ಕರುನಾಡಿನ ಸಮಗ್ರ ಅಭಿವೃದ್ಧಿಗೆ ತಥಾಸ್ತು ಎಂದ ಮೋದಿ ಜಿ: ಸಿಎಂರವರಿಗೆ ಮೊದಲ ಭರವಸೆ ನೀಡಿದ ನಮೋ

ಕರುನಾಡಿನ ಸಮಗ್ರ ಅಭಿವೃದ್ಧಿಗೆ ತಥಾಸ್ತು ಎಂದ ಮೋದಿ ಜಿ: ಸಿಎಂರವರಿಗೆ ಮೊದಲ ಭರವಸೆ ನೀಡಿದ ನಮೋ

0

ಪ್ರಧಾನಿ ಮೋದಿ ರವರು ಇಂದು ಕರ್ನಾಟಕದ ಸಿಎಂ ಕುಮಾರಸ್ವಾಮಿರವರನ್ನು ಭೇಟಿಯಾದರು. ಮೋದಿರವರು ಅಭಿವೃದ್ಧಿಯ ವಿಷಯದಲ್ಲಿ ಎಂದು ತಾರತಮ್ಯ ಮಾಡುವುದಿಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇಂದು ಕುಮಾರಸ್ವಾಮಿರವರ ಭೇಟಿಯಿಂದ ಮತ್ತೊಮ್ಮೆ ಸಾಬೀತಾಯಿತು.

ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಸಿಎಂರವರನ್ನು ಭೇಟಿ ಮಾಡಿ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕೈ ಜೋಡಿಸೋಣ ಎಂದು ಮಾತುಕತೆ ನಡೆಸಿ ಕುಮಾರ ಸ್ವಾಮಿರವರ ಬೇಡಿಕೆಯನ್ನು ಈಡೇರಿಸುವುದಾಗಿ ಮೋದಿರವರು ಭರವಸೆಯನ್ನು ನೀಡಿದ್ದಾರೆ.

ಅಷ್ಟಕ್ಕೂ ಕುಮಾರಸ್ವಾಮಿರವರ ಬೇಡಿಕೆ ಏನಾಗಿತ್ತು?

ನಾಡಿನ ಸಮಗ್ರ ಅಭಿವೃದ್ದಿಗೆ ಕೈ ಜೋಡಿಸಿ ಮತ್ತು ಶಾಖೋತ್ಪನ್ನ ಘಟಕದಲ್ಲಿ ಎರಡು ದಿನಕ್ಕೆ ಆಗುವಷ್ಟು ಸ್ಟಾಕ್ ಇದೆ. ಹೀಗಾಗಿ ಕಲ್ಲಿದ್ದಲು ಪೂರೈಸಿ ಎಂದು ಮೋದಿರವರನ್ನು ಕುಮಾರಸ್ವಾಮಿ ರವರು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಮೋದಿರವರು ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಭರವಸೆ ಈಡೇರಿಸುತ್ತಾರೆ,ಎಂದು ನಂಬಿಕೆ ಇದೆ ಎಂದು ಕುಮಾರಸ್ವಾಮುರವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಜಕೀಯದ ಅನುಭವದ ಹಿನ್ನೆಲೆಯಲ್ಲಿ ಮೋದಿಯವರು ಸಲಹೆ ನೀಡಿದ್ದಾರೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದು ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.