ಸಚಿವ ಸ್ಥಾನ ವಿಷಯದಲ್ಲಿ ಭಿನ್ನಮತ :ಬರೋಬ್ಬರಿ ೧೧ ಶಾಸಕರು ಬಿಜೆಪಿ ತೆಕ್ಕೆಗೆ?

ಅಧಿಕಾರಕ್ಕೆ ಬಂದಾಗಿಲಿಂದ ಒಂದಲ್ಲ ಒಂದು ವಿಷಯಗಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಬಿಡುಕುಗಳು ಉಂಟಾಗುತ್ತಲೇ ಇವೆ. ಸರ್ಕಾರಕ್ಕೆ ಒಂದಲ್ಲ, . ಮೊದಲು ಬಹುಮತ ನಿರೂಪಿಸುವ ಹೊತ್ತಿನಲ್ಲಿ ಆಪರೇಷನ್ ಕಮಲಕ್ಕೆ ಶಾಸಕರನ್ನು ಸೆಳೆಯುವುದನ್ನು ತಪ್ಪಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹರಸಾಹಸವನ್ನು ಪಟ್ಟಿದ್ದು ತಿಳಿದಿರುವ ವಿಷಯ.

ಈಗ ಗುಪ್ತಚಾರಿ ಇಲಾಖೆ ಕುಮಾರಸ್ವಾಮಿರಾವರಿಗೆ ಶಾಕಿಂಗ್ ಮಾಹಿತಿಯನ್ನು ನೀಡಿದೆ. ಈ ಮಾಹಿತಿ ಕೇವಲ ಕುಮಾರಸ್ವಾಮಿರಾವರಿಗೆ ಅಲ್ಲದೆ ಇಡೀ ಮೈತ್ರಿ ಸರ್ಕಾರಕ್ಕೆ ಅರಗಿಸಿಕೊಳ್ಳಗಾದ ಸತ್ಯವಾಗಿದೆ.

ಅಷ್ಟಕ್ಕೂ ಆ ಮಾಹಿತಿಯಲ್ಲಿ ಏನಿದೆ?

ಒಂದಲ್ಲ ಎರಡಲ್ಲ ಬರೋಬ್ಬರಿ ೧೧ ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಬಿಜೆಪಿ ಸೇರಲು ಸಿದ್ಧರಾಗಿದ್ದರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಹೌದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಕೆಲ ಶಾಸಕರು ಬಿಜೆಪಿಗೆ ಸೇರಿಕೊಳ್ಳುವುದಕ್ಕೆ ಸಿದ್ದತೆ ನಡಿಸಿದ್ದಾರೆ ಎನ್ನಲಾದ ಮಾಹಿತಿಯೊಂದನ್ನು ಗುಪ್ತಚರ ಇಲಾಖೆ ಸಿ.ಎಂ ಹೆಚ್.ಡಿ. ಕುಮಾರ ಸ್ವಾಮಿ ಅವರಿಗೆ ಮಾಹಿತಿ ಕುಮಾರಸ್ವಾಮಿ ರವರಿಗೆ ಶಾಕ್ ನೀಡಿದೆ.

ಮಾಹಿತಿಯ ಪ್ರಕಾರ ಬಿ.ಸಿ ಪಾಟೀಲ್, ಶಿವಾನಂದ ಪಾಟೀಲ್, ಹುಮ್ನಾಬಾದ್, ಕಂಪ್ಲಿ ಗಣೇಶ್, ಶಿವರಾಮ ಹೆಬ್ಬಾರ್, ಬಿ.ಕೆ.ಸಂಗಮೇಶ್ವರ್, ಆನಂದ್ ಸಿಂಗ್, ಪ್ರತಾಪ್ ಗೌಡ ಸೇರಿದಂತೆ ಒಟ್ಟು ಹನ್ನೊಂದು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹಾರುವುದಕ್ಕೆ ಸಿದ್ದರಾಗಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿಯೊಂದನ್ನು ಗುಪ್ತಚರ ಇಲಾಖೆ ಸಿ.ಎಂ ಹೆಚ್.ಡಿಕೆ ಮಾಹಿತಿ ನೀಡಿದೆ ಎನ್ನಲಾಗುತ್ತಿದೆ.

ಇದಲ್ಲದೇ ಸಚಿವ ಸಂಪುಟಲದ ಸಂಕಟದಲ್ಲಿರುವ ಹೆಚ್.ಡಿ.ಕೆಗೆ ಇದೊಂದು ದೊಡ್ಡಮಟ್ಟದಲ್ಲಿ ತಲೆನೋವಾಗಿದ್ದು ತಮ್ಮ ಪಕ್ಷದ ಶಾಸಕರು ಬಿಜೆಪಿಗೆ ಸೇರುವುದಕ್ಕೆ ಸಿದ್ದವಾಗಿದ್ದಾರೆ ಈ ಬಗ್ಗೆ ನೀವು ಸೂಕ್ತವಾಗಿ ಕ್ರಮ ಕೈಗೊಳ್ಳುವಂತೆ ಡಿ.ಸಿ.ಎಂ ಪರಮೇಶ್ವರ್ ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ,

Post Author: Ravi Yadav