ಸರಕಾರಕ್ಕಿಂತ ಮುಂಚೆಯೇ ಮಂಗಳೂರಿನಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿದ ಸಂಘ ಪರಿವಾರ

ಸರಕಾರಕ್ಕಿಂತ ಮುಂಚೆಯೇ ಮಂಗಳೂರಿನಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿದ ಸಂಘ ಪರಿವಾರ

0

ಮಂಗಳೂರು ಮೇ.29: ಮೆಕ್ನು ಚಂಡಮಾರುತಕ್ಕೆ ಕರಾವಳಿ ತತ್ತರಿಸಿದೆ. ಸೋಮವಾರ ಸಂಜೆಯಿಂದ ಧಾರಾಕಾರ ಸುರಿಯುತ್ತಿರುವ ಮಳೆ ಮಂಗಳೂರು ನಗರದ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ.

ರಸ್ತೆಗಳಲ್ಲಿ ಮಳೆ ನೀರು ನದಿರೂಪದಲ್ಲಿ ಹರಿಯುತ್ತಿದೆ. ಅಸ್ತಿ ಪಾಸ್ತಿಗೆ ಅಪಾರ ಹಾನಿಯಾಗಿದ್ದು ,ಹಲವಾರು ವಾಹನಗಳು ಮುಳುಗಿವೆ. ಬೈಕೊಂದು ನೀರಿನಲ್ಲಿ ತೇಲುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿತ್ತು.

ಉಡುಪಿ ಹಾಗೂ ದಕ ಜಿಲ್ಲೆಯ ಜಿಲ್ಲಾಧಿಕಾರಿಗಳು ಇಂದು ಮತ್ತೆ ನಾಳೆ ಶಾಲೆ – ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಎತನ್ಮಧ್ಯೆ ಜೀವ ಹಾನಿಯಾದ ವರದಿಗಳು ಕೆಲ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಆದರೆ ಜಿಲ್ಲಾಡಳಿತ ಇಂತಹ ಯಾವುದೇ ವರದಿಯನ್ನು ಖಚಿತಪಡಿಸಿಲ್ಲ. ಜಿಲ್ಲೆಯಲ್ಲಿ ಉಂಟಾಗಿರುವ ವಿಪತ್ತಿನ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾದಿಕಾರಿಗಳ ನೇತೃತ್ವದಲ್ಲಿ ವಿಪತ್ತು ನಿವಾರಣೆಗಾಗಿ ಹತ್ತು ತಂಡಗಳನ್ನು ರಚಿಸಿಲಾಗಿದೆ ಎನ್ನಲಾಗುತ್ತಿದೆ.

ಇದೀಗ ಜಿಲ್ಲೆಯಲ್ಲಿನ ಮಳೆಯಿಂದಾದ ಆಪತ್ಕಾರಿ ಪರಿಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮುಂದಾಗಿದೆ. ದೇಶದಲ್ಲಿ ಮಾನವ ಸಂಕುಲಕ್ಕೆ ಆಪತ್ತು ಎದುರಾದಗಲೆಲ್ಲಾ ಜನರ ನೆರವಿಗೆ ಧಾವಿಸುವ ಹೆಗ್ಗಳಿಕೆಯನ್ನು ಅರ್ ಎಸ್ ಎಸ್ ಹೊಂದಿದೆ.1962ರ ಇಂಡೋ – ಚೈನಾ ಯುದ್ದದ ಸಂದರ್ಭದಲ್ಲಿ ದೆಹಳಿಯಲ್ಲಿ ಟ್ರಾಫಿಕ್ ನಿರ್ವಹಣೆಯಂತಹ ಮಹತ್ತರ ಕಾರ್ಯವನ್ನು ಅರ್ ಎಸ್ ಎಸ್ ಮಾಡಿತ್ತು. ಲಾತೂರು ಭೂಕಂಪ ,ಗುಜರಾತ್ ನೆರೆ ,ಗುಜಾರಾತಿನಲ್ಲಿನ ನೆರೆ ಸುನಾಮಿ ಸಂದರ್ಭದಲ್ಲೂ ಸ್ವಯಂ ಸೇವಕ ಸಂಘ ನೆರವಿಗೆ ಧಾವಿಸಿತ್ತು.

ಇದೀಗ ಕರಾವಳಿಯಲ್ಲಿ ಕೃತಕ ನೆರೆ ಸೃಷ್ಟಿಯಾದ ಸಂದರ್ಭದಲ್ಲೂ ತನ್ನ ಸ್ವಯಂ ಸೇವಕರ ಮೂಲಕ ನೆರವಿಗೆ ಧಾವಿಸಿದೆ.

ಮಂಗಳೂರಿನ RSS ಹಾಗೂ BJP ವತಿಯಿಂದ ಮಂಗಳೂರು ನಗರದಲ್ಲಿ ಮಳೆಗೆ ಒಳಗಾದವರಿಗೆ ತುರ್ತು ಸೇವೆಗಳ ಆರಂಭಲಾಗಿಸಿದ್ದು ,ಸಂತಸ್ತರು
9845226237 ಈ ನಂಬರಿಗೆ ಕರೆ ಮಾಡಲು ವಿನಂತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮಾಡಿಕೊಳ್ಳಲಾಗಿದೆ.

ಕೃಪೆ: ವಾಟ್ಸಪ್ಪ್ ನಲ್ಲಿ ಬಂದದ್ದು