಿ ಮಾತ್ರ ಯಾವುದಕ್ಕೂ ಜಗ್ಗುವಂತೆ ಕಾಣುತಿಲ್ಲ.ಚಾಣಕ್ಯ ತಂತ್ರಗಾರಿಕೆ ಮತ್ತು ಮೋದಿಯ ಮೋದಿ ಈಗ ಚಕ್ರವ್ಯೂಹವನ್ನು ಭೇದಿಸುವ ಹೊಸ್ತಿಲಲ್ಲಿದೆ.

ತೃತೀಯ ರಂಗವನ್ನು ಬಗ್ಗು ಬಡಿಯಲು ಚಾಣಕ್ಯರು ತಂತ್ರಗಳನ್ನು ರೂಪಿಸುತ್ತಿರುವ ಹೊಸ್ತಿಲಲ್ಲೇ ಮೋದಿರವರು ಅಖಾಡಕ್ಕೆ ಧುಮುಕಿದ್ದಾರೆ. ಲೋಖಾಸಭೆ ಮತ್ತು ವಿಧಾನಸಭೆ ಉಪ ಚುನಾವಣೆಗಳಲ್ಲಿ ದೊರೆತಿರುವ ಅಲ್ಪ ಯಶಸ್ಸಿನಿಂದ ಪ್ರತಿಪಕ್ಷಗಳು ಈಗಾಲೇ ಗದ್ದುಗೆ ಏರಿದಂತೆ ಬೀಗುತ್ತಿವೆ, ಆದರೆ ಮೋದಿ ಮಾತ್ರ ತಮ್ಮನ್ನು ಮಣಿಸುವ ಯಾವುದೇ ಸಾಧ್ಯತೆಗೂ ಅವಕಾಶ ನೀಡುವಂತೆ ಕಾಣುತಿಲ್ಲ, ಅದಕ್ಕಾಗಿಯೇ ಕುದ್ದು ಮೋದಿರವರೇ ತಂತ್ರಗಾರಿಕೆ ಹೆಣೆಯಲು ಆರಂಭಿಸಿದ್ದಾರೆ.

ಅಷ್ಟಕ್ಕೂ ಮೋದಿರವರ ತಂತ್ರಗಾರಿಕೆಯೇನು?ಮೋದಿರವರ ಸಂಪೂರ್ಣ ಪ್ಲಾನ್ ಗಳು ಕೆಳಗಡೆ ಇದೆ ಒಮ್ಮೆ ಓದಿ.

1. ಕೇಂದ್ರ ಸರ್ಕಾರದ ಕಳೆದ ನಾಳು ವರ್ಷಗಳಲ್ಲಿ ಜಾರಿಗೊಳಿಸಿರುವ ಯೋಜನೆಗಳು ಜನರಿಗೆ ಎಷ್ಟರ ಮಟ್ಟಿಗೆ ತಲುಪಿವೆ ಎಂದು ತಿಳಿಯಲು ಶೀಘ್ರದಲ್ಲೇ ಪ್ರತಿ ಬಿಜೆಪಿ ಪಕ್ಷದ ಶಾಸಕರು, ಸಂಸದರ ಜೊತೆ ನೇರ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ನಿರ್ಧರಿಸಿ ತಾವೇ ಖುದ್ದು ನಿರ್ಣಯ ತೆಗೆದು ಕೊಳ್ಳಲಿದ್ದಾರೆ.

ಈ ಪ್ಲಾನ್ ಅನ್ನು ‘‘ನಮೋ ಆ್ಯಪ್‌’ ಮೂಲಕ ದೇಶದಂತ್ಯ ಇರುವ ಬಿಜೆಪಿ ಶಾಸಕರ ಜೊತೆಗೆ ಮಾತನಾಇ ಆಯಾ ಶಾಸಕರ ಕ್ಷೇತ್ರಗಳ ಬಗ್ಗೆ ತಮ್ಮ ಬಳಿ ಇರುವ ಮಾಹಿತಿಯನ್ನು ಹಂಚಿಕೊಂಡು, ಶಾಸಕರ ಉತ್ತರಗಳನ್ನು ಕೇಳಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ವಿಚಾರಿಸಲಿದ್ದಾರೆ.

ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆಯ ಟಿಕೆಟ್ ಬಗ್ಗೆ ಇವರ ಮಾತುಗಳನ್ನು ಆಲಿಸಿ ನಿರ್ಧಾರ ಕೈಗೊಳಲಿದ್ದಾರೆ. ಮತ್ತು ದೇಶದ ಜನರ ಜೊತೆಗೂ ಸಮಾಲೋಚನೆ ನಡೆಸಿ, ಶಾಸಕ, ಸಂಸದರ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಬಗ್ಗೆ ಜನರಿಂದ ಪ್ರತಿಕ್ರಿಯೆ ಬಯಸಲಿದ್ದಾರೆ.

