ಶಾಕಿಂಗ್ : ಜಾಹೀರಾತಿಗಾಗಿ ಸಿದ್ದರಾಮಯ್ಯ ಸರ್ಕಾರ ಮಾಡಿದ್ದ ಖರ್ಚು ಎಷ್ಟು ಗೊತ್ತಾ!? ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಕಳೆದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಳೆದ ಐದು ವರ್ಷಗಳ ಕಾಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾಹೀರಾತಿಗಾಗಿ ನೂರಾರು ಕೋಟಿ ರೂಪಾಯಿಯನ್ನು ಖರ್ಚು ಮಾಡಿದೆ ಎನ್ನುವ ಮಾಹಿತಿಯೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯಿಂದ ಬಹಿರಂಗವಾಗಿದೆ. ಅಂದ ಹಾಗೇ ನೀಡಲಾಗಿರುವ ಮಾಹಿತಿಯಲ್ಲಿ ವೆಚ್ಚದಲ್ಲಿ ಹೇಳಲಾಗಿರುವ ಮಾಹಿತಿ ನೋಡಿದರೆ ನೀವು ಬೆಚ್ಚಿ ಬೀಳ್ತೀರಾ.ಇದನ್ನು ತನಿಖೆಗೆ ಆದೇಶಿಸ ಬೇಕೆಂದು ಕೆಲವ್ರು ಪಟ್ಟು ಹಿಡಿದಿದ್ದಾರೆ. ವಿವರಕ್ಕಾಗಿ ಸಂಪೂರ್ಣ ಓದಿ.

ಹೌದು, ಹಿಂದಿನ ಸಿದ್ದರಾಮಯ್ಯ ಸರ್ಕಾರ ಬರೋಬ್ಬರಿ 226 ಕೋಟಿ ಹಣವನ್ನು ಜಾಹೀರಾತಿಗೆ ಖರ್ಚು ಮಾಡಿದೆ ಎನ್ನುವುದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಎನ್ನುವವರು ಸಲ್ಲಿಸಿದ ಆರ್‌ಟಿಐನಡಿ ಬಯಲಾಗಿದೆ. ಇದು ಹಲವು ಅನುಮಾನಗಳಿಗೆ ಎಡವು ಮಾಡಿಕೊಟ್ಟಿದೆ.ಇದರಲ್ಲಿ ಅಕ್ರಮ ನಡೆದಿರಬಹುಅದೇ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.

ಇನ್ನು ಚುನಾವಣೆ ವರ್ಷದಲ್ಲಿ ಅತಿ ಹೆಚ್ಚು ಅಂದರೆ, 142 ಕೋಟಿ ರೂ. ಹಣವನ್ನು ಸರ್ಕಾರ ಪ್ರಚಾರಕ್ಕೆ ಬಳಸಿಕೊಂಡಿದೆ. ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಸರ್ಕಾರ ಪೋಲು ಮಾಡಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಆರೋಪಿಸಿದ್ದಾರೆ. ಈ ಮಾಹಿತಿಯನ್ನು ಇಟ್ಟಿಕೊಂಡು ಸರ್ಕಾರ ತನಿಖೆ ನಡೆಸ್ಸಬೇಕೆಂಬುದು ಈಗ ಇವರ ವಾದವಾಗಿದೆ.

ಇದಲ್ಲದೇ ಮೊದಲು ವಾರ್ತಾ ಇಲಾಖೆಯಿಂದಲೇ ಎಲ್ಲಾ ಜಾಹೀರಾತುಗಳನ್ನು ವಿತರಣೆ ಮಾಡುವ ಪದ್ಧತಿ ಇತ್ತು. ಆದರೆ, ಕೆಲ ವರ್ಷಗಳ ಹಿಂದೆ ಮಾರ್ಕೆಟಿಂಗ್ ಕನ್ಸಲ್ಟಂಟ್ ಏಜೆನ್ಸಿ ಮೂಲಕ ಜಾಹೀರಾತು ನೀಡಲಾಗಿದೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕು ಎಂದುಭೀಮಪ್ಪ ಗಡಾದ್ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

Post Author: Ravi Yadav