ಮೋದಿರವರ ಅತಿ ದೊಡ್ಡ ಸಾಧನೆ ಯಾವುದು? ಅಮಿತ್ ಶಾ ಉತ್ತರಿಸಿದ್ದು ಹೀಗೆ

ಓದುಗರು ಕ್ಷಮಿಸಬೇಕು, ಮೋದಿ ರವರ ಎಲ್ಲ ಸಾಧನೆಗಳನ್ನು ನಾವು ಇಲ್ಲಿ ಬರೆದರೆ ಕೆಲವು ದಿನಗಳು ಆದರೂ ಮುಗಿಯುವುದಿಲ್ಲ. ಅದನ್ನು ಬಣ್ಣಿಸುತ್ತಾ ಹೋದರೆ ಕಾಲವು ಸಾಕಾಗುವುದಿಲ್ಲ. ಬಹುಶಃ ಪತ್ರಕರ್ತರು ಹೀಗೆ ಯೋಚಿಸಿ ಅಮಿತ್ ಶಾ ರವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ನಿಮ್ಮ ಪ್ರಕಾರ ಮೋದಿ ರವರ ಬಹುದೊಡ್ಡ ಸಾಧನೆ ಯಾವುದು ಎಂದು?

ಇದಕ್ಕೆ ಅಮಿತ್ ಶಾ ರವರ ಉತ್ತರ ಇಲ್ಲಿ ನೋಡಿ !

ನರೇಂದ್ರ ಮೋದಿ ರವರು ದೇಶಕ್ಕೆ ಕಂಟಕವಾಗಿದ್ದ ವಂಶ ರಾಜಕಾರಣವನ್ನು ಕೊನೆಗೊಳಿಸಿದ್ದಾರೆ ಅದು ಮೊದಲನೆಯ ದೊಡ್ಡ ಸಾಧನೆ ಎಂದರು. ನರೇಂದ್ರ ಮೋದಿ ಅವರು ತುಷ್ಟೀಕರಣ, ವಂಶ ರಾಜಕಾರಣ, ಜಾತಿವಾದಕ್ಕೆ ಅಂತ್ಯ ಹಾಡಿದ್ದಾರೆ ಹಾಗೂ ರಾಜಕೀಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ಶಾ ಹೇಳಿದರು.

ಮತ್ತು ಸುದೀರ್ಘ ಅವಧಿಯಿಂದ ನನೆಗುದಿಗೆ ಬಿದ್ದಿದ್ದ ‘ಒಂದು ಶ್ರೇಣಿ ಒಂದು ಪಿಂಚಣಿ (ಒಆರ್‌ಒಪಿ)’ ಯೋಜನೆಯನ್ನು ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಎನ್‌ಡಿಎ ಸರ್ಕಾರ ಅನುಷ್ಠಾನಗೊಳಿಸಿದೆ ಎಂದು ಹೇಳಿದರು.

Post Author: Ravi Yadav