ಇತ್ತೀಚೆಗೆ ನಡೆಸಿದ ಸಂವಾದದಲ್ಲಿ ಕುದ್ದು ಮೋದಿರವರೇ ಸಾಮಾನ್ಯ ಪ್ರಜೆಗಳಿಂದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿಕ್ರಿಯೆಗಳನ್ನು ಕಲೆಹಾಕಿದ್ದರು, ಇದರಿಂದ ಜನರಿಗೆ ಮತ್ತಷ್ಟು ಹತ್ತಿರವಾಗಲು ಸಹಕಾರಿಯಾಗಲಿದೆ ಎಂಬುದು ಮೋದಿರವರ ಪ್ಲಾನ್.

ಇಷ್ಟು ಸಾಲನು ಎಂಬಂತೆ ಪ್ರತಿ ಕ್ಷೇತ್ರದ ಜನಪ್ರಿಯ ನಾಯಕರ ಕುರಿತಂತೆ ಮೋದಿ ರವರು ಮಾಹಿತಿಯನ್ನು ಸಂಗ್ರಹಿಸುತ್ತಿದ್ದರೆ ಇದೆ ರೀತಿ ೨೦೧೪ ರ ಚುನಾವಣೆಯಲ್ಲಿಯೂ ಮಾಡಿ ಹಲವು ಹೊಸ ಮುಖಗಳಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದರು, ಆದರೆ ಈ ಬಾರಿಯೂ ಅದೇ ಪುನಾರ್ವರ್ತನೆಗೊಳ್ಳಲಿದೆಯೇ? ಕಾದು ನೋಡಬೇಕಿದೆ.

ಜಾತಿ ಲೆಕ್ಕಾಚಾರವನ್ನು ಮಾಡಿಕೊಂಡು ಸ್ನಾನಗಳನ್ನು ಹಂಚಿ ಪ್ರತಿಪಕ್ಷಗಳ ತಂತ್ರವನ್ನು ಮಕಾಡೆ ಮಲಗುವಂತೆ ಮಾಡಲು ಆಯಾ ಕ್ಷೇತ್ರದ ಜನಪ್ರಿಯರಿಗೆ ಟಿಕೆಟ್ ನೀಡುವ ಉದ್ದೇಶದಿಂದ ಮೋದಿರವರು ಎ ರೂಪುರೇಷೆಯನ್ನು ಸಿದ್ಧಪಡಿಸುತ್ತಿದ್ದಾರೆ.

ಮೋದಿ ತಯಾರಿಗಳ ಪಂಚ ಸೂತ್ರಗಳು ಕೆಲಕಡೆ ಇವೇ ಒಮ್ಮೆ ಓದಿ.

  1. ‘ನಮೋ ಆ್ಯಪ್‌’ ಮೂಲಕ ಬಿಜೆಪಿ ಶಾಸಕರ ಜತೆ ಸಂವಾದ. ಆಯಾ ರಾಜ್ಯಗಳಲ್ಲಿರುವ ಪ್ರಮುಖ ವ್ಯಕ್ತಿಗಳ ಮಾಹಿತಿ ಸಂಗ್ರಹ.
  2. ಜನರ ಜತೆಗೂ ಸಮಾಲೋಚನೆ ನಡೆಸಿ ಕೇಂದ್ರದ ಯೋಜನೆಗಳ ಅನುಷ್ಠಾನ ಕುರಿತು ಮಾಹಿತಿ ಸಂಗ್ರಹ.
  3. ಆಯಾ ರಾಜ್ಯ, ಕ್ಷೇತ್ರದಲ್ಲಿನ ಜನಪ್ರಿಯ ನಾಯಕರ ಕುರಿತು ಸಾರ್ವಜನಿಕರಿಂದ ವಿವರ ಯಾಚನೆ.
  4. ಲೋಕಸಭೆ ಚುನಾವಣೆಯ ಟಿಕೆಟ್‌ ಹಂಚಿಕೆಯಲ್ಲಿ ಖುದ್ದು ಭಾಗಿ.
  5. ಜನರು, ಶಾಸಕರಿಂದ ಪ್ರಮುಖ- ಜನಪ್ರಿಯ ನಾಯಕರ ಬಗ್ಗೆ ಮಾಹಿತಿ ಸಂಗ್ರಹಿಸಿ ಅಂತಹ ವ್ಯಕ್ತಿಗಳಿಗೆ ಟಿಕೆಟ್‌ ನೀಡುವ ಸಂಭವ

ಮೋದಿ ಇಷ್ಟೆಲ್ಲ ತಂತ್ರಗಳನ್ನು ಮಾಡುತಿದ್ದರೆ ಇವರ ತಂತ್ರಗಳು ಫಲಿಸಿ ಮತ್ತೊಮ್ಮೆ ಪ್ರಧಾನಿ ಹಾಗುವರೇ? ಹೌದು ಎಂದಾದಲ್ಲಿ ಶೇರ್ ಮಾಡಿ