ರಾಜ್ಯಕ್ಕೆ ಗುಡ್ ಬೈ ಹೇಳುತ್ತಾರೆಯೇ ಸಿದ್ದರಾಮಯ್ಯನವರು? ಹಾಗಾದರೆ ಮುಂದಿನ ನಡೆ?

ರಾಜ್ಯಕ್ಕೆ ಗುಡ್ ಬೈ ಹೇಳುತ್ತಾರೆಯೇ ಸಿದ್ದರಾಮಯ್ಯನವರು? ಹಾಗಾದರೆ ಮುಂದಿನ ನಡೆ

0

ಕರ್ನಾಟಕ ಚುನಾವಣೆಯಲ್ಲಿ ದೇಶದ್ಯಾಂತ ಸದ್ದು ಮಾಡಿದ ಸಿದ್ದರಾಮಯ್ಯ ರಾಜ್ಯ ರಾಜಕಾರಣಕ್ಕೆ ಗುಡ್​ಬೈ ಹೇಳಲಿದ್ದಾರೆ ಎನ್ನಲಾಗಿದೆ.

ಕರ್ನಾಟಕ ಚುನಾವಣೆ ನಡೆದಿದ್ದು ಮೋದಿ ಮತ್ತು ಸಿದ್ದರಾಮಯ್ಯ ನಡುವೆ ಎಂದು ರಾಷ್ಟ್ರವ್ಯಾಪಿ ಸದ್ದು ಮಾಡಿದ್ದು,  ಕೇಂದ್ರದಲ್ಲಿ ಸವಾಲೊಡ್ಡಲು ಸಿದ್ದರಾಮಯ್ಯರವರನ್ನುಕೇಂದ್ರ ರಾಜಕಾರಣದಲ್ಲಿ ತೊಡಕಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಅ. ಇದೇ ಕಾರಣಕ್ಕೆ ರಾಜ್ಯ ರಾಜಕಾರಣದಲ್ಲಿ ಸೀಮಿತವಾಗಿದ್ದ ಸಿದ್ದರಾಮಯ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

ಸಿದ್ದರಾಮಯ್ಯ ಖದರ್​ಗೆ  ಬೆರಗಾಗಿರುವ ರಾಹುಲ್​ಗಾಂಧಿ, ಸೋನಿಯಾ ಗಾಂಧಿ ಅವರನ್ನು ರಾಷ್ಟ್ರರಾಜಕರಣದಲ್ಲಿ ಇಳಿಸಲು ಸಜ್ಜು ಮಾಡಿದ್ದಾರೆ. ಈಗಾಗಲೇ ಸಿದ್ದರಾಮಯ್ಯಗೆ ಹೈಕಮಾಂಡ್​ನಿಂದಲೇ ಈ ಬಗ್ಗೆ ಸೂಚನೆ ರವಾನೆ ಸ್ವತಃ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಬ್ಬರು ಸಿದ್ದರಾಮಯ್ಯಗೆ ಸಂಸತ್​ ಚುನಾವಣಾ ಸ್ಪರ್ಧೆಗೆ ಮಾನಸಿಕವಾಗಿ ಸಿದ್ಧರಾಗಿ ಅಂತ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ‘

ಸಂಸತ್​ ಚುನಾವಣೆಗೆ ಸಿದ್ದರಾಮಯ್ಯ ಮೈಸೂರು, ಕೊಪ್ಪಳ ಯಾವುದಾದರೂ ಒಂದು ಕಡೆ ಸ್ಪರ್ಧಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ರಾಷ್ಟ್ರರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಸ್ವತಃ ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್​ ಹೈಕಮಾಂಡ್​ಗೆ ಶಿಫಾರಸ್ಸು ಮಾಡಿದ್ದು, ಹೀಗಾಗಿ ಸಿದ್ದರಾಮಯ್ಯರನ್ನ ದೆಹಲಿ ರಾಜಕಾರಣಕ್ಕೆ ಸೋನಿಯಾಆಹ್ವಾನಿಸಿದೆ.

ಇನ್ನು ದೆಹಲಿ ರಾಜಕಾರಣದಲ್ಲಿ ಹೆಸರು ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಎರಡೂವರೆ ವರ್ಷದ ಬಳಿಕ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ.  ಮೈತ್ರಿ ಸರ್ಕಾರ ಗಟ್ಟಿಯಾಗಿ ಮುಂದುವರೆದರೆ 30 ತಿಂಗಳ ಬಳಿಕ ಖರ್ಗೆ ಸಿಎಂ ಆಗುವ ಸಾಧ್ಯತೆ ಇದ್ದು, ದಲಿತ ಕೋಟದ ಅಡಿಯಲ್ಲಿ ಅವರಿಗೆ ಈ ಸ್ಥಾನ ಲಭ್ಯವಾಗಲಿದೆ. ಈ ಮೂಲಕ ದಲಿತರನ್ನ ಸಿಎಂ, ಡಿಸಿಎಂ ಮಾಡಿದ್ದು ಕಾಂಗ್ರೆಸ್ ಎಂಬ ಹೆಗ್ಗಳಿಕೆ ಪಡೆಯಲು ತಂತ್ರ ಕೂಡ ರೂಪಿಸಲಾಗಿದೆ.

ಇದೇ ಕೊನೆಯ ಚುನಾವಣೆಯೆಂದು ಈಗಾಗಲೇ ಸ್ವಯಂ ನಿವೃತ್ತಿ ಎಂದು ಘೋಷಿಸಿಕೊಂಡಿರುವ ಸಿದ್ದರಾಮಯ್ಯ ರಾಜ್ಯರಾಜಕಾರಣದಲ್ಲಿ ಮಾತ್ರ ನನ್ನ ಪಾತ್ರ. ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದಿದ್ದರು. ಆದರೆ ಈಗ ಹೈಕಮಾಂಡ್​ನಿಂದ ಬುಲಾವ್​ ಬಂದಿದ್ದು, ಏನು  ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ..