ಕಟು ಪದಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಟೀಕಿಸಿದ ಅನಂತ್ ಕುಮಾರ್

ದೇಶದ ಅತಿ ದೊಡ್ಡ ಪಕ್ಷ ಕಾಂಗ್ರೆಸ್‍ಗೆ ಇಂದು ರಾಜ್ಯದ ಪುಟಗೋಸಿ ಪಾರ್ಟಿಗೆ ಬಗ್ಗಿ ಸಲಾಂ ಹೊಡೆಯುವ ದಯನೀಯ ಪರಿಸ್ಥಿತಿಗೆ ಬಂದಿದೆ ಅಂತಾ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಲೇವಡಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಭವನದಲ್ಲಿ ನಡೆದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಸದ್ಯ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದೆ. ಮುಂದಿನ ದಿನಗಳಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಇವತ್ತಲ್ಲ ನಾಳೆ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸಬೇಕಿದೆ ಅಂತಾ ಅಂದ್ರು.

ಭಟ್ಕಳದಲ್ಲಿ ಹೇಗೆ ಬಿಜೆಪಿ ಗೆಲ್ಲಬೇಕು ಎಂದು ಹಠ ಇತ್ತೋ ಹಾಗೆ ಇಂದು ಹಳಿಯಾಳ ಕ್ಷೇತ್ರದಲ್ಲಿಯೂ ಬಿಜೆಪಿ ಭಾವುಟ ಹಾರಾಡಬೇಕಿದೆ. ಮುಂದಿನ ದಿನಗಳಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಬಿಜೆಪಿ ಸೇರ್ತಾರೋ ಅಥವಾ ನಮ್ಮ ಪಕ್ಷದ ಹೊಸ ಅಭ್ಯರ್ಥಿ ಬರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರೋವರೆಗೂ ನಾನು ರಾಜಕೀಯ ನಿವೃತ್ತಿ ಪಡೆಯಲ್ಲ ಅಂತಾ ಅನಂತಕುಮಾರ್ ಹೆಗಡೆ ಶಪಥ ಮಾಡಿದ್ರು.

Post Author: Ravi Yadav