ಬಿಗ್ ನ್ಯೂಸ್: ನೋಟಿನಲ್ಲಿ ಗಾಂಧಿ ಬದಲು ಇವರು ಭಾವಚಿತ್ರ ಬರುತ್ತದೆಯೇ??

ಬಿಗ್ ನ್ಯೂಸ್: ನೋಟಿನಲ್ಲಿ ಗಾಂಧಿ ಬದಲು ಇವರು ಭಾವಚಿತ್ರ ಬರುತ್ತದೆಯೇ??

0

ನೋಟಿನಲ್ಲಿ ರಾಷ್ಟ್ರ ಪಿತ ಮಹಾತ್ಮ ಗಾಂಧಿರವರ ಭಾವಚಿತ್ರ ಮೊದಲಿನಿಂದ ಬಂಡ ವಾಡಿಕೆ ಆಗಾಗ ಬೇರೆ ಸ್ವಾತಂತ್ರ ಹೋರಾಟಗಾರರ ಭಾವಚಿತ್ರಗಳು ಕೂಡ ನೋಟಿನ ಮೇಲೆ ಬರಬೇಕು ಎಂಬುದು ಕೆಲವರ ವಾದವಾಗಿತ್ತು. ಇದರ ಜೊತೆಗೆ ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ ಮತ್ತಿತರ ಭಾವಚಿತ್ರಗಳು ಬರಬೇಕು ಎಂಬುದು ಕೆಲವರ ಅಭಿಪ್ರಾಯವಾಗಿತ್ತು.

ಇದು ಕೇವಲ ಕೆಲವು ಜನರ ಅಭಿಪ್ರಾಯವಾಗಿಯೇ ಉಳಿದುಬಿಟ್ಟಿತು,ಆದರೆ  ಅಖಿಲ ಭಾರತ ಹಿಂದೂ ಮಹಾಸಭಾ ಕೇಂದ್ರ ಸರ್ಕಾರಕ್ಕೆ ಒಂದು ಮನವಿಯನ್ನು ಮಾಡಿದೆ.

ಅಷ್ಟಕ್ಕೂ ಮನವಿಯೇನು?

ಹುಟ್ಟು ಹೋರಾಟಗಾರ ಸಾವರ್ಕರ್ ಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದೂ ಮತ್ತು ಭಾರತದ ಕರೆನ್ಸಿ ನೋಟುಗಳಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಚಿತ್ರ ತೆಗೆದು ಅದರ ಬದಲಿಗೆ ಸಾವರ್ಕರ್ ಭಾವಚಿತ್ರ ಬಳಸಬೇಕೆಂದುಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸಾವರ್ಕರ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಅವರ ಗೌರವಾರ್ಥವಾಗಿ ಕರೆನ್ಸಿ ನೋಟುಗಳಲ್ಲಿ ಅವರ ಚಿತ್ರವಿರಬೇಕೆಂದು ಮಹಾಸಭಾ ಹೇಳಿದೆ. ‘ಹಿಂದುತ್ವ’ ಎಂಬ ಪದವನ್ನು ಮೊದಲು ಬಳಸಲು ಆರಂಭಿಸಿದ್ದು ಸಾವರ್ಕರ್ ಆವರೇ ಆಗಿದ್ದು ಅವರ ಕೃತಿ ‘ಹಿಂದುತ್ವ : ಹೂ ಈಸ್ ಎ ಹಿಂದು’ 1923ರಲ್ಲಿ ಪ್ರಕಟವಾಗಿತ್ತು.

ಆದರೆ ಇದು ಇಷ್ಟಕ್ಕೇ ಮುಗಿಯುವುದಿಲ್ಲ, ಹುಟ್ಟೋ ಹೋರಾಟಗಾರರಾದ ಭಗತ್ ಸಿಂಗ್, ನೇತಾಜಿ ರವರ ಭಾವಚಿತ್ರಗಳು ಬರುವಂತೆ ಆದರೆ ಇನ್ನೂ ಚೆಂದ ಎಂದು ನಮ್ಮ ಭಾವನೆ. ಈ ಮಾತುಗಳಿಗೆ ನಿಮ್ಮ ಬೆಂಬಲವಿದ್ದಲ್ಲಿ ಶೇರ್ ಮಾಡಿ.

ಈ ಮನವಿಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸ ಬೇಕು? ನಿಮ್ಮ ಅಭಿಪ್ರಾಯ ತಿಳಿಸಿ